ಚಿಟಗುಪ್ಪಿಯಲ್ಲಿ ನಿಯಮಿತ ವೆಲ್​ನೆಸ್ ಸೆಂಟರ್ ಆರಂಭ wellness

wellness ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಎಸ್​ಎನ್​ಎಲ್​ನ ನಿವೃತ್ತ ಉಪ ಮಹಾಪ್ರಬಂಧಕ ಎನ್.ಕೆ. ಗಂದಿಗವಾಡ.
wellness ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಎಸ್​ಎನ್​ಎಲ್​ನ ನಿವೃತ್ತ ಉಪ ಮಹಾಪ್ರಬಂಧಕ ಎನ್.ಕೆ. ಗಂದಿಗವಾಡ.
Published on
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಿಎಸ್​ಎನ್​ಎಲ್​ನ ನಿವೃತ್ತ ಉಪ ಮಹಾಪ್ರಬಂಧಕ ಎನ್.ಕೆ. ಗಂದಿಗವಾಡ, ಇದರಿಂದ ಕೇಂದ್ರ ಸರ್ಕಾರದ ನಿವೃತ್ತ ನೌಕರರಿಗೆ, ಸೇವೆಯಲ್ಲಿರುವ ನೌಕರರಿಗೆ ಬಿಎಸ್​ಎಫ್, ಸಿಆರ್​ಪಿಎಫ್ ಸೈನಿಕರಿಗೆ, ಅರೆ ಸೈನಿಕ ಪಿಂಚಣಿದಾರರಿಗೆ (ರೈಲ್ವೆ ಮತ್ತು ರಕ್ಷಣಾ ಇಲಾಖೆ ಹೊರತುಪಡಿಸಿ) ಸಾಕಷ್ಟು ಅನುಕೂಲವಾಗಲಿದೆ ಎಂದರು.
ಉತ್ತರ ಕರ್ನಾಟಕದಲ್ಲಿ ವೆಲ್​ನೆಸ್ ಸೆಂಟರ್ ಇರಲಿಲ್ಲ. ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗಬೇಕಿತ್ತು. ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗೆ ಮೊದಲು ಹಣ ಪಾವತಿಸಿ, ನಂತರ ಮರು ಪಾವತಿಗೆ ಅರ್ಜಿ ಸಲ್ಲಿಸಬೇಕಿತ್ತು.
ಸಿಜಿಎಚ್​ಎಸ್ ಯೋಜನೆಯಡಿ ಹೊರರೋಗಿ ಮತ್ತು ಒಳ ರೋಗಿಗಳಿಗೆ ಚಿಕಿತ್ಸೆಗಳು ಸಂಪೂರ್ಣ ಉಚಿತ ಸಿಗುತ್ತವೆ ಎಂದು ಹೇಳಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಪ್ರಯತ್ನದಿಂದಾಗಿ ಇಲ್ಲಿ ನಿಯಮಿತ ವೆಲ್​ನೆಸ್ ಸೆಂಟರ್ ನಿರ್ವಣಗೊಂಡಿದೆ. 2022ರಲ್ಲಿ ಹುಬ್ಬಳ್ಳಿಗೆ ವೆಲ್​ನೆಸ್ ಸೆಂಟರ್ ಅನ್ನು ಎಕ್ಸ್​ಟೆನ್ಶನ್ ಕೌಂಟರ್ ರೂಪದಲ್ಲಿ ಮಂಜೂರು ಮಾಡಲಾಯಿತು. ಇದೀಗ, ಚಿಟಗುಪ್ಪಿ ಆಸ್ಪತ್ರೆಯ ಹೊಸ ಕಟ್ಟಡದಲ್ಲಿ ನಿಯಮಿತ ವೆಲ್​ನೆಸ್ ಸೆಂಟರ್ ಆರಂಭಗೊಂಡಿದೆ ಎಂದರು.
ಹುಬ್ಬಳ್ಳಿ, ಧಾರವಾಡ, ಗದಗ ಮತ್ತು ರಾಣೆಬೆನ್ನೂರ ಶಾಖೆಗಳಲ್ಲಿ ಸಿಜಿಎಚ್​ಎಸ್ ಹೊಸ ಕಾರ್ಡ್​ಗಳಿಗೆ ಅರ್ಜಿ ಸಲ್ಲಿಸಿ, ಪಿಂಚಣಿದಾರರು ವೈದ್ಯಕೀಯ ಸೌಲಭ್ಯ ಪಡೆದುಕೊಳ್ಳುವಂತೆ ತಿಳಿಸಿದರು.
ಎಸ್.ಎಲ್. ಪೂಜಾರ, ಇ.ಎಚ್. ಶಿವಾನಂದ, ಎಂ.ಎನ್. ಗೋರಪಡೆ, ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net