ರೈಲುಗಳಲ್ಲಿ ಆರ್ಪಿಎಫ್ (RPF) ಸಿಬ್ಬಂದಿ ಎಸ್ಕಾರ್ಟ್ ಕರ್ತವ್ಯ ನಿರ್ವಹಿಸಿ, ಪ್ರಯಾಣಿಕರಿಗೆ ಸುರಕ್ಷತೆ ಒದಗಿಸಿದರು.
ಮತ್ತೊಂದೆಡೆ, ಉಪಲಬ್ಧ ಕಾರ್ಯಾಚರಣೆ ಅಡಿ 2,03,859 ರೈಲು ಟಿಕೆಟ್ಗಳನ್ನು ವಶಪಡಿಸಿಕೊಂಡಿದೆ. ರೈಲ್ವೆಯಲ್ಲಿ ಸಾಗಿಸುತ್ತಿದ್ದ 30.41 ಲಕ್ಷ ರೂ. ಮೌಲ್ಯದ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಂಡು, 8 ಜನರನ್ನು ಬಂಧಿಸಿದೆ.
ಡಿಗ್ನಿಟಿ ಕಾರ್ಯಾಚರಣೆ ಅಡಿ ಆರೈಕೆ ಮತ್ತು ರಕ್ಷಣೆಯ ಅಗತ್ಯವಿದ್ದ 6 ಜನ ವೃದ್ಧರನ್ನು (ನಾಲ್ವರು ಪುರುಷರು ಮತ್ತು ಇಬ್ಬರು ಮಹಿಳೆಯರು) ರಕ್ಷಿಸಿ, ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ.
ಮಹಿಳಾ ಪ್ರಯಾಣಿಕರ ಶಕ್ತೀಕರಣಕ್ಕಾಗಿ ಇರುವ ಮೇರಿ ಸಹೇಲಿ ಅಭಿಯಾನದ ಅಡಿ ನವೆಂಬರ್ನಲ್ಲಿ 32 ರೈಲುಗಳಲ್ಲಿನ ಒಂಟಿ ಮಹಿಳಾ ಪ್ರಯಾಣಿಕರ ಸುರಕ್ಷತೆ ಖಚಿತಪಡಿಸಲಾಗಿದೆ.
ಟಿಕೆಟ್ ಅಕ್ರಮದ ವಿರುದ್ಧ ಕ್ರಮ ಕೈಗೊಂಡಿರುವ ರೈಲ್ವೆ ರಕ್ಷಣಾ ಪಡೆ, ಕರ್ನಾಟಕ ಹಾಗೂ ಗೋವಾದಾದ್ಯಂತ ಟ್ರಾವೆಲ್ ಏಜೆನ್ಸಿಗಳಲ್ಲಿ ತಪಾಸಣೆ ನಡೆಸಿ, 14 ಪ್ರಕರಣಗಳಲ್ಲಿ 14 ಜನರನ್ನು ಬಂಧಿಸಿದೆ. 30,636 ಮೌಲ್ಯದ 22 ಟಿಕೆಟ್ಗಳನ್ನು ಹಾಗೂ 1,73,223 ರೂ. ಮೌಲ್ಯದ ಬಳಕೆಯಾಗದ 130 ಟಿಕೆಟ್ಗಳನ್ನು ವಶಪಡಿಸಿಕೊಂಡಿದೆ.
ಸತರ್ಕ ಮತ್ತು ನಾಕೋ ಕಾರ್ಯುಚರಣೆ ಅಡಿ 68,994 ರೂ. ಮೌಲ್ಯದ 10 ಮದ್ಯ ಪ್ರಕರಣಗಳಲ್ಲಿ 384 ಮದ್ಯದ ಬಾಟಲಿಗಳು (110 ಲೀಟರ್) ವಶಪಡಿಸಿಕೊಂಡು, ಅಬಕಾರಿ ಇಲಾಖೆಗೆ ಹಸ್ತಾಂತರಿಸಲಾಯಿತು.
7 ಪ್ರಕರಣಗಳಲ್ಲಿ 30.41 ಲಕ್ಷ ರೂ. ಮೌಲ್ಯದ 63.966 ಕೆ.ಜಿ ಗಾಂಜಾ ವಶಪಡಿಸಿಕೊಂಡು, ಮೂವರನ್ನು ಬಂಧಿಸಲಾಯಿತು.
69 ಪ್ರಯಾಣಿಕರು ಬಿಟ್ಟು ಹೋಗಿದ್ದ 15,18,107 ರೂ. ಮೌಲ್ಯದ ಲ್ಯಾಪ್ಟಾಪ್, ಮೊಬೈಲ್, ಆಭರಣ ಹಾಗೂ ಇನ್ನಿತರ ವೈಯಕ್ತಿಕ ವಸ್ತುಗಳನ್ನು ಮರಳಿ ಪ್ರಯಾಣಿಕರಿಗೆ ಹಸ್ತಾಂತರಿಸಲಾಯಿತು.
ರೈಲು ನಿಲ್ದಾಣ ಹಾಗೂ ರೈಲುಗಳಲ್ಲಿ ಸುತ್ತಾಡುತ್ತಿದ್ದ 7 ಜನ ಶಂಕಿತರನ್ನು ಬಂಧಿಸಲಾಯಿತು. 30 ರಿಂದ 35 ಎಕ್ಸ್ಪ್ರೆಸ್ ಹಾಗೂ 90 ರಿಂದ 95 ವಿಶೇಷ ರೈಲುಗಳಲ್ಲಿ ಆರ್ಪಿಎಫ್ ಸಿಬ್ಬಂದಿ ಎಸ್ಕಾರ್ಟ್ ಕರ್ತವ್ಯ ನಿರ್ವಹಿಸಿ, ಪ್ರಯಾಣಿಕರಿಗೆ ಸುರಕ್ಷತೆ ಒದಗಿಸಿದರು.