Samanvaya fest ಬದುಕು ಬಂಗಾರವಾಗಲು ಪರಿಶ್ರಮ ಅಗತ್ಯ

Samanvay fest ಹುಬ್ಬಳ್ಳಿಯ ಐಬಿಎಂಆರ್​ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಮನ್ವಯ ಕಲೆ, ಶಿಕ್ಷಣ ಹಾಗೂ ಕಾನೂನು ವಿಭಾಗಗಳ ಸಾಮರಸ್ಯ ಉತ್ಸವದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಡಾ. ಎ.ಎಂ. ಖಾನ್​, ವಿನಯಚಂದ್ರ ಮಹೇಂದ್ರಕರ, ಡಾ. ಎಚ್​.ವಿ. ಬೆಳಗಲಿ, ಪ್ರೊ. ಅಣ್ಣಪ್ಪ ಕೆ, ಡಾ. ಅರುಣ ಶೆಟ್ಟಿ, ಡಾ. ಶಂಕರ ಚಕ್ರವರ್ತಿ ಇತರರು ಇದ್ದರು.
Samanvay fest ಹುಬ್ಬಳ್ಳಿಯ ಐಬಿಎಂಆರ್​ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಮನ್ವಯ ಕಲೆ, ಶಿಕ್ಷಣ ಹಾಗೂ ಕಾನೂನು ವಿಭಾಗಗಳ ಸಾಮರಸ್ಯ ಉತ್ಸವದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಡಾ. ಎ.ಎಂ. ಖಾನ್​, ವಿನಯಚಂದ್ರ ಮಹೇಂದ್ರಕರ, ಡಾ. ಎಚ್​.ವಿ. ಬೆಳಗಲಿ, ಪ್ರೊ. ಅಣ್ಣಪ್ಪ ಕೆ, ಡಾ. ಅರುಣ ಶೆಟ್ಟಿ, ಡಾ. ಶಂಕರ ಚಕ್ರವರ್ತಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಾನಪದ ವಿವಿ ಕುಲಪತಿ ಡಾ. ಭಾಸ್ಕರ್​ ಅಭಿಮತ
  • ಐಬಿಎಂಆರ್ ನಲ್ಲಿ ಸಮನ್ವಯ ಉತ್ಸವಕ್ಕೆ ಭರ್ಜರಿ ಸ್ಪಂದನೆ
ಹುಬ್ಬಳ್ಳಿ: ವಿದ್ಯಾರ್ಥಿ ಜೀವನವು ಗೋಲ್ಡನ್​ ಲೈಫ್​ ಎಂದು ಹೇಳಲಾಗುತ್ತದೆ. ಆದರೆ, ತಮ್ಮ ಬದುಕು ಬಂಗಾರವಾಗಬೇಕಾದರೆ ಪರಿಶ್ರಮ ಪಟ್ಟು ಓದಲೇಬೇಕು, ಒಂದಿಷ್ಟು ತ್ಯಾಗ ಇರಲೇಬೇಕು ಎಂದು ಜಾನಪದ ವಿಶ್ವವಿದ್ಯಾಲಯ ಕುಲಪತಿ ಡಾ. ಟಿ.ಎಂ. ಭಾಸ್ಕರ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಇಲ್ಲಿಯ ಐಬಿಎಂಆರ್​ ಕಾಲೇಜಿನಲ್ಲಿ ಕಲೆ, ಶಿಕ್ಷಣ ಹಾಗೂ ಕಾನೂನು ವಿಭಾಗದ ವಿದ್ಯಾರ್ಥಿಗಳಿಗೆ ಮಂಗಳವಾರ ಆಯೋಜಿಸಿದ್ದ ಸಮನ್ವಯ ಸಾಮರಸ್ಯ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಗುರು ಹಿರಿಯರನ್ನು ಗೌರವಿಸಬೇಕು, ದೇಶವನ್ನು ಪ್ರೀತಿಸಬೇಕು. ಭಾರತೀಯ ಸಂವಿಧಾನವು ಸರ್ವಜನಾಂಗದ ಶಾಂತಿಯ ತೋಟದಂತೆ ದೇಶದ ಐಕ್ಯತೆ, ಸಾಮರಸ್ಯ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ದೇಶದ ಜನರಲ್ಲಿ ಸಾಮರಸ್ಯ ಬಹಳ ಮಹತ್ವದ್ದಾಗಿದೆ ಎಂದರು.
ಅತಿಥಿಯಾಗಿದ್ದ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡು ದೇಶದ ಸಂಸ್ಕೃತಿ, ಪರಂಪರೆ ಉಳಿಸುವ ಕೆಲಸ ಮಾಡಬೇಕು ಎಂದರು.
ಡಿಸಿಪಿ ಶ್ರುತಿ ಎನ್​.ಎಸ್​. ಮಾತನಾಡಿ, ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಬೇಕು. ನಿಸ್ವಾರ್ಥ ಭಾವನೆಯಿಂದ ಸೇವೆ ಮಾಡಿದರೆ ಅದರ ಮಹತ್ವ ಹೆಚ್ಚುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಐಬಿಎಂಆರ್​ ಸಮೂಹದ ಅಧ್ಯಕ್ಷ ವಿನಯಚಂದ್ರ ಮಹೇಂದ್ರಕರ ಮಾತನಾಡಿ, ಬಿಎ, ಬಿ.ಇಡಿ ಹಾಗೂ ಕಾನೂನು ವಿದ್ಯಾರ್ಥಿಗಳ ತ್ರಿವೇಣಿ ಸಂಗಮವಾದಂತಾಗಿದೆ. ಸಮನ್ವಯ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಬೆಳೆಸಲಿದೆ ಎಂದರು.
ಟ್ರಸ್ಟಿ ಸುಮಾ ಮಹೇಂದ್ರಕರ, ಸಿಇಒ ಡಾ. ಇಗ್ನೇಶ ಸಕ್ರಿ, ಡಾ. ಎಸ್​.ವಿ. ಸೋಗಿ, ಇತರರು ಪಾಲ್ಗೊಂಡಿದ್ದರು.
ಪ್ರೊ. ಅಣ್ಣಪ್ಪ ಕೊರವರ ಸ್ವಾಗತಿಸಿದರು. ಓಂಕಾರೇಶ್ವರಿ ಕಾರ್ಯಕ್ರಮ ನಿರೂಪಿಸಿದರು. ಡಾ. ಶಂಕರ ಚಕ್ರವರ್ತಿ, ಪ್ರೊ. ಶಾರದಾ ಡಂಬಳ, ಸನಾ ಬಳ್ಳಾರಿ ಅತಿಥಿಗಳನ್ನು ಪರಿಚಯಿಸಿದರು. ಡಾ. ಅರುಣ ಶೆಟ್ಟಿ ವಂದಿಸಿದರು.

