Rotary wheel ಹುಬ್ಬಳ್ಳಿಯ ತೋಳನಕೆರೆ ವೃತ್ತದಲ್ಲಿ ರೋಟರಿ ವ್ಹೀಲ್ ಸ್ಥಾಪನೆ ಕಾರ್ಯಕ್ರಮದಲ್ಲಿ ಶಾಸಕ ಅರವಿಂದ ಬೆಲ್ಲದ, ಮೇಯರ್ ಜ್ಯೋತಿ ಪಾಟೀಲ, ರಾಮಣ್ಣ ಬಡಿಗೇರ, ಡಾ. ಎಚ್.ವಿ. ಬೆಳಗಲಿ, ರಾಧಿಕಾ ಗೋಖಲೆ, ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಎಲೈಟ್ ಸೇವೆ
ತೋಳನಕೆರೆ ವೃತ್ತದಲ್ಲಿ ರೋಟರಿ ವ್ಹೀಲ್ ಸ್ಥಾಪನೆ
ಹುಬ್ಬಳ್ಳಿ: Rotary wheel ವಿದ್ಯಾನಗರದ ತೋಳನಕೆರೆ ವೃತ್ತ ಇಂದು ಸಾಕಷ್ಟು ಅಭಿವೃದ್ಧಿಯಾಗಿದೆ. ನಗರದ ಹೃದಯ ಭಾಗವಾಗಿರುವ ರಾಣಿ ಕಿತ್ತೂರು ಚನ್ನಮ್ಮ ವೃತ್ತದಂತೆಯೇ ಇದು ಕೂಡಾ ಆಕರ್ಷಣೀಯವಾಗಿದೆ. ಈ ಸ್ಥಳದಲ್ಲಿ ರೋಟರಿ ವೀಲ್ ಸ್ಥಾಪನೆ ಮಾಡಿರುವುದು ಒಳ್ಳೆಯ ಕಾರ್ಯವಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ ಸಂತಸ ವ್ಯಕ್ತಪಡಿಸಿದರು.
ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಎಲೈಟ್ ವತಿಯಿಂದ ತೋಳನಕೆರೆ ವೃತ್ತದಲ್ಲಿ ರೋಟರಿ ವೀಲ್ ಸ್ಥಾಪನೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಾಸಕ ಮಹೇಶ ಟೆಂಗಿನಕಾಯಿ ಅವರು ಮಾತನಾಡಿ, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಎಲೈಟ್ನಿಂದ ನಗರದಲ್ಲಿ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಈ ಸಂಸ್ಥೆ ಇನ್ನೂ ಬೆಳೆಯಲಿ ಎಂದು ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಸ್ವರ್ಣ ಸಮೂಹದ ಎಂಡಿ ಡಾ. ವಿ.ಎಸ್.ವಿ. ಪ್ರಸಾದ ಮಾತನಾಡಿ, ರೋಟರಿ ಪದಾಧಿಕಾರಿಗಳು ಹಾಗೂ ಸದಸ್ಯರು ತುಂಬಾ ಕ್ರಿಯಾಶೀಲರಾಗಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಕೈಗೊಳ್ಳುವ ಕಾರ್ಯಗಳಿಗೆ ನಾವು ಸಹ ಸಾಧ್ಯವಾದಷ್ಟು ಸಹಾಯ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು.