ಮೇನಲ್ಲಿ 49 ಮಕ್ಕಳನ್ನು ರಕ್ಷಿಸಿದ ಆರ್​ಪಿಎಫ್ RPF

RPF ಕೋರಿಯನ್ ಬ್ರಾ್ಯಂಡ್​ನ ಅಕ್ರಮ ಸಿಗರೇಟ್ ಪೆಟ್ಟಿಗೆಗಳನ್ನು ವಶಪಡಿಸಿಕೊಂಡಿರುವ ಆರ್​ಪಿಎಫ್ ತಂಡ.
RPF ಕೋರಿಯನ್ ಬ್ರಾ್ಯಂಡ್​ನ ಅಕ್ರಮ ಸಿಗರೇಟ್ ಪೆಟ್ಟಿಗೆಗಳನ್ನು ವಶಪಡಿಸಿಕೊಂಡಿರುವ ಆರ್​ಪಿಎಫ್ ತಂಡ.
Published on

ಪ್ರಮುಖ ಮುಖ್ಯಾಂಶಗಳು

  • 4,65,968 ಮೌಲ್ಯದ 263 ಬಳಸಿದ ಟಿಕೆಟ್​ಗಳನ್ನು ವಶಪಡಿಸಿಕೊಳ್ಳಲಾಗಿದೆ.
  • ನೈಋತ್ಯ ರೈಲ್ವೆಯ ಒಟ್ಟು 32 ರೈಲುಗಳಲ್ಲಿ ಈ ಸೌಕರ್ಯ ಒದಗಿಸಲಾಗಿದೆ.
  • 63.80 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಹುಬ್ಬಳ್ಳಿ :
ಮೇನಲ್ಲಿ ನನ್ಹೆ ಫರಿಸ್ತೇ ಕಾರ್ಯುಚರಣೆ ಅಡಿ ನೈಋತ್ಯ ರೈಲ್ವೆಯು 12 ಬಾಲಕಿಯರು ಸೇರಿದಂತೆ 49 ಮಕ್ಕಳನ್ನು ರಕ್ಷಿಸಿದೆ. ಪ್ರಯಾಣಿಕರ ಕಳೆದುಹೋದ 50.34 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ತ್ವರಿತವಾಗಿ ವಶಪಡಿಸಿಕೊಂಡು, ಹಿಂದಿರುಗಿಸಲಾಗಿದೆ.
ಇದೇ ಅವಧಿಯಲ್ಲಿ ಉಪಲಬ್ಧ ಕಾರ್ಯಾಚರಣೆ ಅಡಿ 6.19 ಲಕ್ಷ ರೂ. ಮೌಲ್ಯದ ಟಿಕೆಟ್ ವಶಪಡಿಸಿಕೊಳ್ಳಲಾಗಿದ್ದು, 63.80 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಮಹಿಳಾ ಪ್ರಯಾಣಿಕರ ಸಬಲೀಕರಣದ ಮೇರಿ ಸಹೇಲಿ ಉಪಕ್ರಮದ ಅಡಿ ಆರ್​ಪಿಎಫ್ ಸಿಬ್ಬಂದಿ ಒಂಟಿ ಅಥವಾ ಸಹಾಯ ಇಲ್ಲದೇ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೆ ಸುರಕ್ಷತೆ ನೀಡುತ್ತಿದೆ.
ಮಹಿಳಾ ಪ್ರಯಾಣಿಕರ ನೈಜಸಮಯ, ಮೇಲ್ವಿಚಾರಣೆ ಮತ್ತು ಸಹಾಯಕ್ಕಾಗಿ ಅವರ ಆಸನ ಮತ್ತು ಬರ್ತ್ ವಿವರಗಳನ್ನು ನಿಲ್ದಾಣದ ಆರ್​ಪಿಎಫ್ ತಂಡಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ.
ಪ್ರಯಾಣ ಆರಂಭದ ರೈಲು ನಿಲ್ದಾಣದಿಂದ ಕೊನೆಯ ನಿಲ್ದಾಣದವರೆಗೆ ಅಗತ್ಯ ಸಹಾಯ ಹಾಗೂ ರಕ್ಷಣೆ ಒದಗಿಸಲಾಗುತ್ತದೆ.
ನೈಋತ್ಯ ರೈಲ್ವೆಯ ಒಟ್ಟು 32 ರೈಲುಗಳಲ್ಲಿ ಈ ಸೌಕರ್ಯ ಒದಗಿಸಲಾಗಿದೆ. ಕಾಳಸಂತೆಯಲ್ಲಿ ರೈಲ್ವೆ ಟಿಕೆಟ್ ಮಾರಾಟ ತಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಕರ್ನಾಟಕ ಮತ್ತು ಗೋವಾದ ವಿವಿಧ ಪ್ರವಾಸ ಏಜೆನ್ಸಿಗಳು ಮತ್ತು ಸ್ಥಳಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ.
ಈ ಕಾರ್ಯುಚರಣೆ ವೇಳೆ 36 ಪ್ರಕರಣಗಳಲ್ಲಿ 37 ಟೌಟ್​ಗಳನ್ನು ಬಂದಿಸಿ, 1,53,620 ರೂ. ಮೌಲ್ಯದ 49 ಲೈವ್ ಟಿಕೆಟ್​ಗಳು ಹಾಗೂ 4,65,968 ಮೌಲ್ಯದ 263 ಬಳಸಿದ ಟಿಕೆಟ್​ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆಪರೇಷನ್ ಸತ್ರಾಕ್ ಅಡಿಯಲ್ಲಿ 7 ಮದ್ಯ ಪ್ರಕರಣಗಳನ್ನು ಪತ್ತೆಹಚ್ಚಿ, 83,31,457 ರೂ. ಮೌಲ್ಯದ 1,458 ಬಾಟಲಿಗಳನ್ನು (1,309 ಲೀಟರ್) ವಶಪಡಿಸಿಕೊಂಡು ಅಬಕಾರಿ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಆಪರೇಷನ್ ನಾರ್ಕೆ ಅಡಿ 8 ಪ್ರಕರಣಗಳು ಪತ್ತೆಯಾಗಿದ್ದು, 33.80 ಲಕ್ಷ ರೂ.ಮೌಲ್ಯದ 37 ಕೆಜಿ ಗಾಂಜಾ ಮತ್ತು 30 ಲಕ್ಷ ಮೌಲ್ಯದ ಕೊರಿಯನ್ ಬ್ರಾಂಡ್​ನ 1,99,600 ಸಿಗರೇಟ್ ಹೊಂದಿರುವ 20 ರಟ್ಟಿನ ಪೆಟ್ಟಿಗೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net