ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳ ರೈತ ಮುಖಂಡರ, ರೈತರ ಸಭೆ ನಡೆಸಿ ಮಾತನಾಡಿದರು. ಪ್ರಸಕ್ತ ಸಾಲಿನಲ್ಲಿ ಫ್ರೂಟ್ಸ್ ಐಡಿ ಹೊಂದಿರುವ ರೈತರಿಗೆ ಮಾತ್ರ ರಸಗೊಬ್ಬರ ವಿತರಿಸಲು ಸರ್ಕಾರ ಸೂಚಿಸಿದೆ. ಜಿಲ್ಲೆಯ 3,21,762 ಜಮೀನುಗಳು (ತಾಕುಗಳು) ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಆಗಬೇಕಿದ್ದು, ಇದರಲ್ಲಿ ಈಗಾಗಲೇ 2,47,145 ಜಮೀನುಗಳು ನೋಂದಣಿಯಾಗಿವೆ. 74,617 ಜಮೀನುಗಳು ನೋಂದಣಿ ಪ್ರಗತಿಯಲ್ಲಿದೆ. ಒಟ್ಟಾರೆ ಶೇ. 77ರಷ್ಟು ನೋಂದಣಿಯಾಗಿವೆ. ಜಿಲ್ಲೆಯ ಒಟ್ಟು 2,44,870 ರೈತರು ಫ್ರೂಟ್ಸ್ ಗುರಿತನ ಸಂಖ್ಯೆ (ಐಡಿ) ಹೊಂದಿದ್ದಾರೆ ಎಂದರು.