ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀ ಚನ್ನಬಸವ ದೇಶಿಕೇಂದ್ರ ಮಹಾಸ್ವಾಮಿಗಳ ಟ್ರಸ್ಟ್ನ ಉಪಾಧ್ಯಕ್ಷ ಆರ್.ಜಿ. ಪಾಟೀಲ, ಐರಣಿ ಹೊಳೆ ಸಂಸ್ಥಾನಮಠದ ಐರಾವತ ಪೀಠದ ಜಗದ್ಗುರು ಶ್ರೀ ಬಸವರಾಜ ದೇಶಿಕೇಂದ್ರ ಸ್ವಾಮೀಜಿ ಹಾಗೂ ನೂತನ ಪಟ್ಟಾಧ್ಯಕ್ಷರಾದ ಶ್ರೀ ಭಾರತಿ ಸಿದ್ಧಾರೂಢ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದು ತಿಳಿಸಿದರು.
18ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ. 19ರಂದು ಶ್ರೀಗಳ ಅಮೃತ ಶಿಲಾ ಮೂರ್ತಿ ಮೆರವಣಿಗೆ, 22ಕ್ಕೆ ಸಾಮೂಹಿಕ ವಿವಾಹ, 24ಕ್ಕೆ ರಾತ್ರಿ ಹೋಮ, ಹವನ ನಡೆಯಲಿದೆ.
19ರಿಂದ 25ರವರೆಗೆ ನಿತ್ಯ ಸಂಜೆ 6 ಗಂಟೆಗೆ ಧಾರ್ವಿುಕ ಶರಣ ಸಮ್ಮೇಳನ ನಡೆಯಲಿದೆ. ನಾಡಿನ ಪ್ರಮುಖ ಮಠಾಧೀಶರು ಭಾಗವಹಿಸುವರು.
ಧಾರ್ವಿುಕ ಸಮ್ಮೇಳನವನ್ನು 23ರಂದು ಬಾಲೆಹೊಸೂರಿನ ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹಾಗೂ 24ರಂದು ಗದಗ ತೋಂಟದಾರ್ಯ ಸಂಸ್ಥಾನ ಮಠದ ಶ್ರೀ ತೋಂಟದ ಸಿದ್ದರಾಮ ಸ್ವಾಮೀಜಿ ಉದ್ಘಾಟಿಸುವರು. 25ರಂದು ಮಧ್ಯಾಹ್ನ 12ಕ್ಕೆ ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ದೇವಸ್ಥಾನಗಳ ಉದ್ಘಾಟನೆಯನ್ನು ಸುಳ್ಳ ಪಂಚಗ್ರಹ ಹಿರೇಮಠದ ಶ್ರೀ ಶಿವಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸುವರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದ ಬಸವರಾಜ ಬೊಮ್ಮಾಯಿ, ಸಚಿವ ಎಚ್.ಕೆ. ಪಾಟೀಲ, ಶಾಸಕರಾದ ಮಹೇಶ ಟೆಂಗಿನಕಾಯಿ, ಪ್ರಸಾದ ಅಬ್ಬಯ್ಯ, ಇತರರು ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದರು.