Renuka Yallamma Devi fair: ಯಲ್ಲಮ್ಮನ ಭಂಡಾರದಲ್ಲಿ ಮಿಂದೆದ್ದ ಭಕ್ತರು

ಉಪ್ಪಿನಬೆಟಗೇರಿ ಹೊಸಪೇಟಿ ಓಣಿಯಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಜಾತ್ರೆ ಅಂಗವಾಗಿ ಭಾನುವಾರ ರೇಣುಕಾ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವ ಉಪ್ಪಿನಬೆಟಗೇರಿ ಹಾಗೂ ಹನುಮನಕೊಪ್ಪ ಗ್ರಾಮಗಳಲ್ಲಿ ವಿಜೃಂಭಣೆಯಿಂದ ಜರುಗಿತು.
ಉಪ್ಪಿನಬೆಟಗೇರಿ ಹೊಸಪೇಟಿ ಓಣಿಯಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಜಾತ್ರೆ ಅಂಗವಾಗಿ ಭಾನುವಾರ ರೇಣುಕಾ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವ ಉಪ್ಪಿನಬೆಟಗೇರಿ ಹಾಗೂ ಹನುಮನಕೊಪ್ಪ ಗ್ರಾಮಗಳಲ್ಲಿ ವಿಜೃಂಭಣೆಯಿಂದ ಜರುಗಿತು.
Published on
ಉಪ್ಪಿನಬೆಟಗೇರಿ: ಉಪ್ಪಿನಬೆಟಗೇರಿ ಹೊಸಪೇಟಿ ಓಣಿಯಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಜಾತ್ರೆ ಅಂಗವಾಗಿ ಭಾನುವಾರ ಯಲ್ಲಮ್ಮ ನಿನ್ನಾಲ್ಕ ಉಧೋ....ಉಧೋ.. ಉಧೋ ಜಯ ಘೋಷಣೆಗಳ ಮಧ್ಯೆ ಭಂಡಾರ ಎರಚುತ್ತ ರೇಣುಕಾ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ಜರುಗಿತು.
ಭಾನುವಾರ ಬೆಳಿಗ್ಗೆ 6 ಗಂಟೆಗೆ ಬ್ರಾಹ್ಮಿ ಮುಹೂರ್ತದಲ್ಲಿ ಗ್ರಾಮದ ಹದಿಮೂರ ಕೇರಿ ಓಣಿಯ ವೇ.ಮೂ. ಈರಯ್ಯಸ್ವಾಮಿ ಕೆಂಬಾಗಿಮಠ ಹಾಗೂ ದೇವಸ್ಥಾನದ ಅರ್ಚಕ ಅಡಿವೆಪ್ಪ ಪೂಜಾರ ಇವರಿಂದ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ಯಲ್ಲಮ್ಮದೇವಿಗೆ ಹಾಗೂ ಪಂಚಲೋಹದ ಉತ್ಸವ ಮೂರ್ತಿಗೆ ರುದ್ರಾಭಿಷೇಕ, ಪಂಚಾಭಿಷೇಕ ಸೇರಿದಂತೆ ವಿವಿಧ ಬಗೆಯ ಪೂಜಾ ಕೈಂಕರ್ಯ ನೆರವೇರಿದವು. ನಂತರ ಯಲ್ಲಮ್ಮದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ಅದ್ದೂರಿಯಾಗಿ ಜರುಗಿತು. ಭಾರತ ಹುಣ್ಣಿಮೆಯ ನಿಮಿತ್ತ ಸಾವಿರಾರು ಭಕ್ತರು ಶ್ರೀದೇವಿಯ ಗುಡಿಗೆ ಬಂದು ಹಡ್ಡಲಿಗೆ ತುಂಬಿಸಿ ಭಕ್ತಿ ಸಮರ್ಪಿಸಿದರು. ನಂತರ ಭಕ್ತರಿಗೆ ಮಹಾಪ್ರಸಾದ ಜರುಗಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net