ಮತದಾರರ ಪಟ್ಟಿ ತಪ್ಪದೇ ಪರಿಷ್ಕರಿಸಿ voter

voter ಹುಬ್ಬಳ್ಳಿಯ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಎಸ್​ಐಆರ್ ಕುರಿತ ಸಭೆಯಲ್ಲಿ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಮಾತನಾಡಿದರು. ಅಶೋಕ ಕಾಟವೆ, ಲಿಂಗರಾಜ ಪಾಟೀಲ, ಸಂಜಯ ಕಪಟಕರ, ಶಿವು ಮೆಣಸಿನಕಾಯಿ ಹಾಗೂ ಇತರರಿದ್ದರು.
voter ಹುಬ್ಬಳ್ಳಿಯ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಎಸ್​ಐಆರ್ ಕುರಿತ ಸಭೆಯಲ್ಲಿ ಮಹಾನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಮಾತನಾಡಿದರು. ಅಶೋಕ ಕಾಟವೆ, ಲಿಂಗರಾಜ ಪಾಟೀಲ, ಸಂಜಯ ಕಪಟಕರ, ಶಿವು ಮೆಣಸಿನಕಾಯಿ ಹಾಗೂ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮತದಾನದಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು.
  • ಮತದಾರರ ಪಟ್ಟಿ ಪರಿಷ್ಕರಣೆ ಮಾಡಿ.
  • ಬಿಎಲ್​ಎ 1 ಹಾಗೂ ಬಿಎಲ್​ಎ2 ಗಳ ಪಾತ್ರ ಹೆಚ್ಚಾಗಿದೆ.
ಇಲ್ಲಿನ ಅರವಿಂದ ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಎಸ್​ಐಆರ್ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.
2002ರಲ್ಲಿ ಎಸ್​ಐಆರ್ ನಡೆದಿತ್ತು. ಇದೀಗ, 23 ವರ್ಷಗಳ ನಂತರ 2026ರಲ್ಲಿ ಎಸ್​ಐಆರ್ ನಡೆಯುತ್ತಿದೆ. ಭವಿಷ್ಯದಲ್ಲಿ ಎಸ್​ಐಆರ್ ಮತ್ತೆ ಯಾವಾಗ ನಡೆಯುತ್ತದೆ ಎಂಬುದು ಗೊತ್ತಿಲ್ಲ ಎಂದು ಹೇಳಿದರು.
ಧಾರವಾಡ ಜಿಲ್ಲಾ ಎಸ್​ಐಆರ್ ಸಂಯೋಜಕ ಸಂಜಯ ಕಪಟಕರ ಮಾತನಾಡಿ, ಏಪ್ರಿಲ್ 1 ರಿಂದ ನಡೆಯುವ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ವಿಶೇಷವಾಗಿ ಬಿಎಲ್​ಎ 1 ಹಾಗೂ ಬಿಎಲ್​ಎ2 ಗಳ ಪಾತ್ರ ಹೆಚ್ಚಾಗಿದೆ.
ಪಕ್ಷದ ಎಲ್ಲ ಪ್ರಮುಖರು ಮನೆ ಮನೆಗೆ ತೆರಳಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿ, ನಿಜವಾದ ಭಾರತೀಯರು ಮತದಾನದಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಶಿವು ಮೆಣಸಿನಕಾಯಿ, ಬಸವರಾಜ ಗರಗ, ಮೇಯರ್ ಜ್ಯೋತಿ ಪಾಟೀಲ, ಮಾಜಿ ಶಾಸಕ ಅಶೋಕ ಕಾಟವೆ, ಪ್ರಮುಖರಾದ ಲಿಂಗರಾಜ ಪಾಟೀಲ, ಶಂಕರ ಶೇಳಕೆ ಹಾಗೂ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net