samsi urban bank ಸದಸ್ಯರಿಗೆ ಶೇ. 21ರಷ್ಟು ಡಿವಿಡೆಂಡ್

samsi urban bank ಹುಬ್ಬಳ್ಳಿ ತಾಲೂಕಿನ ಸಂಶಿ ಗ್ರಾಮದಲ್ಲಿ ಇತ್ತೀಚೆಗೆ ಸಂಶಿ ಅರ್ಬನ್ ಕೋಆಪ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್‌ನ 28ನೇ ಸಂಸ್ಥಾಪನಾ ದಿನ ಮತ್ತು ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಲಾಯಿತು.
samsi urban bank ಹುಬ್ಬಳ್ಳಿ ತಾಲೂಕಿನ ಸಂಶಿ ಗ್ರಾಮದಲ್ಲಿ ಇತ್ತೀಚೆಗೆ ಸಂಶಿ ಅರ್ಬನ್ ಕೋಆಪ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್‌ನ 28ನೇ ಸಂಸ್ಥಾಪನಾ ದಿನ ಮತ್ತು ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಲಾಯಿತು.
Published on

ಹುಬ್ಬಳ್ಳಿ: ಸಂಶಿ ಅರ್ಬನ್ ಕೋಆಪ್ ಕ್ರೆಡಿಟ್

samsi urban bank

ಸೊಸೈಟಿ ಲಿಮಿಟೆಡ್‌ನ 28ನೇ ಸಂಸ್ಥಾಪನಾ ದಿನ ಮತ್ತು ವಾರ್ಷಿಕ ಮಹಾಸಭೆಯನ್ನು ತಾಲೂಕಿನ ಸಂಶಿ ಗ್ರಾಮದ ಮುಖ್ಯ ಕಚೇರಿಯಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿತ್ತು.

ಸಂಸ್ಥೆಯ ಸದಸ್ಯರಿಗೆ ಶೇ. 21ರಷ್ಟು ಡಿವಿಡೆಂಡ್ ಘೋಷಿಸಲಾಯಿತು. ಪ್ರಸಕ್ತ ವರ್ಷದಲ್ಲಿ 378 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸಿದ್ದು, ಠೇವಣಿ 51.80 ಕೋಟಿ ರೂ., ಸಾಲ 33.18 ಕೋಟಿ ರೂ., 63.40 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. ಧಾರವಾಡ ಜಿಲ್ಲಾದ್ಯಂತ ಒಟ್ಟು 7 ಶಾಖೆಗಳನ್ನು ಹೊಂದಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.
ಇದಕ್ಕೂ ಮೊದಲು ಸಂಸ್ಥಾಪಕರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಂಸ್ಥೆ ಅಧ್ಕಕ್ಷ ಎ.ಬಿ. ಉಪ್ಪಿನ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಂ.ಎಚ್. ನಾಯ್ಕರ, ನಿರ್ದೇಶಕರಾದ ವಿ.ಡಿ. ಅಕ್ಕಿ, ಎಸ್.ಸಿ. ಹತ್ತಿ, ಎನ್.ಎಸ್. ಯರೇಶೀಮಿ, ಎಸ್.ಎಸ್. ಕಮ್ಮಾರ, ಐ.ಎಂ. ಕೋರಿ, ಎಲ್.ವಿ. ಕೋರಿ, ಎಂ.ಆರ್. ಯಲ್ಲರಡ್ಡಿ, ಜಿ.ಬಿ. ಸೊರಟೂರ, ಎಂ.ಎನ್. ಪಡತೇರ, ವಿ.ಡಿ. ಸುಂಕದ, ವ್ಯವಸ್ಥಾಪಕ ಎಸ್.ಎಸ್. ಹತ್ತಿ, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net