ಎಸ್​ಎಎಸ್​ಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಇಂದು Executive

Executive ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಎಸ್​ಎಎಸ್​ಎಸ್ ರಾಜ್ಯಾಧ್ಯಕ್ಷ ಡಾ. ಎಸ್. ಜಯರಾಂ,
Executive ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಎಸ್​ಎಎಸ್​ಎಸ್ ರಾಜ್ಯಾಧ್ಯಕ್ಷ ಡಾ. ಎಸ್. ಜಯರಾಂ,
Published on

ಪ್ರಮುಖ ಮುಖ್ಯಾಂಶಗಳು

  • ಹುಬ್ಬಳ್ಳಿ ಶಿರೂರ ಪಾರ್ಕ್​ನ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಸಭೆ
  • ನದಿ ದಂಡೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲಾಗಿದೆ
  • ಅಯ್ಯಪ್ಪ ಮಾಲಾಧಾರಿಗಳಿಗೆ ಪ್ರವಾಸದಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳುವುದು,
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಎಸ್​ಎಎಸ್​ಎಸ್ ರಾಜ್ಯಾಧ್ಯಕ್ಷ ಡಾ. ಎಸ್. ಜಯರಾಂ, ಪ್ರತಿ ಆರು ತಿಂಗಳಿಗೊಮ್ಮೆ ಸಮಾಜಂನ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ವಿವಿಧ ಜಿಲ್ಲೆಗಳಲ್ಲಿ ನಡೆಸಲಾಗುತ್ತದೆ. ರಾಷ್ಟ್ರವ್ಯಾಪಿ ಉತ್ತಮ ಸಮಾಜವನ್ನು ನಿರ್ವಿುಸುವುದೇ ಇದರ ಗುರಿ ಎಂದು ತಿಳಿಸಿದರು.
ಹಿರಿಯ ಗುರುಸ್ವಾಮಿಗಳು ಹಾಗೂ ಸಮಾಜಂನ ರಾಷ್ಟ್ರೀಯ ಉಪಾಧ್ಯಕ್ಷ ಆನಂದ ವಾಮನ ನಾಯಕ ಅವರು ಗೋ ಪೂಜೆ ನೆರವೇರಿಸುವರು. ಎಸ್​ಎಎಸ್​ಎಸ್ ಹಿರಿಯ ಮಾರ್ಗದರ್ಶಕರಾದ ಸೇತು ಮಾಧವನ್ ಧ್ವಜಾರೋಹಣ ನೆರವೇರಿಸುವರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ರಾಷ್ಟ್ರೀಯ ಕಾರ್ಯಕಾರಿಣಿ ಉದ್ಘಾಟಿಸುವರು. ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಶಾಸಕ ಮಹೇಶ ಟೆಂಗಿನಕಾಯಿ, ರಾಜ್ಯ ಎಸ್​ಎಎಸ್​ಎಸ್ ಸಂಯೋಜಕ ಪಿ.ಎಸ್. ಪ್ರಕಾಶ, ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ, ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ, ಎಸ್​ಎಎಸ್​ಎಸ್ ಮಾರ್ಗದರ್ಶಕ ಎ.ಆರ್. ಮೋಹನ ಪಾಲ್ಗೊಳ್ಳುವರು. ರಾಷ್ಟ್ರೀಯ ಅಧ್ಯಕ್ಷ ಎಸ್.ಜೆ. ಆರ್. ಕುಮಾರ ಅಧ್ಯಕ್ಷತೆ ವಹಿಸುವರು.
ಕಳೆದ ಆರು ತಿಂಗಳಲ್ಲಿ ಸಮಾಜಂನಿಂದ ನಡೆದಿರುವ ಕಾರ್ಯಗಳು ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಿರುವ ಕೆಲಸಗಳ ಬಗ್ಗೆ ಸಭೆಯಲ್ಲಿ ರ್ಚಚಿಸಲಾಗುವುದು. ವಿವಿಧ ರಾಜ್ಯಗಳ ಪದಾಧಿಕಾರಿಗಳು ಭಾಗವಹಿಸುವರು ಎಂದರು.
ಶಬರಿಮಲೈ ಅಯ್ಯಪ್ಪ ಮಾಲಾಧಾರಿಗಳಿಗೆ ಪ್ರವಾಸದಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳುವುದು, ಅಗತ್ಯ ಸೌಲಭ್ಯ ಒದಗಿಸುವುದು ಹಾಗೂ ಇನ್ನಿತರ ಕಾರ್ಯಗಳನ್ನು ಮಾಡಲಾಗುತ್ತಿದೆ. ಪಂಪಾ ನದಿಯಲ್ಲಿ ಬಟ್ಟೆಗಳನ್ನು ಬಿಟ್ಟು ಬರುವುದರಿಂದ ನದಿ ದಂಡೆ ಕಲುಷಿತಗೊಳ್ಳುತ್ತಿತ್ತು. ನಮ್ಮ ಸಂಘಟನೆ ಕರೆಯ ಮೇರೆಗೆ ಬಟ್ಟೆಗಳನ್ನು ಬಿಟ್ಟುಬರುವ ಕಾರ್ಯ ಸ್ಥಗಿತಗೊಂಡಿದೆ. ಆ ಮೂಲಕ ನದಿ ದಂಡೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲಾಗಿದೆ ಎಂದರು.
ಅಯ್ಯಪ್ಪ ಮಾಲಾಧಿಕಾರಿಗಳು ಇರುಮುಡಿಯಲ್ಲಿ ಅರಿಷಿಣ, ಕುಂಕುಮ ಸೇರಿದಂತೆ ಇನ್ನಿತರ ಪೂಜಾ ಸಾಮಗ್ರಿಗಳಿಗಾಗಿ ಹಲವಾರು ಪ್ಲಾಸ್ಟಿಕ್ ಸಣ್ಣ ಪಾಕೆಟ್​ಗಳನ್ನು ತೆಗೆದುಕೊಂಡು ಹೋಗುತ್ತಿದ್ದರು.
ಇದೀಗ, ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಕಾಗದದಲ್ಲಿ ಈ ಸಾಮಗ್ರಿಗಳನ್ನು ಕಟ್ಟಿಕೊಂಡು ಹೋಗಲಾಗುತ್ತಿದೆ ಎಂದರು.
ಅಯ್ಯಪ್ಪ ಮಾಲಾಧಿಕಾರಿಗಳ ಹಲವಾರು ಬೇಡಿಕೆಗಳನ್ನು ಕೇರಳದ ಈ ಹಿಂದಿನ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ, ಬೇಡಿಕೆಗಳು ಈಡೇರಿರಲಿಲ್ಲ. ಇದೀಗ, ಹೊಸ ಸರ್ಕಾರದ ಎದುರು ಮತ್ತೆ ಬೇಡಿಕೆ ಮಂಡಿಸಲಾಗುವುದು ಎಂದರು.
ಎಸ್​ಎಎಸ್​ಎಸ್ ಅನ್ನಪ್ರಸಾದ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಟಿ.ಬಿ. ಶೇಖರ, ಸಮಿತಿ ಸದಸ್ಯ ಹಾಗೂ ಸ್ವರ್ಣ ಸಮೂಹ ಸಂಸ್ಥೆಯ ಎಂಡಿ ಡಾ. ವಿ.ಎಸ್.ವಿ. ಪ್ರಸಾದ ಸುದ್ದಿಗೋಷ್ಠಿಯಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net