ಧಾರವಾಡ ಜಿಪಂ ಸಿಇಒ ಭುಬನೇಶ ಪಾಟೀಲ ಅವರಿಂದ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿ ಪರಿಶೀಲನೆ
Published on:
Copied
Follow Us
ಧಾರವಾಡ: ಧಾರವಾಡ ಜಿಲ್ಲೆಯ ಗ್ರಾಮಗಳಿಗೆ ಕುಡಿಯುವ ನೀರು ಕಲ್ಪಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದಂತೆ ಸವದತ್ತಿ ತಾಲೂಕಿನ ಹಿರೇಉಳ್ಳಿಗೇರಿಯಲ್ಲಿ ನಡೆಯುತ್ತಿರುವ ಡಿಬಿಒಟಿ ಜಲಶುದ್ಧೀಕರಣ ಘಟಕದ ಕಾಮಗಾರಿಗಳ ಸ್ಥಳಕ್ಕೆ ಧಾರವಾಡ ಜಿಪಂ ಸಿಇಒ ಭುವನೇಶ ಪಾಟೀಲ ಈಚೆಗೆ ಭೇಟಿ ನೀಡಿ, ಪರಿಶೀಲಿಸಿದರು.
ಇಂಟೇಕ್‌ನಿಂದ ಜಲಶುದ್ಧೀಕರಣ ಘಟಕದವರೆಗೆ ಯಶಸ್ವಿಯÁಗಿ ನಡೆದ ಪ್ರಾಯೋಗಿಕ ನೀರು ಹರಿವಿನ ಕಾರ್ಯವನ್ನು ವೀಕ್ಷಿಸಿದರು. ಜಲಶುದ್ಧೀಕರಣ ಘಟಕದಲ್ಲಿರುವ ಏರೇಟರ್ ಕ್ಲಾರಿಫ್ಲೋಕ್ಯುಲೇಟರ್ ಹಾಗೂ ಫಿಲ್ಟರ್ ಹೌಸ್ ಕಾರ್ಯ ವಿಧಾನ ವೀಕ್ಷಿಸಿದರು.
ಬಳಿಕ ಜಲಶುದ್ಧೀಕರಣ ಘಟಕದಿಂದ ಧಾರವಾಡ ತಾಲೂಕಿನ ಹೆಬ್ಬಳ್ಳಿ ಹಾಗೂ ಶಿವಳ್ಳಿ ಗ್ರಾಮಗಳಲ್ಲಿರುವ ಎರಡು ಘಟಕಗಳಿಗೆ ನೀರನ್ನು ಪಂಪ್ ಮಾಡುವ ಕಾರ್ಯದ ಮಾಹಿತಿ ಪಡೆದರು.
ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ಬಳಿಕ ಸಿಇಒ ಅವರು, ಗುತ್ತಿಗೆದಾರರಿಗೆ ಇದೇ ಆಗಸ್ಟ್ ನೊಳಗೆ ಕನಿಷ್ಠ 126 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಆರಂಭವಾಗುವಂತೆ ಹಾಗೂ ಒಂದು ವಾರದೊಳಗೆ 24 ಗ್ರಾಮಗಳಿಗೆ ನೀರು ಸರಬರಾಜು ಪ್ರಾರಂಭವಾಗುವಂತೆ ಅಗತ್ಯ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ ನೀಡಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಧಾರವಾಡ ಇಇ ಜಗದೀಶ ಪಾಟೀಲ, ಕಲಘಟಗಿ ಎಇಇ ಎಚ್.ಪಿ. ರಜಪೂರ, ನವಲಗುಂದ ಎಇಇ ಸಂಗಪ್ಪ ಲಂಗೋಟಿ, ಹುಬ್ಬಳ್ಳಿ ಎಇಇ ಅಜಾಜ ನಾಯ್ಕರ ಇದ್ದರು.