recon expo ರೆಕಾನ್​ ಎಕ್ಸಪೋಕ್ಕೆ ಅದ್ದೂರಿ ಚಾಲನೆ

recon expo ಹುಬ್ಬಳ್ಳಿಯ ಗೋಕುಲ ರಸ್ತೆ ವಿಮಾನ ನಿಲ್ದಾಣ ಎದುರಿನ ಮೈದಾನದಲ್ಲಿ ಶುಕ್ರವಾರದಿಂದ ಆರಂಭಗೊಂಡ ಮೂರು ದಿನಗಳ ರೆಕಾನ್​ ಎಕ್ಸಪೋಕ್ಕೆ ಚಾಲನೆ ನೀಡಲಾಯಿತು. ನಟಿ ರಚಿತಾ ರಾಮ್​, ಮಾಜಿ ಸಿಎಂ ಜಗದೀಶ ಶೆಟ್ಟರ್​, ಶಾಕೀರ್​ ಸನದಿ, ಗುರುರಾಜ ಅಣ್ಣಿಗೇರಿ, ಇಸ್ಮಾಯಿಲ್​ ಸಂಶಿ, ಸಂಜಯ ಕೊಠಾರಿ, ಅಮೃತ ಮೆಹರವಾಡೆ, ಸತೀಶ ಮುನವಳ್ಳಿ, ಶಿವಣ್ಣ ಪಾಟೀಲ, ಪ್ರದಿಪ ರಾಯ್ಕರ್​ ಇತರರು ಇದ್ದರು.
recon expo ಹುಬ್ಬಳ್ಳಿಯ ಗೋಕುಲ ರಸ್ತೆ ವಿಮಾನ ನಿಲ್ದಾಣ ಎದುರಿನ ಮೈದಾನದಲ್ಲಿ ಶುಕ್ರವಾರದಿಂದ ಆರಂಭಗೊಂಡ ಮೂರು ದಿನಗಳ ರೆಕಾನ್​ ಎಕ್ಸಪೋಕ್ಕೆ ಚಾಲನೆ ನೀಡಲಾಯಿತು. ನಟಿ ರಚಿತಾ ರಾಮ್​, ಮಾಜಿ ಸಿಎಂ ಜಗದೀಶ ಶೆಟ್ಟರ್​, ಶಾಕೀರ್​ ಸನದಿ, ಗುರುರಾಜ ಅಣ್ಣಿಗೇರಿ, ಇಸ್ಮಾಯಿಲ್​ ಸಂಶಿ, ಸಂಜಯ ಕೊಠಾರಿ, ಅಮೃತ ಮೆಹರವಾಡೆ, ಸತೀಶ ಮುನವಳ್ಳಿ, ಶಿವಣ್ಣ ಪಾಟೀಲ, ಪ್ರದಿಪ ರಾಯ್ಕರ್​ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಟಿ ರಚಿತಾ ರಾಮ್​, ಮಾಜಿ ಸಿಎಂ ಜಗದೀಶ ಶೆಟ್ಟರ್​ ಅವರಿಂದ ಉದ್ಘಾಟನೆ
150ಕ್ಕೂ ಹೆಚ್ಚು ಸ್ಟಾಲ್​ಗಳಲ್ಲಿ ವಿವಿಧ ಬಿಲ್ಡರ್​, ಡೆವಲಪರ್​ಗಳು ತೆರೆದಿರುವ ಮಳಿಗೆಯಲ್ಲಿ ರಿಯಲ್​ ಎಸ್ಟೇಟ್​ ಜಗತ್ತಿನ ಸಮಗ್ರ ಮಾಹಿತಿ ಪಡೆದುಕೊಂಡರು. ಮನೆ, ವಿಲ್ಲಾ, ನಿವೇಶನ, ಅಪಾರ್ಟಮೆಂಟ್​, ಹೀಗೆ ತರಹೇವಾರಿ ಆಸ್ತಿಗಳ ವಿವರ ತಿಳಿದರು. ತಮಗೆ ಸೂಕ್ತವಾಗುವ ಜಾಗ ಯಾವುದು, ಯಾವ ಯೋಜನೆ ನಮ್ಮ ಬಜೆಟ್​ಗೆ ಹೊಂದುತ್ತದೆ ಎಂಬುದನ್ನು ಮಳಿಗೆದಾರರಿಂದ ಕೇಳಿ ತಿಳಿದುಕೊಂಡರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಿಎಂ, ಬೆಳಗಾವಿ ಸಂಸದ ಜಗದೀಶ ಶೆಟ್ಟರ, ಬಿಯಾಂಡ್​ ಬೆಂಗಳೂರು ಪರಿಕಲ್ಪನೆಗೆ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಚಾಲನೆ ನೀಡಲಾಗಿತ್ತು. ಅನೇಕ ಉದ್ಯಮಗಳು ಕರ್ನಾಟಕದ ಬೇರೆಬೇರೆ ನಗರಗಳಿಗೆ ಬಂದವು. ಇದರಿಂದ ರಿಯಲ್​ ಎಸ್ಟೇಟ್​ ಸೇರಿದಂತೆ ಅನೇಕ ಉದ್ಯಮಗಳಿಗೆ ಪೂರಕ ವಾತಾವರಣ ಸೃಷ್ಟಿಯಾಯಿತು ಎಂದು ಅಭಿಪ್ರಾಯಪಟ್ಟರು.

