rotary campaign ರೋಟರಿ ಸ್ಕೂಲ್ನಲ್ಲಿ ಪರಿಸರ ಜಾಗೃತಿ ಅಭಿಯಾನ
rotary campaign ಹುಬ್ಬಳ್ಳಿಯ ನವನಗರ ಇಂದ್ರಪ್ರಸ್ಥ ನಗರದ ರೋಟರಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಆವರಣದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು. ಡಾ. ವಿಜಯಶ್ರೀ ಕಲಬುರ್ಗಿ, ಬಸವರಾಜ ಕಾಕೋಳ, ಜಯಂತ ಗಾಡ್ಗೀಳ ಇತರರು ಇದ್ದರು.
Published on:
Copied
Follow Us
ಹುಬ್ಬಳ್ಳಿ: rotary campaign ನವನಗರದ ಇಂದ್ರಪ್ರಸ್ಥ ನಗರದಲ್ಲಿ ಹೊಸದಾಗಿ ಪ್ರಾರಂಭಿಸಿರುವ ರೋಟರಿ ಇಂಗ್ಲಿಷ್ ಮೀಡಿಯಂ ಸ್ಕೂಲ್ (ಸಿಬಿಎಸ್ಇ) ಆವರಣದಲ್ಲಿ ನವನಗರ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಅಕಾಡೆಮಿ (ಎನ್ಎಸ್ಸಿಎ) ವತಿಯಿಂದ ಇತ್ತೀಚೆಗೆ ಗಿಡ ನೆಡುವ ಕಾರ್ಯಕ್ರಮದ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು.
ಪ್ರಾಸ್ತಾವಿಕ ಮಾತನಾಡಿದ ಎನ್ಎಸ್ಸಿಎ ಅಧ್ಯಕ್ಷೆ ಡಾ. ವಿಜಯಶ್ರೀ ಕಲಬುರ್ಗಿ ಅವರು, ಪರಿಸರ ಸಂರಕ್ಷಣೆಯ ಮಹತ್ವವನ್ನು ವಿವರಿಸಿದರು. ಶಾಲಾ ಆವರಣದಲ್ಲಿ ಕೆಲವು ಸಸಿಗಳನ್ನು ನೆಡುವ ಮೂಲಕ ಅಧಿಕೃತವಾಗಿ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಹಸಿರು ಉಪಕ್ರಮದಲ್ಲಿ ಎನ್ಎಸ್ಸಿಎ ಪದಾಧಿಕಾರಿಗಳು ಮತ್ತು ಸದಸ್ಯರು ಉತ್ಸಾಹದಿಂದ ಭಾಗವಹಿಸಿದ್ದರು. ನವನಗರ ಹಾಗೂ ಸುತ್ತಲಿನ ಪರಿಸರದಲ್ಲಿ ಹಸಿರು ಬೆಳೆಸುವ ಸಂಕಲ್ಪ ಮಾಡಲಾಯಿತು. ಅಕಾಡೆಮಿ ವತಿಯಿಂದ ಇನ್ನಷ್ಟು ಕಡೆಗಳಲ್ಲಿ ಅಭಿಯಾನ ನಡೆಸುವ ಉದ್ದೇಶವಿದೆ ಎಂದು ತಿಳಿಸಲಾಯಿತು.