ಹುಬ್ಬಳ್ಳಿಯ ಜೆ.ಎಸ್.ಎಸ್ ಸಕ್ರಿ ಕಾನೂನು ಮಹಾವಿದ್ಯಾಲಯದಲ್ಲಿ sakri law college ಇತ್ತೀಚೆಗೆ ಏರ್ಪಡಿಸಿದ್ದ ಕಾನೂನು ಅರಿವು ನೆರವು ಹಾಗೂ ವಾರ್ಷಿಕ ಸ್ನೇಹ ಕೂಟ ಕಾರ್ಯಕ್ರಮದಲ್ಲಿ ಧಾರವಾಡ ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಂ. ಬಡಿಗೇರ ಮಾತನಾಡಿದರು.
Published on:
Copied
Follow Us
ಹುಬ್ಬಳ್ಳಿ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಶ್ರಯದಲ್ಲಿ ಇಲ್ಲಿಯ ಜೆ.ಎಸ್.ಎಸ್ ಸಕ್ರಿ ಕಾನೂನು ಮಹಾವಿದ್ಯಾಲಯದಲ್ಲಿ sakri law college ಕಾನೂನು ಅರಿವು ನೆರವು ಹಾಗೂ ವಾರ್ಷಿಕ ಸ್ನೇಹ ಕೂಟ ಕಾರ್ಯಕ್ರಮವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಧಾರವಾಡ ಜಿಲ್ಲಾ ಕಾನೂನು ಪ್ರಾಧಿಕಾರ ಅಧ್ಯಕ್ಷ ನೆರಳೆ ವೀರಭದ್ರಯ್ಯ ವಿಜಯ ಮಾತನಾಡಿ, ಕಾನೂನು ವೃತ್ತಿಯೆಂಬುದು ಅತ್ಯಂತ ಪ್ರತಿಷ್ಠಿತವಾದದು. ಸೇವಾ ಮನೋಭಾವವಿಟ್ಟುಕೊಂಡು ವಿದ್ಯಾರ್ಥಿಗಳು ವೃತ್ತಿಗೆ ಇಳಿಯಬೇಕು. ಇದರಿಂದ ಯಶಸ್ಸು ಸಿಗಲಿದೆ ಎಂದರು.
ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಎಂ. ಬಡಿಗೇರ ಮಾತನಾಡಿ, ವಿದ್ಯಾರ್ಥಿಗಳು ಕಾನೂನು ಸ್ವಯಂ ಸೇವಕರಾಗಿ ತಮ್ಮನ್ನು ತಾವು ತೊಡಗಿಸಿಳ್ಳಬೇಕು. ಹಳ್ಳಿಗಳಲ್ಲಿ ಕಾನೂನು ನೆರವು ಕಾರ್ಯಕ್ರಮ ಆಯೋಜಿಸಿ, ಜನಸಾಮಾನ್ಯರಿಗೆ ಕಾನೂನಿನ ಅರಿವು ಮೂಡಿಸಬೇಕು ಎಂದರು.
ಪ್ರಾಚಾರ್ಯ ಡಾ. ರೂಪಾ ಇಂಗಳಹಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ಕಾನೂನು ವಿವಿಯಿಂದ ಪಿಎಚ್.ಡಿ. ಪಡೆದಿದ್ದ ಪ್ರಾದ್ಯಾಪಕ ಡಾ. ಬಾಬುಲಾಲ ದರಗದ ಅವರನ್ನು ಸನ್ಮಾನಿಸಲಾಯಿತು. 2023-24ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯಕ್ಕೆ 3ನೇ ಸ್ಥಾನ ಪಡೆದ ನಾಗರತ್ನ ಬಿ.ಎಂ. ಅವರನ್ನು ಗೌರವಿಸಲಾಯಿತು.
ಉಪನ್ಯಾಸಕರಾದ ಪ್ರೊ. ಪೂರ್ಣಿಮಾ ಕುರ್ಡಿಕೇರಿ, ಶೈಲಜಾ ಹಗೇದಾಳ, ಸುರೇಶ ಲಿಂಬಿಕಾಯಿ, ಸಿಬ್ಬಂದಿ ಸತೀಶ ಸಿ.ವಿ., ಸುರೇಶ ಲಮಾಣಿ, ಪರಸಪ್ಪ ಮಾಂಗ, ಐ.ಎಫ್. ಗೋಪಾಲಿ, ಗುಡ್ಡಪ್ಪ ಆಡೂರ, ರಫೀಕ್ ಭಾರುದ್ವಾಲೆ ಇತರರು ಉಪಸ್ಥಿತರಿದ್ದರು.
ಮಮತಾ ಕಲಾಲ ಪ್ರಾರ್ಥಿಸಿದರು. ಸುನೀಲ ಪಾಟೀಲ ನಿರೂಪಿಸಿದರು. ಡಾ. ದೀಪಾ ಪಾಟೀಲ ಸ್ವಾಗತಿಸಿದರು.
ಶಂಕರೇಶ ಕಟಗಿ ಅತಿಥಿಗಳನ್ನು ಪರಿಚಯಿಸಿದರು. ಭಾಗ್ಯಶ್ರೀ ಭಟ್ ವಂದಿಸಿದರು.