ಆಸ್ತಿ ಮೇಲೆ ಹೂಡಿಕೆ ಮಾಡಿ

ಖ್ಯಾತ ನಟಿ ರಚಿತಾ ರಾಮ್​ ಮಾತನಾಡಿ, ಮೊದಲ ಬಾರಿ ರಿಯಲ್​ ಎಸ್ಟೇಟ್​ ಎಕ್ಸಪೋಗೆ ಬಂದಿದ್ದೇನೆ. ನನ್ನದು ಮನೋರಂಜನೆ ಕ್ಷೇತ್ರ. ಕ್ರೆಡೈ ವತಿಯಿಂದ ಅತ್ಯುತ್ತಮ ಕಾರ್ಯ ಕೈಗೊಳ್ಳಲಾಗಿದೆ. ಮನೆ, ನಿವೇಶನ ತೆಗೆದುಕೊಳ್ಳುವವರಿಗೆ ವೇದಿಕೆ ಒದಗಿಸಿದ್ದಾರೆ. ಇದು ಮೆಚ್ಚುಗೆಯ ಕಾರ್ಯ ಎಂದರು. ರಿಯಲ್​ ಎಸ್ಟೇಟ್​ನಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ ಎಂಬುದು ನನ್ನ ಭಾವನೆ. ಈ ಎಕ್ಸಪೋ ಮೂಲಕ ಸಾರ್ವಜನಿಕರಿಗೆ ಬಿಲ್ಡರ್​ ಮತ್ತು ಡೆವಲಪರ್​ಗಳು ಹೂಡಿಕೆಗೆ ಅಥವಾ ಸ್ವಂತಕ್ಕೆ ಆಸ್ತಿ ಖರೀದಿಸಲು ಉತ್ತಮ ಮಾರ್ಗ ತೋರುತ್ತಾರೆ ಎಂದರು.

ಹುಡಾ ಜಾಗ್ರತವಾಗಿದೆ

ಹುಡಾ ಅಧ್ಯಕ್ಷ ಶಾಕೀರ್​ ಸನದಿ ಮಾತನಾಡಿ, ಅನಧಿಕೃತ ಬಡಾವಣೆಗಳಿಗೆ ವಿದ್ಯುತ್​ ಸೇರಿ ಮೂಲ ಸೌಲಭ್ಯ ಬಂದ್​ ಮಾಡುವಂತಹ ಕಠಿಣ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಪ್ರಾಧಿಕಾರದ ಅಧಿಕಾರಿಗಳು ಸಹ ಜಾಗ್ರತರಾಗಿದ್ದಾರೆ. ಅಂತಹ ಅಕ್ರಮಗಳು ಕಂಡು ಬಂದಾಗ ಗಮನ ಹರಿಸುತ್ತಾರೆ. ಸಸ್ತಾ ಸಿಗುತ್ತದೆ ಎಂದು ಸಾರ್ವಜನಿಕರು ಸಹ ಅಕ್ರಮ ನಿವೇಶನದಲ್ಲಿ ಮನೆ ಕಟ್ಟಬಾರದು ಎಂದು ಹೇಳಿದರು.
ರೆಕಾನ್​ ಉತ್ತಮ ಪ್ರದರ್ಶನ ಮೇಳವಾಗಿದೆ. ಗ್ರಾಹಕರು ಮತ್ತು ಬಿಲ್ಡರ್​ ಮಧ್ಯೆ ಸೇತುವೆಯಾಗಿ ಕೆಲಸ ಮಾಡಲಿದೆ. ಇದಕ್ಕೆ ಹುಡಾದಿಂದ ಎಲ್ಲ ಸಹಕಾರ ನೀಡಲಾಗಿದೆ ಎಂದರು.
ಕ್ರೆಡೈ ಹುಬ್ಬಳ್ಳಿ ಧಾರವಾಡ ಅಧ್ಯಕ್ಷ ಗುರುರಾಜ ಅಣ್ಣಿಗೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 10 ವರ್ಷಗಳಿಂದ ಇಂತಹದೊಂದು ಎಕ್ಸಪೋ ಮಾಡುವ ಚಿಂತನೆ ನಡೆದಿತ್ತು. ಇದೀಗ ಕೈಗೂಡಿದೆ. ಜನರು ಅಧಿಕೃತ ಲೇಔಟ್​ನಲ್ಲೇ ಇನ್ವೆಸ್ಟ್​ ಮಾಡಬೇಕು ಎಂಬುದು ಕ್ರೆಡೈ ಉದ್ದೇಶ. ಈ ದಿಸೆಯಲ್ಲಿ ಎಕ್ಸಪೋ ಸಹಕಾರಿಯಾಗಲಿದೆ ಎಂದರು.
ಅಧ್ಯಕ್ಷ ಅಮೃತ ಮೆಹರವಾಡೆ ಸ್ವಾಗತಿಸಿದರು. ಕಾರ್ಯದರ್ಶಿ ಸತೀಶ ಮುನವಳ್ಳಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net