ಧಾರವಾಡ: ರೈತರ ಬೆಳೆ ಸಮೀಕ್ಷೆಯ ಡೇಟಾ ಹಾಗೂ ಬೆಳೆ ವಿಮೆ ಅರ್ಜಿಯ ಮಾಹಿತಿ ಹೊಂದಾಣಿಕೆಯಾಗದಿದ್ದರೆ ವಿಮೆ ಪರಿಹಾರ ತಿರಸ್ಕೃತಗೊಳ್ಳುವ ಸಾಧ್ಯತೆ ಇರುತ್ತದೆ. ಕೃಷಿ ಇಲಾಖೆಯ ಇತರೆ ಸವಲತ್ತುಗಳು, ಬೆಂಬಲ ಬೆಲೆ ಯೋಜನೆ ಹಾಗೂ ಪರಿಹಾರ ಪಡೆಯಲು ಸಮೀಕ್ಷೆಯೇ ಆಧಾರವಾಗಿರುತ್ತದೆ. ರೈತರ ಪಹಣಿ (ಆರ್‌ಟಿಸಿ) ಪತ್ರಿಕೆಯಲ್ಲಿ ರೈತರು ಬೆಳೆದ ನಿಖರ ಬೆಳೆ ವಿವರಗಳನ್ನು ಅಽಕೃತವಾಗಿ ದಾಖಲಿಸಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಸ್ನೇಹಲ್ ಆರ್. ತಿಳಿಸಿದ್ದಾರೆ.