rojgar benifit ರೋಜಗಾರ ಯೋಜನೆ ಫಲಾನುಭವಿಗಳ ಸಂಭ್ರಮ

rojgar benifit ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಷನ್​ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪಿಎಂ ವಿಬಿಆರ್​ವೈ ಫಲಾನುಭವಿಗಳಿಗೆ ಪ್ರೋತ್ಸಾಹ ಧನ ವಿತರಣೆ ಮಾಡಲಾಯಿತು. ಶಾಸಕ ಮಹೇಶ ಟೆಂಗಿನಕಾಯಿ, ವಿಆರ್​ಎಲ್​ ಎಚ್​ಆರ್​ಡಿ ಉಪಾಧ್ಯಕ್ಷ ಎಸ್​.ಜಿ. ಪಾಟೀಲ, ಮೇಯರ್​ ಜ್ಯೋತಿ ಪಾಟೀಲ, ಜಿಲ್ಲಾಧಿಕಾರಿ ಆರ್​. ಸ್ನೇಹಲ್​, ಪಿಎಫ್ ಆಯುಕ್ತ ಅಶುತೋಷ ಇತರರು ಇದ್ದರು.
rojgar benifit ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಷನ್​ನಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪಿಎಂ ವಿಬಿಆರ್​ವೈ ಫಲಾನುಭವಿಗಳಿಗೆ ಪ್ರೋತ್ಸಾಹ ಧನ ವಿತರಣೆ ಮಾಡಲಾಯಿತು. ಶಾಸಕ ಮಹೇಶ ಟೆಂಗಿನಕಾಯಿ, ವಿಆರ್​ಎಲ್​ ಎಚ್​ಆರ್​ಡಿ ಉಪಾಧ್ಯಕ್ಷ ಎಸ್​.ಜಿ. ಪಾಟೀಲ, ಮೇಯರ್​ ಜ್ಯೋತಿ ಪಾಟೀಲ, ಜಿಲ್ಲಾಧಿಕಾರಿ ಆರ್​. ಸ್ನೇಹಲ್​, ಪಿಎಫ್ ಆಯುಕ್ತ ಅಶುತೋಷ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿಬಿಆರ್​ವೈನಿಂದ ಲಕ್ಷಾಂತರ ಉದ್ಯೋಗ ಸೃಷ್ಟಿ
  • ಶಾಸಕ ಮಹೇಶ ಟೆಂಗಿನಕಾಯಿ ಹೇಳಿಕೆ
  • ಯೋಜನೆ ಫಲಾನುಭವಿಗಳಿಗೆ ಪ್ರೋತ್ಸಾಹ ಧನ ವಿತರಣೆ
ಹುಬ್ಬಳ್ಳಿ: rojgar benifit ದೇಶದ ಯುವಕರಿಗೆ ಉದ್ಯೋಗ ನೀಡುವಲ್ಲಿ ಕೇಂದ್ರ ಸರ್ಕಾರ ಎಲ್ಲ ಸಹಕಾರ ನೀಡುತ್ತ ಬಂದಿದ್ದು, ಪಿಎಂ ವಿಬಿಆರ್​ವೈ ಮೂಲಕ ಕೋಟ್ಯಂತರ ಉದ್ಯೋಗಾವಕಾಶ ಸೃಷ್ಟಿಸುವ ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಅಭಿಪ್ರಾಯಪಟ್ಟರು.
ಇಲ್ಲಿಯ ವಿದ್ಯಾನಗರ ಬಿವಿಬಿ ಆವರಣದ ದೇಶಪಾಂಡೆ ಫೌಂಡೇಷನ್​ ಸಭಾಂಗಣದಲ್ಲಿ ಶುಕ್ರವಾರ ಇಪಿಎಫ್ಒ ವತಿಯಿಂದ ಆಯೋಜಿಸಿದ್ದ ಪ್ರಧಾನಮಂತ್ರಿ ವಿಕಸಿತ ಭಾರತ ರೋಜಗಾರ ಯೋಜನೆಯ (ಪಿಎಂ ವಿಬಿಆರ್​ವೈ) ಫಲಾನುಭವಿಗಳಿಗೆ ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೈಗಾರಿಕೆ ಕ್ಷೇತ್ರದಲ್ಲಿ ಬಹಳಷ್ಟು ಬೆಳವಣಿಗೆ ಸಾಧಿಸುತ್ತಿರುವ ಉತ್ತರ ಕರ್ನಾಟಕದ ವಾಣಿಜ್ಯ ಕೇಂದ್ರ ಹುಬ್ಬಳ್ಳಿಯಲ್ಲಿ ಪಿಎಫ್ ಕಚೇರಿಯಿಂದ ಏರ್ಪಡಿಸಿರುವ ಈ ಕಾರ್ಯಕ್ರಮ ಸ್ತುತ್ಯರ್ಹವಾಗಿದೆ. ಪ್ರಧಾನಿಯವರು ದೇಶದ ಜನರಿಗೆ ಸಾಕಷ್ಟು ಯೋಜನೆ ಜಾರಿಗೆ ತಂದಿದ್ದಾರೆ. ಅದರಿಂದಾಗಿ ಈಗಾಗಲೇ ಲಕ್ಷಾಂತರ ಉದ್ಯೋಗಗಳನ್ನು ನೀಡಲಾಗಿದೆ ಎಂದರು.
ದೆಹಲಿಯ ವಿಜ್ಞಾನ ಭವನದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಯಿತು.
ಪಿಎಫ್ ಆಯುಕ್ತ ಅಶುತೋಷ ಪ್ರಾಸ್ತಾವಿಕ ಮಾತನಾಡಿ, 15 ಲಕ್ಷ ಲಾನುಭವಿಗಳಿಗೆ ಉದ್ಯೋಗ ಅವಕಾಶ ಸಿಕ್ಕಿದ್ದು, 2400 ಕೋಟಿ ರೂ. ಪ್ರೋತ್ಸಾಹ ಧನವನ್ನು ಪ್ರಧಾನಿ ವಿತರಣೆ ಮಾಡಿದ್ದಾರೆ. ಪಿಎಫ್ ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ 7 ಸಾವಿರಕ್ಕೂ ಹೆಚ್ಚು ಉದ್ಯೋಗದಾತರು ಯೋಜನೆ ಅಡಿ ಬಂದಿದ್ದಾರೆ ಎಂದು ಮಾಹಿತಿ ನೀಡಿದರು.
ಯೋಜನೆಯ ಫಲಾನುಭವಿ ಭವಾನಿ, ದೇಶಪಾಂಡೆ ಸ್ಕಿಲ್ಲಿಂಗ್​ ಸೆಂಟರ್​ನ ಪಿ.ಎನ್​. ನಾಯಕ ಮಾತನಾಡಿದರು.
ಜಿಲ್ಲಾಧಿಕಾರಿ ಸ್ನೇಹಲ್​ ಆರ್​, ಮೇಯರ್​ ಜ್ಯೋತಿ ಪಾಟೀಲ, ಇಪಿಎಫ್​ಒ ವಲಯ ಕಚೇರಿ ಅಧಿಕಾರಿ ಶಶಿಕುಮಾರ, ವಿಮಾನ ನಿಲ್ದಾಣ ನಿರ್ದೇಶಕ ರೂಪೇಶಕುಮಾರ, ಕೆಸಿಸಿಐ ಉದಯ ರೇವಣಕರ ವೇದಿಕೆಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net