ರುದ್ರಾಭಿಷೇಕಂ ಹಾಡುಗಳ ಲೋಕಾರ್ಪಣೆ songs

songs ರುದ್ರಾಭಿಷೇಕಂ ಕನ್ನಡ ಚಲನಚಿತ್ರದ ಹಾಡುಗಳ ಬಿಡುಗಡೆ ಸಮಾರಂಭವನ್ನು ಸಂಸದ ಜಗದೀಶ ಶೆಟ್ಟರ್ ಅವರು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠದ ಆವರಣದಲ್ಲಿ ಉದ್ಘಾಟಿಸಿದರು. ನಟ ವಿಜಯ ರಾಘವೇಂದ್ರ, ಪ್ರಿಯಾಂಕ ತಿಮ್ಮೇಶ, ಬಾಳು ಮಗಜಿಕೊಂಡಿ ಹಾಗೂ ಇತರರಿದ್ದರು.
songs ರುದ್ರಾಭಿಷೇಕಂ ಕನ್ನಡ ಚಲನಚಿತ್ರದ ಹಾಡುಗಳ ಬಿಡುಗಡೆ ಸಮಾರಂಭವನ್ನು ಸಂಸದ ಜಗದೀಶ ಶೆಟ್ಟರ್ ಅವರು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠದ ಆವರಣದಲ್ಲಿ ಉದ್ಘಾಟಿಸಿದರು. ನಟ ವಿಜಯ ರಾಘವೇಂದ್ರ, ಪ್ರಿಯಾಂಕ ತಿಮ್ಮೇಶ, ಬಾಳು ಮಗಜಿಕೊಂಡಿ ಹಾಗೂ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಾವು ಶ್ರೀ ಸಿದ್ಧಾರೂಢರ ಭಕ್ತರು.
  • ವೀರಗಾಸೆಯ ಪರಂಪರೆಯನ್ನು ಈ ಚಿತ್ರದಲ್ಲಿ ಚಿತ್ರೀಕರಿಸಲಾಗಿದೆ.
  • ಸಿನೆಮಾ ಸಿಲ್ವರ್ ಜ್ಯುಬಿಲಿ ಆಚರಿಸಲಿ
ಹುಬ್ಬಳ್ಳಿ :
ಹೃದಯದ ಬಾಗಿಲು... ಹಾಗೂ ಇಂದಲ್ಲ ನಾಳೆ... ನಾಡುಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಬೆಳಗಾವಿ ಸಂಸದ ಜಗದೀಶ ಶೆಟ್ಟರ್, ರುದ್ರಾಭಿಷೇಕಂ ಚಿತ್ರದಲ್ಲಿ ವೀರಗಾಸೆಯ ಮಹತ್ವ ಹಾಗೂ ಇತಿಹಾಸವನ್ನು ತಿಳಿಸಲಾಗಿದೆ. ನಮ್ಮ ಸಂಸ್ಕೃತಿ ಹಾಗೂ ಪರಂಪರೆ ಹೇಳುವ ಚಿತ್ರ ಇದಾಗಿದೆ ಎಂದು ಹೇಳಿದರು.
ಈ ಚಿತ್ರ ಶತದಿನೋತ್ಸವ ಆಚರಿಸಲಿ. ಹಾಲಿವುಡ್ ಚಿತ್ರಗಳಿಗೆ ಸ್ಪರ್ಧೆ ಒಡ್ಡುವಂತಹ ಚಿತ್ರಗಳು ಕನ್ನಡದಲ್ಲಿಯೂ ಬರುತ್ತಿರುವುದು ಸಂತಸಕರ ಸಂಗತಿ. ಸಿನಿಪ್ರೇಕ್ಷಕರು ಚಿತ್ರಮಂದಿರಕ್ಕೆ ತೆರಳಿ, ಕನ್ನಡ ಚಲನಚಿತ್ರಗಳನ್ನು ವೀಕ್ಷಿಸಬೇಕು ಎಂದು ಸಲಹೆ ನೀಡಿದರು.
ನಾಯಕ ನಟ ವಿಜಯ ರಾಘವೇಂದ್ರ ಮಾತನಾಡಿ, ನಾವು ಶ್ರೀ ಸಿದ್ಧಾರೂಢರ ಭಕ್ತರು. ನಮ್ಮ ಹಿರಿಯ ಮಾವನವರಾದ ಡಾ. ರಾಜಕುಮಾರ ಅವರು ಹುಬ್ಬಳ್ಳಿಗೆ ಬಂದರೆ ಮಠಕ್ಕೆ ಕಡ್ಡಾಯವಾಗಿ ಭೇಟಿ ನೀಡುತ್ತಿದ್ದರು.
