run for nature ವಸುಂಧರೆ ಹಸಿರಿನಿಂದ ಕಂಗೊಳಿಸಲಿ

ವಿಶ್ವ ಪರಿಸರ ದಿನ ನಿಮಿತ್ತ ಹುಬ್ಬಳ್ಳಿಯಲ್ಲಿ run for natureಭಾನುವಾರ ಏರ್ಪಡಿಸಿದ್ದ ರನ್ ಫಾರ್ ನೇಚರ್ 4.0 ಓಟಕ್ಕೆ ಗೋವಿಂದಪ್ಪ ಗೌಡಪ್ಪಗೋಳ, ಪ್ರೊ.ಎಂ.ಆರ್. ಪಾಟೀಲ, ಚನ್ನು ಹೊಸಮನಿ ಚಾಲನೆ ನೀಡಿದರು.
ವಿಶ್ವ ಪರಿಸರ ದಿನ ನಿಮಿತ್ತ ಹುಬ್ಬಳ್ಳಿಯಲ್ಲಿ run for natureಭಾನುವಾರ ಏರ್ಪಡಿಸಿದ್ದ ರನ್ ಫಾರ್ ನೇಚರ್ 4.0 ಓಟಕ್ಕೆ ಗೋವಿಂದಪ್ಪ ಗೌಡಪ್ಪಗೋಳ, ಪ್ರೊ.ಎಂ.ಆರ್. ಪಾಟೀಲ, ಚನ್ನು ಹೊಸಮನಿ ಚಾಲನೆ ನೀಡಿದರು.
Published on
ಹುಬ್ಬಳ್ಳಿ: ವಿಶ್ವ ಪರಿಸರ ದಿನ ನಿಮಿತ್ತ ಗ್ರೀನ್ ಕರ್ನಾಟಕ ಅಸೋಸಿಯೇಷನ್, ವಸುಂಧರಾ ಫೌಂಡೇಷನ್, ವಿ ಕೇರ್ ಫೌಂಡೇಷನ್ ಸಹಯೋಗದಲ್ಲಿ ಇಲ್ಲಿಯ ತೋಳನಕೆರೆ ಬಳಿ ರಸ್ತೆಯಲ್ಲಿ ಭಾನುವಾರ ರನ್ ಫಾರ್ ನೇಚರ್ run for nature 4.0 ಹೆಸರಿನಲ್ಲಿ 3 ಕಿ.ಮೀ. ಮತ್ತು 5 ಕಿ.ಮೀ. ಓಟ ಏರ್ಪಡಿಸಲಾಗಿತ್ತು.
ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಯುವ ಸಮೂಹ ಮತ್ತು ಸಾರ್ವಜನಿಕರು ತೋಳನಕೆರೆ ರಸ್ತೆಯಲ್ಲಿ ಓಟ ನಡೆಸಿದರು. ಗುರಿ ತಲುಪಿದವರಿಗೆ ಬಹುಮಾನ ನೀಡಲಾಯಿತು. ಭಾಗವಹಿಸಿದ್ದವರಿಗೆ ಪ್ರಮಾಣ ಪತ್ರ ವಿತರಿಸಿದ್ದಲ್ಲದೆ, ವಿವಿಧ ಸಸಿಗಳನ್ನು ನೀಡಿ ನೆಡುವಂತೆ ಪ್ರೇರೇಪಿಸಲಾಯಿತು. ಇದೇ ವೇಳೆ ಮನೆಗೊಂದು ಮಾವಿನ ಮರ ಅಭಿಯಾನಕ್ಕೂ ಚಾಲನೆ ನೀಡಲಾಯಿತು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಅರವಿಂದ ಬೆಲ್ಲದ, ಹುಬ್ಬಳ್ಳಿ-ಧಾರವಾಡ ಅವಳಿ ನಗರವನ್ನು ಸ್ವಚ್ಛತೆಯಿಂದ ಇಡಬೇಕು. ಜತೆಗೆ ಸಸಿಗಳನ್ನು ನೆಟ್ಟು ಹಸಿರು ವಾತಾವರಣ ನಿರ್ಮಾಣ ಮಾಡಬೇಕು ಎಂದರು.
ಕೋವಿಡ್ ಸಂದರ್ಭದಲ್ಲಿ ಬಹಳಷ್ಟು ಜನರು ಆಕ್ಸಿಜನ್ ಕೊರತೆ ಅನುಭವಿಸಿದರು. ನಾವು ಮುಂದಿನ ಜನಾಂಗ ಉಳಿವಿಗಾಗಿಯಾದರೂ ಸಸಿಗಳನ್ನು ನೆಡಬೇಕು. ವಸುಂಧರೆಯನ್ನು ಹಸಿರಿನಿಂದ ಕಂಗೊಳಿಸುವಂತೆ ನೋಡಿಕೊಳ್ಳಬೇಕು ಎಂದು ತಿಳಿವಳಿಕೆ ನೀಡಿದರು.
ಎ.ಸಿ. ವಾಲಿ ಮಹಾರಾಜ ಸಾನ್ನಿಧ್ಯ ವಹಿಸಿ ಮಾತನಾಡಿ, ನಿಸರ್ಗಕ್ಕೆ ಮೋಸ ಮಾಡಬಾರದು. ಅದು ಕೊಟ್ಟ ಕೊಡುಗೆಯಿಂದಲೇ ನಾವು ಜೀವಿಸಿದ್ದೇವೆ, ಮುಂದಿನವರು ಜೀವಿಸಲು ಅನುಕೂಲ ಮಾಡಿಕೊಡಬೇಕು. ಹು-ಧಾ ಅವಳಿನಗರವನ್ನು ಹಸಿರುಮಯ ಮಾಡಬೇಕು. ನಮ್ಮ ಉಸಿರು ಉಳಿಸಿಕೊಳ್ಳಬೇಕು ಎಂದು ಸಲಹೆಯಿತ್ತರು.
ಗ್ರೀನ್ ಕರ್ನಾಟಕ ಅಸೋಸಿಯೇಷನ್ ಅಧ್ಯಕ್ಷ ಚನ್ನು ಹೊಸಮನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಸ್ಥೆ ಕಳೆದ ನಾಲ್ಕು ವರ್ಷದಿಂದ ಸಸಿಗಳನ್ನು ವಿತರಿಸುತ್ತಿದೆ. ಯುವಕರು ಸಸಿ ನೆಡಲು ಮುಂದೆ ಬರಬೇಕು ಎಂದು ವಿನಂತಿಸಿದರು.
ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಉಪ ಆಯುಕ್ತ ಗೋವಿಂದಪ್ಪ ಗೌಡಪ್ಪಗೋಳ, ಉದ್ಯಮಿಗಳಾದ ಎಸ್.ಸಿ. ಶೆಟ್ಟರ್, ಪುರುಷೋತ್ತಮ ನಾರಾಯಣ ಗಾಡ್ಗಿಳ್, ವಿ ಕೇರ್ ಫೌಂಡೇಷನ್ ಅಧ್ಯಕ್ಷ ಗಂಗಾಧರ ಗುಜಮಾಗಡಿ, ವಸುಂಧರಾ ಫೌಂಡೇಷನ್ ಅಧ್ಯಕ್ಷ ಮೇಘರಾಜ ಕೆರೂರ, ರಾಜು ಗೊಂಬಿ, ಕೆಎಲ್‌ಇ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಆರ್. ಪಾಟೀಲ, ಜಾನಪದ ತಜ್ಞ ಡಾ. ರಾಮು ಮೂಲಗಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net