ಹೊಸ ಡಸ್ಟರ್ ಅಥೆಂಟಿಕ್, ಎವೋಲ್ಯೂಷನ್, ಟೆಕ್ನೋ, ಟಕ್ನೋ ಪ್ಲಸ್ ಮತ್ತು ಐಕಾನಿಕ್ ಎಂಬ ಐದು ಮಾದರಿಗಳನ್ನು ಹೊಂದಿದೆ. ಫುಲ್ ಎಲ್‌ಇಡಿ ಲೈಟಿಂಗ್, ಗೂಗಲ್ ಇನ್‌ಬಿಲ್ಟ್ ಹೊಂದಿರುವ ಓಪನ್‌ಆರ್ ಲಿಂಗ್ ಮಲ್ಟಿಮೀಡಿಯಾ, ಪಾನೋರಮಿಕ್ ಸನ್‌ರೂಫ್ ಮತ್ತು ಎಲೆಕ್ಟ್ರಿಕ್ ಪವರ್ಡ್ ಟೈಲ್‌ಗೇಟ್, ವೆಂಟಿಲೇಟೆಡ್ ಮುಂಭಾಗದ ಸೀಟುಗಳು, ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್, 17 ಎಡಿಎಎಸ್ ಫೀಚರ್, 360 ಡಿಗ್ರಿ ಕ್ಯಾಮರಾಗಳಿವೆ. ಮಾರುಕಟ್ಟೆಯಾದ್ಯಂತ ಒಟ್ಟು ಪೆಟ್ರೋಲ್ ವೇರಿಯಂಟ್ ಬುಕಿಂಗ್‌ಗಳಲ್ಲಿ ಶೇ. 90ಕ್ಕಿಂತ ಹೆಚ್ಚು ಪಾಲು ಹೊಂದಿರುವ ಟರ್ಬೋ ಟಿಸಿಇ 160 ಆವೃತ್ತಿಯು ಬಹಳ ಬೇಡಿಕೆ ಸೃಷ್ಟಿಸಿದೆ. ಒಟ್ಟು 10.49 ಲಕ್ಷ ರೂ.ನಿಂದ 22 ಲಕ್ಷ ರೂ.ವರೆಗೆ ದರಗಳಿವೆ ಎಂದರು.