ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೂರ್ನಾಲ್ಕು ಸಚಿವರ ಮನೆ, ಕಚೇರಿಗಳ ಮೇಲೆ ಇಡಿ ದಾಳಿ ನಡೆಯಲಿದೆ ಎಂಬ ಹೇಳಿಕೆ ಮೂಲಕ ತಮ್ಮ ಸಂಪುಟದಲ್ಲಿ ಭ್ರಷ್ಟರು ಇದ್ದಾರೆ ಎಂಬುದನ್ನು ಮುಖ್ಯಮಂತ್ರಿ ಅವರು ಒಪ್ಪಿಕೊಂಡಂತಾಗಿದೆ ಎಂದರು.
ಇಡಿ ದಾಳಿಗೆ ಒಳಗಾಗಬಹುದಾದ ಸಚಿವರ ಪಟ್ಟಿಯನ್ನು ಮುಖ್ಯಮಂತ್ರಿ ಅವರು ಬಿಡುಗಡೆಗೊಳಿಸಲಿ. ಆ ಸಚಿವರ ಮೇಲೆ ಭ್ರಷ್ಟಾಚಾರದ ಬಗ್ಗೆ ಪ್ರಕರಣ ದಾಖಲಿಸಲಿ.
ಸಚಿವ ಸತೀಶ ಜಾರಕಿಹೊಳಿ ಅವರ ಮನೆ ಮೇಲೆ ನಡೆದ ಇಡಿ ದಾಳಿಯಲ್ಲಿ ರಾಜಕೀಯ ಹಸ್ತಕ್ಷೇಪ ಇಲ್ಲ. ಯಾವುದೇ ದಾಳಿ ನಡೆಸುವ ಮುಂಚೆ ಇಡಿಯವರು ಸಾಕಷ್ಟು ಸಾಕ್ಷಿಗಳನ್ನು ಕಲೆ ಹಾಕುತ್ತಾರೆ. ದಾಳಿಯಲ್ಲಿ ಸಿಗುವ ದಾಖಲೆಗಳನ್ನು ತನಿಖೆಗೊಳಪಡಿಸುತ್ತಾರೆ ಎಂದು ಹೇಳಿದರು.