ಅತಿಥಿಯಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕ ಕುಮಾರ ಬೆಕ್ಕೇರಿ ಮಾತನಾಡಿ, ಸಂಗೀತ ಕಲೆಯು ಹೆಚ್ಚು ಬೆಳೆಯಬೇಕು. ಮಕ್ಕಳಿಗೆ ಕಲೆ ಮತ್ತು ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಬೇಕು ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಶ್ರೀಮಾತಾ ಆಶ್ರಮದ ಮಾತಾಜಿ ತೇಜೋಮಯಿ ಹಾಗೂ ಮಾತಾಜಿ ಅಮೂಲ್ಯಮಯಿ ಅವರು ಆಶೀರ್ವಚನ ನೀಡಿ, ಇಂದಿನ ಯುವ ಪೀಳಿಗೆಯು ಸುಸಂಸ್ಕೃತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಉತ್ತಮ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪ್ರಕಾಶ ಮಲ್ಲಿಗವಾಡ, ಹಿರಿಯ ಗಾಯಕರಾದ ಪಂ. ಕೃಷ್ಣರಾವ ಇನಾಮದಾರ, ಪಂ. ಬಾಲಚಂದ್ರ ನಾಕೋಡ ಮತ್ತು ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅತಿಥಿಗಳಾಗಿದ್ದರು.
ಜಯಶ್ರೀ ಹರ್ಲಾಪುರ ಅಧ್ಯಕ್ಷತೆ ವಹಿಸಿದ್ದರು. ಉತ್ತರಾದಿಮಠದ ವ್ಯವಸ್ಥಾಪಕ ಪಂ. ಶ್ರೀನಿಧಿ ಬಲ್ಲರವಾಡ, ವಿದ್ಯಾಲಯದ ಖಜಾಂಚಿ ಕಮಲಾಕ್ಷಿ ಮುಗಳಿ, ಉಪಾಧ್ಯಕ್ಷ ಆನಂದಕುಮಾರ, ಸಂಚಾಲಕ ಹಾಗೂ ಕಾರ್ಯದರ್ಶಿ ಮಂಜುಶ್ರೀ ಮುಗಳಿ ಹಾಗೂ ಇತರರಿದ್ದರು.