ಸಮಾರೋಪ:

ಸಂಜೆ ನಡೆದ ಸಮಾರೋಪದಲ್ಲಿ ಕವಿವಿ ಕುಲಪತಿ ಡಾ. ಎ.ಎಂ. ಖಾನ್​ ಅವರು, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ ಇರಬೇಕು. ಗುರಿಯತ್ತ ಸಾಗುವ ಅಚಲ ನಿರ್ಧಾರವೂ ಮುಖ್ಯ ಎಂದು ಅವರು ಹೇಳಿದರು.
ಅತಿಥಿಯಾಗಿದ್ದ ಕಾನೂನು ವಿವಿ ಸಿಂಡಿಕೇಟ್​ ಸದಸ್ಯ ಡಾ. ಎಚ್​.ವಿ. ಬೆಳಗಲಿ ಅವರು, ಶಿಕ್ಷಕರು ಕಲೆ, ಸಂಸ್ಕೃತಿಯನ್ನು ಕರಗತ ಮಾಡಿಕೊಂಡು ಅದನ್ನು ಮಕ್ಕಳಿಗೂ ಬೋಧಿಸುವ ಕಾರ್ಯ ಮಾಡಬೇಕು ಎಂದರು.
ವಿವಿಧೆಡೆಯಿಂದ ಆಗಮಿಸಿ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net