56,432 ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿ

ಎಐಡಿವೈಒ ದಿಂದ ಮುಖ್ಯಮಂತ್ರಿಗೆ ಮನವಿ ರವಾನೆ
ಎಐಡಿವೈಒ ದಿಂದ ಮುಖ್ಯಮಂತ್ರಿಗೆ ಮನವಿ ರವಾನೆ
Published on
ಧಾರವಾಡ: ರಾಜ್ಯ ಸರ್ಕಾರ ಚಳಿಗಾಲ ಅಧಿವೇಶನದಲ್ಲಿ ಹೇಳಿದಂತೆ 56,432 ಹುದ್ದೆಗಳಿಗೆ ಈ ಕೂಡಲೇ ಅಽಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್(ಎಐಡಿವೈಒ) ನೇತೃತ್ವದಲ್ಲಿ ಉದ್ಯೋಗಾಂಕ್ಷಿಗಳು ಮಂಗಳವಾರ ಅಪರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಿದರು.
ಉದ್ಯೋಗಾಕಾಂಕ್ಷಿಗಳ ಸತತ ಹೋರಾಟಗಳ -ಫಲವಾಗಿ ಕಳೆದ ಡಿಸೆಂಬರ್ ಚಳಿಗಾಲದ ಅಧಿವೇಶನದಲ್ಲಿ 56,432 ಹುದ್ದೆಗಳಿಗೆ ಅನುಮೋದನೆ ನೀಡಿ, ಆರು ತಿಂಗಳುಗಳಾದರೂ ಕೆಲವೇ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ವಿವಿಧ ನೆಪಗಳನ್ನು ನೀಡುತ್ತ ನೇಮಕಾತಿ ಪ್ರಕ್ರಿಯೆ ಮುಂದೂಡಲಾಗುತ್ತಿದೆ. ಜತೆಗೆ ವಿವಿಧ ಇಲಾಖೆಗಳ ಸಚಿವರು ಅತೀ ಶೀಘ್ರದಲ್ಲಿ ನೇಮಕಾತಿ ಮಾಡುತ್ತೇವೆ ಎಂದು ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿರುವುದು ಉದ್ಯೋಗಾಕಾಂಕ್ಷಿಗಳಲ್ಲಿ ಭ್ರಮನಿರಸನ ಉಂಟುಮಾಡಿದೆ.
ರಾಜ್ಯ ಸರ್ಕಾರವು ನೇಮಕಾತಿಗಳಿಗೆ ನೀಡಿರುವ ಐದು ವರ್ಷಗಳ ವಯೋಮಿತಿ ಸಡಿಲಿಕೆಯು ಉಪಯೋಗಕ್ಕೆ ಬಾರದಂತಾಗುತ್ತದೆ. ಹೀಗಾಗಿ ರಾಜ್ಯ ಸರ್ಕಾರ ನುಡಿದಂತೆ 56,432 ಹುದ್ದೆಗಳಿಗೆ ಕೂಡಲೇ ಅಧಿಸೂಚನೆ ಹೊರಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.
ಕೆಪಿಎಸ್‌ಸಿಯಲ್ಲಿ ಅಕ್ರಮಗಳನ್ನು ತೊಡೆದುಹಾಕಿ, ಪಾರದರ್ಶಕ ನೇಮಕಾತಿಗೆ ಪಿ.ಸಿ. ಹೋಟಾ ಸಮಿತಿ ವರದಿ ತಕ್ಷಣ ಜಾರಿಗೊಳಿಸಬೇಕು. ಎಲ್ಲ ನೇಮಕಾತಿಗಳ ದುಬಾರಿ ಅರ್ಜಿ ಶುಲ್ಕ ಕೈಬಿಡಬೇಕು. ಈಚೆಗೆ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಗೆ ಅರ್ಜಿ ಆಹ್ವಾನಿಸಿತ್ತು. ಅರ್ಜಿ ಸಲ್ಲಿಸುವಾಗ ಸರ್ವರ್‌ನಲ್ಲಿ ತಾಂತ್ರಿಕ ದೋಷ ಎದುರಾಗಿದೆ. ಹೀಗಾಗಿ ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಬೇಕು ಎಂದು ಅಪರ ಜಿಲ್ಲಾಽಕಾರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಭವಾನಿಶಂಕರ್ ಎಸ್ ಗೌಡ, ಯಲ್ಲಪ್ಪ ದೊರೆ, ಅಮೃತ್ ಕೊಂಡಿಕೊಪ್ಪ, ಪುನೀತ್ ಹೊನ್ನಣ್ಣವರ, ಮಲ್ಲೇಶ ಚೌವ್ಹಾಣ, ಸಿದ್ದರಾಮ ಬಿಜ್ಜರಗಿ, ನೌಮನ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net