ರೋಟರಿಯಿಂದ ಸ್ಕಾಲರ್​ಶಿಪ್ ವಿತರಣೆ rotary

Rotary ರೋಟರಿ ಕ್ಲಬ್ ಹುಬ್ಬಳ್ಳಿ ವತಿಯಿಂದ ಸ್ಕಾಲರ್​ಶಿಪ್ ಪಡೆದ ವಿದ್ಯಾರ್ಥಿಗಳೊಂದಿಗೆ ಸಿಎ ಡಾ. ಎನ್.ಎ. ಚರಂತಿಮಠ, ನಾರಾಯಣರಾವ ತಾತುಸ್ಕರ, ಎಂ.ಕೆ. ಪಾಟೀಲ, ಎಸ್.ವಿ. ಕಡಬಿ ಹಾಗೂ ಇತರರಿದ್ದಾರೆ.
Rotary ರೋಟರಿ ಕ್ಲಬ್ ಹುಬ್ಬಳ್ಳಿ ವತಿಯಿಂದ ಸ್ಕಾಲರ್​ಶಿಪ್ ಪಡೆದ ವಿದ್ಯಾರ್ಥಿಗಳೊಂದಿಗೆ ಸಿಎ ಡಾ. ಎನ್.ಎ. ಚರಂತಿಮಠ, ನಾರಾಯಣರಾವ ತಾತುಸ್ಕರ, ಎಂ.ಕೆ. ಪಾಟೀಲ, ಎಸ್.ವಿ. ಕಡಬಿ ಹಾಗೂ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಹೆಚ್ಚಿನ ಅಂಕಗಳನ್ನು ಪಡೆದರೆ ಹೆಚ್ಚಿನ ಮೊತ್ತದ ಸ್ಕಾಲರಶಿಪ್
  • 3.29 ಲಕ್ಷ ರೂ. ಸ್ಕಾಲರ್​ಶಿಪ್
  • ಪಿಯುಸಿ ಮತ್ತು ಪದವಿ ಕಲಿಯುತ್ತಿರುವ 28 ವಿದ್ಯಾರ್ಥಿಗಳಿಗೆ ಸ್ಕಾಲರ್​ಶಿಪ್
ಸಿಎ ಡಾ. ಎನ್.ಎ. ಚರಂತಿಮಠ ಮತ್ತು ಶಕ್ತಿ ಗ್ರುಪ್ ಆಫ್ ಕಂಪನಿಯ ಅಧ್ಯಕ್ಷ ನಾರಾಯಣರಾವ ತಾತುಸ್ಕರ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ರೋಟರಿ ಕ್ಲಬ್ ಹುಬ್ಬಳ್ಳಿ ಚಾರಿಟಬಲ್ ಟ್ರಸ್ಟ್ ಚೇರ್ಮನ್ ಎಂ.ಕೆ. ಪಾಟೀಲ, ವಿದ್ಯಾರ್ಥಿಗಳಿಗೆ ಚೆಕ್ ವಿತರಿಸಿದರು.
ಅಧ್ಯಕ್ಷತೆ ವಹಿಸಿದ್ದ ಎಸ್.ವಿ. ಕಡಬಿ ಮಾತನಾಡಿ, ವಿದ್ಯಾರ್ಥಿಗಳು ಇನ್ನು ಹೆಚ್ಚಿನ ಅಂಕಗಳನ್ನು ಪಡೆದರೆ ಪ್ರತಿ ವರ್ಷ ಇನ್ನು ಹೆಚ್ಚಿನ ಮೊತ್ತದ ಸ್ಕಾಲರಶಿಪ್ ನೀಡುವುದಾಗಿ ತಿಳಿಸಿದರು.
ರೋಟರಿ ಕ್ಲಬ್ ಸದಸ್ಯರಾದ ಪ್ರೇಮಚಂದ್ರ, ಚೇತನ ಸಂಗವಿ, ಪ್ರಕಾಶರಾವ, ಮೋಹಿತ ದಂಡ, ನಿತೀನ ಶೆನೈ, ಅಕ್ಷಯ ಮೆಹರವಾಡೆ, ವಿದ್ಯಾಧರ ಯಲಗುಚ್ಛ, ಉಪಸ್ಥಿತರಿದ್ದರು. ರಿಯಾಜ ಬಸರಿ ನಿರೂಪಿಸಿದರು. ಅಮರ ಸೂಜಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net