ಅದೇ ಪರಂಪರೆಯನ್ನು ಡಾ. ಶಿವರಾಜಕುಮಾರ, ರಾಘವೇಂದ್ರ ರಾಜಕುಮಾರ ಹಾಗೂ ನಾವು ಮುಂದುವರೆಸಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು.
ಯಾವುದೇ ಸಿನೆಮಾ ಉತ್ತರ ಕರ್ನಾಟಕದಲ್ಲಿ ಗೆಲುವು ಸಾಧಿಸಿದರೆ ಇಡೀ ಕರ್ನಾಟಕದಲ್ಲಿ ಜಯ ಗಳಿಸಿದಂತೆ. ಪ್ರೇಕ್ಷಕರು ಕಡ್ಡಾಯವಾಗಿ ಚಲನಚಿತ್ರ ಮಂದಿರಗಳಲ್ಲಿಯೇ ಸಿನೆಮಾ ನೋಡುವಂತೆ ಮನವಿ ಮಾಡಿದರು.
ಈ ಚಿತ್ರ ಯಶಸ್ಸು ಕಂಡ ನಂತರ ಮತ್ತೊಂದು ಕಾರ್ಯಕ್ರಮವನ್ನು ಹುಬ್ಬಳ್ಳಿಯಲ್ಲಿ ಆಯೋಜಿಸಲಾಗುವುದು. ಆ ಸಮಯದಲ್ಲಿ ಚಿತ್ರದ ಹಾಡುಗಳಿಗೆ ಡಾನ್ಸ್ ಮಾಡುವ ಭರವಸೆಯನ್ನು ವಿಜಯ ರಾಘವೇಂದ್ರ ಇದೇ ಸಂದರ್ಭದಲ್ಲಿ ನೀಡಿದರು.
ಸಂಗೀತ ನಿರ್ದೇಶಕ ವಿ. ಮನೋಹರ, ಇದು ವಸಂತಕುಮಾರ ಅವರ ಚೊಚ್ಚಲ ನಿರ್ದೇಶನದ ಸಿನೆಮಾ. ಚಿನ್ನಾರಿಮುತ್ತ ಖ್ಯಾತಿಯ ವಿಜಯ ರಾಘವೇಂದ್ರ ಅವರು ಕನ್ನಡಿಗರ ಕಣ್ಮಣಿಯಾಗಿದ್ದು, ಎಂದಿನಂತೆ ಈ ಚಿತ್ರಕ್ಕೂ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಶ್ರೀ ಸಿದ್ಧಾರೂಢಮಠ ಟ್ರಸ್ಟ್ ಕಮೀಟಿ ಅಧ್ಯಕ್ಷ ಬಾಳು ಮಗಜಿಕೊಂಡಿ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಹೆಸರುವಾಸಿಯಾದ ವೀರಗಾಸೆಯ ಪರಂಪರೆಯನ್ನು ಈ ಚಿತ್ರದಲ್ಲಿ ಚಿತ್ರೀಕರಿಸಲಾಗಿದೆ.
ಕರ್ನಾಟಕದ ಹೆಮ್ಮೆಯ ಸಂಸ್ಕೃತಿಯ ಬಗ್ಗೆ ಅಗಾಧ ಅಭಿಮಾನ ಇಟ್ಟು ಈ ಸಿನೆಮಾ ಮಾಡಿದ್ದು, ಸಿಲ್ವರ್ ಜ್ಯುಬಿಲಿ ಆಚರಿಸಲಿ ಎಂದು ಹಾರೈಸಿದರು.
ಚಿತ್ರದ ನಿರ್ದೇಶಕ ವಸಂತಕುಮಾರ, ನಾಯಕಿ ನಟಿ ಪ್ರಿಯಾಂಕ ತಿಮ್ಮೇಶ, ನಿರ್ವಪಕರಾದ ಎನ್. ಜಯರಾಂ, ಮಂಜುನಾಥ, ವೆಂಕಟೇಶ, ಬಿ. ಚಿದಾನಂದಮೂರ್ತಿ, ಬಿ.ಕೆ. ಅಶ್ವತ್ಥ, ನಾರಾಯಣ, ಸುಮಾ, ಪತ್ರಕರ್ತ ಗಣಪತಿ ಗಂಗೊಳ್ಳಿ ಹಾಗೂ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net