ಹುಬ್ಬಳ್ಳಿಯ ಪ್ರಗತಿಪರ ರೈತ ಗುರುಸಿದ್ದಪ್ಪ, ಚಾಲಕ ಬಸವರಾಜ ಮಾಟೊಳ್ಳ್ಳಿ, ಪ್ರಗತಿಪರ ರೈತ ಹಾಗೂ ಉದ್ಯಮಿ ವಿಷ್ಣು ಅವರನ್ನು ಸನ್ಮಾನಿಸಲಾಯಿತು. ನಿರ್ಮಿತಿ ಕೇಂದ್ರದ ಇಂಜಿನಿಯರ್ ಬೈಲಪ್ಪ ಮತ್ತು ಪ್ರಾಧ್ಯಾಪಕ ಬಿ.ವೈ. ಬಂಡಿವಡ್ಡರ ಅತಿಥಿಗಳಾಗಿ ಭಾಗವಹಿಸಿದ್ದರು. ಕಲ್ಯಾಣ ಕರ್ನಾಟಕ ಭಾಗದ ಜಲ ಸಂಪನ್ಮೂಲ ಇಲಾಖೆಯ ಇಂಜಿನಿಯರ್‌ಗಳು, ತುಂಗಭದ್ರಾ ಯೋಜನೆಯ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಯ ರೈತರು ಮತ್ತು ವಾಲ್ಮಿ ಸಂಸ್ಥೆಯ ಅಧಿಕಾರಿ, ಸಿಬ್ಬಂದಿ ಭಾಗವಹಿಸಿದ್ದರು.