sana school parliament ಸನಾ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿ ಸಂಸತ್ ಪದಗ್ರಹಣ
sana school parliament ಹುಬ್ಬಳ್ಳಿಯ ಸನಾ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು. ಎಸಿಪಿ ಶಿವಾನಂದ ಚಲವಾದಿ, ಎಂ.ಎಂ. ಮಳಗಿ, ಅಶ್ರಲಿ ಬಶೀರ್ ಅಹ್ಮದ್, ಮೊಹಮ್ಮದ ಅಯೂಬ ಸವಣೂರ, ಡಾ. ಅಬ್ದುಲ್ ರಜಾಕ್ ಇತರರು ಇದ್ದರು.
Published on:
Copied
Follow Us
ಹುಬ್ಬಳ್ಳಿ: sana school parliament ಇಲ್ಲಿಯ ಭೈರಿದೇವರಕೊಪ್ಪ ಶಾಂತಿನಿಕೇತನದಲ್ಲಿರುವ ಸನಾ ಪಬ್ಲಿಕ್ ಶಾಲೆಯಲ್ಲಿ ನೂತನ ವಿದ್ಯಾರ್ಥಿ ಸಂಸತ್ತಿನ ಪದಗ್ರಹಣ ಸಮಾರಂಭ ನಡೆಯಿತು. ಹೌಸ್ ಕ್ಯಾಪ್ಟನ್, ವೈಸ್-ಕ್ಯಾಪ್ಟನ್ ಹಾಗೂ ಮಂತ್ರಿಗಳು ಪದಗ್ರಹಣ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಅಧ್ಯಕ್ಷ ಎಂ.ಎಂ. ಮಳಗಿ ಅವರು, ನಾಯಕತ್ವ ಎಂಬುದು ಪ್ರಾಮಾಣಿಕತೆ, ಶಿಸ್ತು ಮತ್ತು ಬದ್ಧತೆಯಿಂದ ಮುನ್ನಡೆಸಬೇಕಾದ ಒಂದು ಸೌಭಾಗ್ಯ ಎಂದು ಹೇಳಿದರು.
ಮ್ಯಾನೇಜಿಂಗ್ ಟ್ರಸ್ಟಿ ಅಶ್ರಫ್ ಅಲಿ ಬಶೀರ್ ಅಹಮದ್, ಎಕ್ಸಿಕ್ಯೂಟಿವ್ ಟ್ರಸ್ಟಿ ಮೊಹಮ್ಮದ್ ಅಯೂಬ್ ಸವಣೂರ, ಸಿಇಒ ಡಾ. ಅಬ್ದುಲ್ ರಜಾಕ್ ಹೊನ್ನಟಗಿ, ಟ್ರಸ್ಟಿಗಳಾದ ಸರ್ಫರಾಜ್ ಮತ್ತು ಅತ್ತಾರ್ ಉಪಸ್ಥಿತರಿದ್ದರು.