(rotary) ರೋಟರಿ ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನ ಡಿಸೆಂಬರ್ 6ರಿಂದ

(rotary) ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ಅಧ್ಯಕ್ಷೆ ಅಂಜನಾ ಬಸನಗೌಡರ ಮಾತನಾಡಿದರು
(rotary) ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ಅಧ್ಯಕ್ಷೆ ಅಂಜನಾ ಬಸನಗೌಡರ ಮಾತನಾಡಿದರು
Published on
ಹುಬ್ಬಳ್ಳಿ: ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ವತಿಯಿಂದ ಇಲ್ಲಿಯ ಗೋಕುಲ ರಸ್ತೆಯ ಹೋಟೆಲ್ ರೈಟಿಸ್‌ನಲ್ಲಿ ಡಿ. 6 ಮತ್ತು 7 ರಂದು ರೋಟರಿ (rotary) ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನ ಏರ್ಪಡಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷೆ ಅಂಜನಾ ಬಸನಗೌಡರ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಪ್ರಥಮವಾಗಿ ಆಯೋಜಿಸಿರುವ ಈ ಸಮ್ಮೇಳನದ ನೇತೃತ್ವವನ್ನು ಜಿಲ್ಲಾ ಗವರ್ನರ್ ಅರುಣ ಭಂಡಾರೆ, ಮಾಧವಿ ಭಂಡಾರೆ ವಹಿಸುವರು ಎಂದರು.
ಮುಖ್ಯ ಅತಿಥಿಗಳು ಹಾಗೂ ಭಾಷಣಕಾರರಾಗಿ ಭಾರತೀಯ ಟೆಲಿವಿಷನ್ ಮತ್ತು ಚಿತ್ರರಂಗ ತಾರೆ ನಿದಿಗಂಧಾ ವಾಡ ಆಗಮಿಸುವರು. ಪ್ರಗ್ಯಾ ಮೆಹತಾ, ಡಾ. ಜಾರಸನ್ ಫರ್ನಾಂಡಿಸ್, ಪಾಯಲ್ ಗೌರ್ ಸೇರಿ ಬಹಳಷ್ಟು ಜನರು ಆಗಮಿಸಿ ವಿವಿಧ ವಿಷಯಗಳ ಕುರಿತು ಮಾತನಾಡುವರು. ದೇಶದ 250ಕ್ಕೂ ಹೆಚ್ಚು ಮಹಿಳಾ ಪ್ರತಿನಿಧಿಗಳು ಭಾಗವಹಿಸುವರು. ಎರಡು ದಿನ ವಿವಿಧ ವಿಷಯಗಳ ವಿಚಾರ ಸಂಕಿರಣ ನಡೆಯಲಿದೆ ಎಂದರು.
ರಾಧಿಕಾ ಗೋಖಲೆ, ನೀಪಾ ಮೆಹತಾ, ಡಾ. ನಾಗರೇಖಾ ಹೆಬಸೂರ, ಸ್ಮಿತಾ ಮಹೇಶ, ನಯನಾ ಗೋಟಡಕಿ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net