samutkarsha ಹುಬ್ಬಳ್ಳಿಯಲ್ಲಿ ಸಮುತ್ಕರ್ಷ ದಶಮಾನೋತ್ಸವ ಸಮಾರಂಭದಲ್ಲಿ ಪ್ರಾಂಶುಪಾಲ ಸಂದೀಪ ಬೂದಿಹಾಳ ಮಾತನಾಡಿದರು. ಜೀತೇಂದ್ರ, ಡಾ. ಬಸವರಾಜ ಅನಾಮಿ, ಕಿರಣ ಚಿತ್ರಗಾರ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶ್ರದ್ಧಾ -ಮೇಧಾ ಯೋಜನೆ ಸಮಾರೋಪ
ಹುಬ್ಬಳ್ಳಿ: samutkarsha ಇಲ್ಲಿಯ ಬಿವಿಬಿ ಕ್ಯಾಂಪಸ್ನಲ್ಲಿರುವ ಸಮುತ್ಕರ್ಷ ಸಂಸ್ಥೆಯ ದಶಮಾನೋತ್ಸವ ಹಾಗೂ ಶ್ರದ್ಧಾ- ಮೇಧಾ ತರಬೇತಿ ಯೋಜನೆಗಳ ಸಮಾರೋಪ ಕಾರ್ಯಕ್ರಮ ಶನಿವಾರ ನೆರವೇರಿತು.
ಶಿಕ್ಷಣ ಮತ್ತು ವ್ಯಕ್ತಿತ್ವ ವಿಕಾಸ ಕುರಿತು ಅಮೂಲ್ಯ ವಿಚಾರಗಳನ್ನು ಹಂಚಿಕೊಂಡ ಗಣ್ಯರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಸಂಸ್ಥೆಯ ಮಾರ್ಗದರ್ಶಕ ಜಿತೇಂದ್ರ ಅವರು ಮಾತನಾಡಿ, ಸಮುತ್ಕರ್ಷ ದಶಕದ ಪಯಣವನ್ನು ವಿವರಿಸಿದರು. ಸಮುದಾಯ ಸೇವೆ ಮತ್ತು ಅಭಿವೃದ್ಧಿಗೆ ಸಮುತ್ಕರ್ಷ ನಿರಂತರ ತನ್ನ ಬದ್ಧತೆ ಪ್ರದರ್ಶಿಸಲಿದೆ ಎಂದರು.
ಕನಕದಾಸ ಪಿಯು ಕಾಲೇಜಿನ ಪ್ರಾಂಶುಪಾಲ ಸಂದೀಪ ಬೂದಿಹಾಳ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಜಾರಿಯಾಗಿರುವುದರಿಂದ ವಿದ್ಯಾರ್ಥಿಗಳು ಕೌಶಲ ಬೆಳೆಸಿಕೊಳ್ಳುವುದು ಅಗತ್ಯವಾಗಿದೆ. ಕೌಶಲದಿಂದ ಮಾತ್ರ ಭವಿಷ್ಯದಲ್ಲಿ ಉದ್ಯೋಗಗಳು ಸೃಷ್ಟಿಯಾಗಲು ಸಾಧ್ಯವಾಗಲಿದೆ ಎಂದರು.
ಅತಿಥಿಗಳಾದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಕುಲಸಚಿವ ಡಾ. ಬಸವರಾಜ ಅನಾಮಿ ಅವರು, ಜೀವನದಲ್ಲಿ ಮಾರ್ಗದರ್ಶಿಯಾದ ಮತ್ತು ಆದರ್ಶ ವ್ಯಕ್ತಿಗಳ ಅಗತ್ಯತೆ ಬಹಳಷ್ಟಿದೆ. ವಿದ್ಯಾರ್ಥಿಗಳು ಅವರಿಂದ ಪ್ರೇರಣೆ ಪಡೆಯುತ್ತಾರೆ ಎಂದರು.
ವಿದ್ಯಾರ್ಥಿಗಳು ಮತ್ತು ಪೋಷಕರು ಸಮುತ್ಕರ್ಷದೊಂದಿಗಿನ ತಮ್ಮ ಅನುಭವಗಳನ್ನು ಹಂಚಿಕೊಂಡು. ಸಮುತ್ಕರ್ಷ ತಮ್ಮ ಜೀವನದಲ್ಲಿ ತಂದಿರುವ ಸಕಾರಾತ್ಮಕ ಬದಲಾವಣೆಗಳನ್ನು ವಿವರಿಸಿದರು.