(robbery) ಚಿನ್ನಾಭರಣ ದರೋಡೆ ಮಾಡಿದ್ದವರ ಬಂಧನ

ನಾಲ್ವರು ಆರೋಪಿಗಳಿಂದ (robbery) ಜಪ್ತಿ ಮಾಡಿರುವ ನಗದು.
ನಾಲ್ವರು ಆರೋಪಿಗಳಿಂದ (robbery) ಜಪ್ತಿ ಮಾಡಿರುವ ನಗದು.
Published on
ಹುಬ್ಬಳ್ಳಿ: ಐದಾರು ಜನರ ತಂಡವು ಚಿನ್ನದ ವ್ಯಾಪಾರಿಯಿಂದ 2 ಕೆಜಿ 942 ಗ್ರಾಂ ಚಿನ್ನಾಭರಣ ಹಾಗೂ 2 ಲಕ್ಷ ರೂ. ನಗದು ದರೋಡೆ (robbery) ಮಾಡಿ ಅಪಹರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾಲ್ವರು ಆರೋಪಿಗಳನ್ನು ಇಲ್ಲಿಯ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮುಂಬೈ ಥಾಣೆಯ ಅಂಕುಶ ಕದಂ, ವಿಲಾಸ ಮೋಹಿತೆ, ಮುಂಬೈ ಕಲ್ಯಾಣದ ಚಂದ್ರಶೇಖರ ಅಲಿಯಾಸ್ ರಾಕೇಶ ಜಾಧವ, ಗುಜರಾತ ವಡೋದರದ ಜಿನ್ನೇಶಕುಮಾರ ಬಂಧಿತರು.
ನ. 19ರಂದು ನಗರದ ಹಳೇ ಬಸ್ ನಿಲ್ದಾಣ ಮುಂಭಾಗದಲ್ಲಿ ಚಿನ್ನದ ವ್ಯಾಪಾರಿಗೆ ವಿವಿಧ ತನಿಖಾ ಸಂಸ್ಥೆಗಳ ಅಧಿಕಾರಿಗಳೆಂದು ಹೇಳಿ ತಮ್ಮ ಐಡಿ ಕಾರ್ಡ್ ತೋರಿಸಿ ಬೆದರಿಕೆ ಹಾಕಿದ್ದರು. ಒತ್ತಾಯ ಪೂರ್ವಕವಾಗಿ ತಮ್ಮ ವಾಹನದಲ್ಲಿ ಹತ್ತಿಸಿಕೊಂಡು ಬೆಳಗಾವಿ ಕಡೆಗೆ ಹೋಗಿದ್ದರು. ಮಾರ್ಗ ಮಧ್ಯದಲ್ಲಿ ಅವರನ್ನು ಕೆಳಗಿಳಿಸಿ ಅವರಿಂದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.
ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಪ್ರಕರಣದ ತನಿಖೆಯನ್ನು ಸಿಸಿಬಿ ವಿಭಾಗಕ್ಕೆ ಹಸ್ತಾಂತರಿಸಲಾಗಿತ್ತು. ಆರೋಪಿಗಳನ್ನು ಉತ್ತರ ಪ್ರದೇಶದ ಗೋರಖಪುರ ಪಟ್ಟಣದಲ್ಲಿ ಬಂಧಿಸಲಾಗಿದೆ.
ಬಂಧಿತರಿಂದ 6,65,284 ರೂ. ಬೆಲೆ ಬಾಳುವ 56.26 ಗ್ರಾಂ ಚಿನ್ನದ ಒಡವೆಗಳು, 60,000 ರೂ. ನಗದು ಹಾಗೂ 7 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನುಳಿದ ಆರೋಪಿಗಳು ತಲೆಮರಿಸಿಕೊಂಡಿದ್ದು, ಆರೋಪಿಗಳು ಹೊರ ರಾಜ್ಯದವರೆಂದು ತಿಳಿದು ಬಂದಿದೆ. ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net