ಕೆಂಸಿಆರ್​ಐನಲ್ಲಿ ರೊಬೀಟಿಕ್ ಶಸ್ತ್ರಚಿಕಿತ್ಸೆ surgery

surgery ಹುಬ್ಬಳ್ಳಿಯ ಕೆಎಂಸಿಆರ್​ಐ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರ ಎಡಗಾಲಿನ ಮೊಣಕಾಲು ಕೀಲು ಬದಲಿ ರೊಬೋಟಿಕ್ ಶಸ್ತ್ರಚಿಕಿತ್ಸೆ ಮಾಡುತ್ತಿರುವ ವೈದ್ಯರ ತಂಡ.
surgery ಹುಬ್ಬಳ್ಳಿಯ ಕೆಎಂಸಿಆರ್​ಐ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರ ಎಡಗಾಲಿನ ಮೊಣಕಾಲು ಕೀಲು ಬದಲಿ ರೊಬೋಟಿಕ್ ಶಸ್ತ್ರಚಿಕಿತ್ಸೆ ಮಾಡುತ್ತಿರುವ ವೈದ್ಯರ ತಂಡ.
Published on

ಪ್ರಮುಖ ಮುಖ್ಯಾಂಶಗಳು

  • ಎರಡರಿಂದ ಎರಡೂವರೆ ಗಂಟೆಯಲ್ಲಿ ಶಸ್ತ್ರಚಿಕಿತ್ಸೆ ಪೂರ್ಣಗೊಂಡಿದೆ
  • 2.79 ಕೋಟಿ ರೂ. ಮೊತ್ತದ ರೋಬೋಟಿಕ್ ಮಷಿನ್ ಖರೀದಿಸಲಾಗಿದೆ
  • ಗುಣಮಟ್ಟದ ಸರ್ಜರಿ ಮಾಡಲು ರೊಬೋಟಿಕ್ ಶಸ್ತ್ರಚಿಕಿತ್ಸೆ ಅನುಕೂಲವಾಯಿತು.
ಸರ್ಕಾರಿ ವೈದ್ಯಕೀಯ ಕಾಲೇಜುಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಗೊಳಿಸಲಾಗಿದೆ ಎಂದು ಕರ್ನಾಟಕ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ಕೆಎಂಸಿಆರ್​ಐ) ನಿರ್ದೇಶಕ ಡಾ. ಕೆ.ಎಫ್. ಕಮ್ಮಾರ ಹೇಳಿದರು.
ಕೆಎಂಸಿಆರ್​ಐನ ಗೋಲ್ಡನ್ ಜುಬ್ಲಿ ಹಾಲ್​ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 2.79 ಕೋಟಿ ರೂ. ಮೊತ್ತದ ರೋಬೋಟಿಕ್ ಮಷಿನ್ ಖರೀದಿಸಲಾಗಿದೆ ಎಂದು ತಿಳಿಸಿದರು.
ಸೋಮವಾರದಂದು ಯಶಸ್ವಿ ಚಿಕಿತ್ಸೆ ನೀಡಲಾಗಿದೆ. ಎರಡರಿಂದ ಎರಡೂವರೆ ಗಂಟೆಯಲ್ಲಿ ಶಸ್ತ್ರಚಿಕಿತ್ಸೆ ಪೂರ್ಣಗೊಂಡಿದೆ ಎಂದು ಹೇಳಿದರು.
ಬಿಪಿಎಲ್ ಹಾಗೂ ಎಬಿಆರ್​ಕೆ ಕಾರ್ಡ್ ಇರುವುದರಿಂದ ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ. ಖಾಸಗಿಯಾಗಿ ಶಸ್ತ್ರಚಿಕಿತ್ಸೆ ಮಾಡಲು 3 ರಿಂದ 3.30 ಲಕ್ಷ ರೂ. ವೆಚ್ಚ ತಗುಲುತ್ತದೆ ಎಂದರು.
ಗುಣಮಟ್ಟದ ಸರ್ಜರಿ ಮಾಡಲು ರೊಬೋಟಿಕ್ ಶಸ್ತ್ರಚಿಕಿತ್ಸೆ ಅನುಕೂಲವಾಯಿತು. ಮೊದಲ ಬಾರಿಗೆ ರೊಬೋಟಿಕ್ ಸರ್ಜರಿ ಮಾಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ, ಡಾ. ಎಸ್.ಎಫ್. ಕಮ್ಮಾರ, ಡಾ. ವಿನಯ ಪವಾರ, ಡಾ. ರಾಜಶೇಖರ ದ್ಯಾಬೇರಿ, ಡಾ. ವೆಂಕಟೇಶ ಮೂಲಿಮನಿ, ಡಾ. ಎ.ಎ. ಹೊಸಂಗಡಿ, ಡಾ. ಲಕ್ಷ್ಮೀಕಾಂತ ಲೋಕೋರೆ ಸುದ್ದಿಗೋಷ್ಠಿಯಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net