ನಿತ್ಯ ಸರಾಸರಿ 2,221 ವ್ಯಾಗನ್ಗಳನ್ನು ಲೋಡ್ ಮಾಡಲಾಗಿದೆ.
ಜೂನ್ 2026ರಲ್ಲಿ ದಾಖಲಾದ ಒಟ್ಟು ಆದಾಯ 733.23 ಕೋಟಿ ರೂ.
ಪ್ರಯಾಣಿಕರ ಸಂಖ್ಯೆಯಲ್ಲೂ ಶೇ. 4.36 ರಷ್ಟು ಪ್ರಗತಿ
ಹುಬ್ಬಳ್ಳಿ :
ಜೂನ್ನಲ್ಲಿ 4.18 ಮಿಲಿಯನ್ ಟನ್ ಸರಕು ಸಾಗಣೆ ಮಾಡಿದ್ದು, ಕಳೆದ 2025ರ ಜೂನ್ ಅವಧಿಯ (3.98 ಮಿಲಿಯನ್ ಟನ್) ಸಾಧನೆಗಿಂತ ಶೇ. 5.2ರಷ್ಟು ಹೆಚ್ಚಾಗಿದೆ.
ಜೂನ್ ತಿಂಗಳ ಇತಿಹಾಸದಲ್ಲೇ ಇದು ಇದುವರೆಗೆ ದಾಖಲಾದ ಅತ್ಯಧಿಕ ಸಾಧನೆಯಾಗಿದೆ. ಇದರೊಂದಿಗೆ, ದೈನಂದಿನ ಸರಾಸರಿ ವ್ಯಾಗನ್ ಲೋಡಿಂಗ್ನಲ್ಲೂ ಹೊಸ ದಾಖಲೆ ನಿಮಾಣವಾಗಿದೆ.
ನಿತ್ಯ ಸರಾಸರಿ 2,221 ವ್ಯಾಗನ್ಗಳನ್ನು ಲೋಡ್ ಮಾಡಲಾಗಿದೆ. ಇದು ಕಳೆದ ವರ್ಷದ (2,143 ವ್ಯಾಗನ್ಗಳು) ಸಾಧನೆಗಿಂತ ಶೇ. 3.6ರಷ್ಟು ಅಧಿಕವಾಗಿದೆ.
ಕಬ್ಬಿಣದ ಅದಿರು 1.69 ಮಿಲಿಯನ್ ಟನ್ (ಎಂಟಿ) ಸಾಗಣೆಯಾಗಿದ್ದು, ಶೇ. 6.3 ರಷ್ಟು ಬೆಳವಣಿಗೆ ಕಂಡಿದೆ. ಉಕ್ಕು (ಸ್ಟೀಲ್) 0.90 ಎಂಟಿ ಸಾಗಣೆಯೊಂದಿಗೆ ಶೇ. 7.4 ರಷ್ಟು ಏರಿಕೆಯಾಗಿದೆ.
ಆರ್ಎಂಎಸ್ಪಿ ಶೇ. 34.5 ರಷ್ಟು ಭಾರಿ ಹೆಚ್ಚಳ ಕಂಡುಬಂದಿದ್ದು, 0.23 ಎಂಟಿ ತಲುಪಿದೆ. ಖನಿಜ ತೈಲ 0.21 ಎಂಟಿ ಸಾಗಣೆಯಾಗಿದ್ದು, ಶೇ. 15.8 ರಷ್ಟು ಪ್ರಗತಿ ಸಾಧಿಸಿದೆ.
ಸಿಮೆಂಟ್ 0.03 ಎಂಟಿ ಸಾಗಣೆೆಯೊಂದಿಗೆ ಶೇ. 32 ರಷ್ಟು ತೇಜಿ ಕಂಡಿದೆ. ಕಂಟೇನರ್ ಸಾಗಣೆ 0.09 ಎಂಟಿ ತಲುಪಿದ್ದು, ಶೇ. 15.8 ರಷ್ಟು ಏರಿಕೆಯಾಗಿದೆ.
ಜೂನ್ 2026ರಲ್ಲಿ ದಾಖಲಾದ ಒಟ್ಟು ಆದಾಯ 733.23 ಕೋಟಿ ರೂ.ಗಳಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ. 1.55 ರಷ್ಟು (11.22 ಕೋಟಿ ರೂ.) ಹೆಚ್ಚಾಗಿದೆ.
ಪ್ರಯಾಣಿಕರ ವಿಭಾಗದಿಂದ ಬಂದ ಆದಾಯ 290.43 ಕೋಟಿ ರೂ.ಗಳಾಗಿದ್ದು, ಶೇ. 15.08 ರಷ್ಟು ಗಮನಾರ್ಹ ಬೆಳವಣಿಗೆ ದಾಖಲಿಸಿದೆ.
ಪ್ರಯಾಣಿಕರ ಸಂಖ್ಯೆಯಲ್ಲೂ ಶೇ. 4.36 ರಷ್ಟು ಪ್ರಗತಿಯಾಗಿದ್ದು, ಒಟ್ಟು 14.85 ಮಿಲಿಯನ್ ಜನ ಸಂಚರಿಸಿದ್ದಾರೆ.
ರೈಲ್ವೆಯ ಪ್ರಮುಖ ಆದಾಯದ ಮೂಲವಾದ ಸರಕು ಸಾಗಣೆಯಿಂದ 402.61 ಕೋಟಿ ರೂ. ಸಂದಾಯವಾಗಿದೆ.
ಪಾರ್ಸೆಲ್ ಸೇವೆಗಳ ಮೂಲಕ 14.30 ಕೋಟಿ ರೂ. (ಶೇ. 5.30 ಏರಿಕೆ) ಗಳಿಕೆಯಾಗಿದೆ. ಉಳಿದಂತೆ ಇತರ ಕೋಚಿಂಗ್ ಆದಾಯದಿಂದ 26.66 ಕೋಟಿ ರೂ. ಹಾಗೂ ಇತರೆ (ಸಂಡ್ರಿ) ಮೂಲಗಳಿಂದ 13.53 ಕೋಟಿ ರೂ. ಆದಾಯ ಬಂದಿದೆ.