rotary market ಮನಸೆಳೆದ ಮಾರ್ಕೆಟ್ ಮೇಳ

rotary market ಹುಬ್ಬಳ್ಳಿಯ ಎಸ್.ಆರ್. ಬೊಮ್ಮಾಯಿ ರೋಟರಿ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ರೋಟರಿ ಮಾರ್ಕೆಟ್ ಮೇಳವನ್ನು ರಾಜಾ ದೇಸಾಯಿ ಉದ್ಘಾಟಿಸಿದರು.
rotary market ಹುಬ್ಬಳ್ಳಿಯ ಎಸ್.ಆರ್. ಬೊಮ್ಮಾಯಿ ರೋಟರಿ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ರೋಟರಿ ಮಾರ್ಕೆಟ್ ಮೇಳವನ್ನು ರಾಜಾ ದೇಸಾಯಿ ಉದ್ಘಾಟಿಸಿದರು.
Published on

ಹುಬ್ಬಳ್ಳಿ: ಇಲ್ಲಿಯ ಗೋಕುಲ ರಸ್ತೆಯ ಎನ್‌ಎಲ್‌ಇ ಸಂಸ್ಥೆಯ ಎಸ್.ಆರ್. ಬೊಮ್ಮಾಯಿ ರೋಟರಿ ಪಬ್ಲಿಕ್ ಶಾಲೆಯಲ್ಲಿ ಶನಿವಾರ ರೋಟರಿ ಮಾರ್ಕೆಟ್

rotary market

ಮೇಳವನ್ನು ಏರ್ಪಡಿಸಲಾಗಿತ್ತು.

ಮಣ್ಣಿನ ಮಾದರಿ ತಯಾರಿಕೆ ಮತ್ತು ಪರಿಸರ ಸ್ನೇಹಿ, ಕರಕುಶಲ ಮತ್ತು ಕಲಾ ಮಳಿಗೆ, ಆರೋಗ್ಯಕರ ತಿಂಡಿ ಮತ್ತು ಸಲಾಡ್, ಮೋಜಿನ ಆಟ, ದೇಶಿ ಚಾಟ್, ಹಣ್ಣುಗಳ ಚಾಟ್ ಮತ್ತು ತಂಪು ಪಾನೀಯ, ಹಣ್ಣು ಮತ್ತು ತರಕಾರಿ ಮಳಿಗೆಗಳನ್ನು ತೆರೆಯಲಾಗಿದೆ.
ಈ ಮೇಳದಲ್ಲಿ ಭಾಗವಹಿಸಿದ ತಂಡಗಳ ಶಿಸ್ತು, ಉತ್ತಮ ಸಂವಹನ, ಭಾಷಾ ಕೌಶಲ, ಪ್ರತಿಯೊಂದು ಹೌಸ್‌ಗಳ ಅಲಂಕಾರ ಇನ್ನೂ ಹಲವಾರು ಅಂಶಗಳ ಆಧಾರದ ಮೇಲೆ ಅಂಕಗಳನ್ನು ನೀಡಲಾಯಿತು. ಈ ಮೇಳದ ನಿರ್ಣಾಯಕರಾಗಿ ಮಾಧವಿ ಕುಲಕರ್ಣಿ,ನೀಲಿಮಾ ಜಾಧವ, ಅನುಶ್ರೀ ನಾಡಗೇರ ಆಗಮಿಸಿದ್ದರು. ಮುಖ್ಯಗುರುಮಾತೆ ರೇಖಾ ತುಪ್ಪದ ಮಾರ್ಗದರ್ಶನ ನೀಡಿದ್ದರು.
ಸಂಸ್ಥೆಯ ಆಡಳಿತ ವರ್ಗದ ಸದಸ್ಯರಾದ ರಾಜಾ ದೇಸಾಯಿ, ಸದಾನಂದ ಕಾಮತ, ಶಿವರಾಮ್ ಹೆಗಡೆ, ವಿ.ಜಿ. ಕುಲಕರ್ಣಿ, ರಾಮ ಮೋಹನ ಆಗಮಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net