ಹುಬ್ಬಳ್ಳಿಯ rotary club ಕಾರವಾರ ರಸ್ತೆಯ ಗಿರಿಣಿಚಾಳದ ಬಳಿ ನಿರ್ಮಿಸಲಾದ ನೂತನ ಬಸ್ ನಿಲ್ದಾಣವನ್ನು ಮಂಗಳವಾರ ಉದ್ಘಾಟಿಸಲಾಯಿತು.
Published on:
Copied
Follow Us
ಹುಬ್ಬಳ್ಳಿ: ಇಂದಿರಾ ಐವಿಎಫ್ ಮತ್ತು ರೋಟರಿ ಕ್ಲಬ್ rotary club ಆಫ್ ಹುಬ್ಬಳ್ಳಿ ಸೆಂಟ್ರಲ್ ಸಹಯೋಗದಲ್ಲಿ ಇಲ್ಲಿಯ ಕಾರವಾರ ರಸ್ತೆಯ ಗಿರಿಣಿಚಾಳದ ಬಳಿ ನಿರ್ಮಿಸಲಾದ ನೂತನ ಬಸ್ ನಿಲ್ದಾಣವನ್ನು ಮಂಗಳವಾರ ಉದ್ಘಾಟಿಸಲಾಯಿತು.
ಶಾಸಕ ಮಹೇಶ ಟೆಂಗಿನಕಾಯಿ ಉದ್ಘಾಟಿಸಿ ಮಾತನಾಡಿ, ಖಾಸಗಿ ಸಹಭಾಗಿತ್ವದಲ್ಲಿ ಇಂಥ ಸಾಮಾಜಿಕ ಚಟವಟಿಕೆಗಳನ್ನು ಮಾಡುತ್ತಿರಬೇಕು. ನಗರದ ಸೌಂದರ್ಯ ಹೆಚ್ಚಳಕ್ಕೆ ಅಗತ್ಯ ಸೇವಾ ಮನೋಭಾವವನ್ನೂ ತೋರಬೇಕು ಎಂದು ಸಲಹೆ ನಿಡಿದರು.
ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ಅಧ್ಯಕ್ಷೆ ಡಾ. ನಾಗರೇಖಾ ಹೆಬಸೂರ, ಪಾಲಿಕೆ ಸದಸ್ಯೆ ಚಂದ್ರಿಕಾ ಮೇಸ್ತ್ರಿ, ಪ್ರಮುಖರಾದ ಸುರೇಖಾ ಮಹಾಜನ್, ಡಾ. ಆನಂದ್ ಸಾಂಗ್ವಿ, ರೀಟಾ ಹಂಡಾ, ಅಂಜನಾ ಬಸನಗೌಡ್ರ, ವಾಸುಕಿ ಸಂಜಿ, ನಾಗರಾಜ ಶೆಟ್ಟಿ, ಆಡಿ ಕನ್ನನ ಸಾಂಗವಿ ಇತರರು ಉಪಸ್ಥಿತರಿದ್ದರು.