run for nature ಗ್ರೀನ್ ಕರ್ನಾಟಕ ಅಸೋಸಿಯೇಶನ್ ಅಧ್ಯಕ್ಷ ಚನ್ನು ಹೊಸಮನಿ, ಗಂಗಾಧರ ಗುಜಮಾಗಡಿ, ಮೇಘರಾಜ ಕೆರೂರ, ರಾಜು ಗೊಂಬಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಹುಬ್ಬಳ್ಳಿಯಲ್ಲಿ ಬೃಹತ್ ಕಾರ್ಯಕ್ರಮ
ಪರಿಸರಕ್ಕಾಗಿ 3ಕೆ, 5ಕೆ ಓಟ
ಹುಬ್ಬಳ್ಳಿ: run for nature ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗ್ರೀನ್ ಕರ್ನಾಟಕ ಅಸೋಸಿಯೇಶನ್, ವಿ ಕೇರ್ ಫೌಂಡೇಷನ್, ವಸುಂಧರಾ ಫೌಂಡೇಷನ್ ಸಹಯೋಗದಲ್ಲಿ ರನ್ ಫಾರ್ ನೇಚರ್ 4.0 ಜಾಗೃತಿ ಓಟ ಹಾಗೂ ಸಮಾರಂಭ ಜೂನ್ 7ರಂದು ತೋಳನಕೆರೆ ಉದ್ಯಾನದ ಬಳಿ ಏರ್ಪಡಿಸಲಾಗಿದೆ ಎಂದು ಅಸೋಸಿಯೇಶನ್ ಅಧ್ಯಕ್ಷ ಚನ್ನು ಹೊಸಮನಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿವರ್ಷ ಪರಿಸರ ಸಂರಕ್ಷಣೆಗಾಗಿ ರನ್ ಆಯೋಜಿಸುತ್ತ ಬರಲಾಗಿದೆ. ವಿವಿಧ ಸಂಘ ಸಂಸ್ಥೆಗಳು ಈ ಕಾರ್ಯಕ್ಕೆ ಕೈಜೋಡಿಸಿವೆ. ಈ ವರ್ಷ ಓಟದಲ್ಲಿ 2 ಸಾವಿರಕ್ಕೂ ಹೆಚ್ಚು ಪರಿಸರ ಪ್ರೇಮಿ ವಿದ್ಯಾರ್ಥಿಗಳು ಹಾಗೂ ನಾಗರಿಕರು ಭಾಗವಹಿಸಲಿದ್ದಾರೆ ಎಂದರು.
40ಕ್ಕೂ ಹೆಚ್ಚು ಶಾಲೆ, ಕಾಲೇಜಿಗೆ ಭೇಟಿ ಮಾಡಿ ರನ್ನಲ್ಲಿ ಪಾಲ್ಗೊಳ್ಳುವಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡಲಾಗಿದೆ. ಕ್ರೀಡಾಪಟುಗಳು, ಆಸಕ್ತರಿಗೆ ಜಾಗೃತಿ ಓಟವು ಉತ್ತಮ ಅವಕಾಶ ನೀಡುವುದರ ಜತೆಗೆ ಪ್ರಕೃತಿ ರಕ್ಷಿಸುವ, ಬೆಳೆಸುವ ನ ಉದ್ದೇಶಕ್ಕೆ ಪ್ರೇರಣೆ ನೀಡಲಿದೆ ಎಂದರು.
7ರಂದು ಬೆಳಗ್ಗೆ 6.30ಕ್ಕೆ 3ಕೆ ಹಾಗೂ 5ಕೆ ರನ್ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ "ಮನೆಗೊಂದು ಮಾವಿನ ಮರ' ಅಭಿಯಾನಕ್ಕೂ ಚಾಲನೆ ನೀಡಲಾಗುತ್ತಿದ್ದು, ಒಟ್ಟು 10 ಸಾವಿರ ಸಸಿಗಳನ್ನು ಉಚಿತವಾಗಿ ವಿತರಿಸುವ ಗುರಿ ಹೊಂದಲಾಗಿದೆ. ಕಾರ್ಯಕ್ರಮದ ದಿನ 2ಸಾವಿರಕ್ಕೂ ಹೆಚ್ಚು ಮಾವಿನ ಸಸಿಗಳನ್ನು ಸಾರ್ವಜನಿಕರಿಗೆ ವಿತರಿಸಲಾಗುವುದು. ಉಳಿದ 8 ಸಾವಿರ ಸಸಿಗಳನ್ನು ಆಗಸ್ಟ್ 30ರ ವರೆಗೆ ಹಂತ ಹಂತವಾಗಿ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದರು.
ರನ್ ಮುಗಿದ ನಂತರ ಬೆಳಗ್ಗೆ 8ಕ್ಕೆ ಪರಿಸರ ಜಾಗೃತಿ ಸಮಾರಂಭ ನಡೆಯಲಿದ್ದು, ಸಾನ್ನಿಧ್ಯವನ್ನು ಶ್ರೀವಾಲಿ ಗುರುಗಳು ವಹಿಸುವರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಉದ್ಯಮಿ ಎಸ್.ಸಿ. ಶೆಟ್ಟರ, ಪುರುಷೋತ್ತಮ ನಾರಾಯಣ ಗಾಡ್ಗೀಳ ಭಾಗವಹಿಸುವರು ಎಂದು ಹೇಳಿದರು.