ಆತ್ಮವಿಶ್ವಾಸದಿಂದ ಗುರಿ ತಲುಪುವುದು ಸುಲಭ

ಧಾರವಾಡ ಸಪ್ತಾಪುರದ ಶ್ರೀ ಶಾರದಾ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪಠ್ಯ ಸಾಮಗ್ರಿ ವಿತರಿಸಲಾಯಿತು.
ಧಾರವಾಡ ಸಪ್ತಾಪುರದ ಶ್ರೀ ಶಾರದಾ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪಠ್ಯ ಸಾಮಗ್ರಿ ವಿತರಿಸಲಾಯಿತು.
Published on
ಧಾರವಾಡ: ಮಕ್ಕಳು ಶಿಸ್ತುಬದ್ಧ ಜೀವನ ರೂಪಿಸಿಕೊಂಡಾಗ ಏಕಾಗ್ರತೆ ಬರುತ್ತದೆ. ಏಕಾಗ್ರತೆಯಿಂದ ನೆನಪಿನಶಕ್ತಿ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಇದರಿಂದ ಗುರಿ ತಲುಪುವುದು ಸುಲಭವಾಗುತ್ತದೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವಿಜಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಬೆಂಗಳೂರಿನ ಶ್ರೀ ವಾಸವಿ ಸ್ನೇಹಕೂಟ ಫೌಂಡೇಶನ್​ ಆಶ್ರಯದಲ್ಲಿ ನಗರದ ಸಪ್ತಾಪುರದ ಶ್ರೀ ಶಾರದಾ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳಿಗೆ ಪಠ್ಯ ಸಾಮಗ್ರಿ ವಿತರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಶಾಲೆಯ ಸುಮಾರು 325 ಮಕ್ಕಳಿಗೆ ಹಾಗೂ ಕಮಲಾಪುರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ 250 ಮಕ್ಕಳಿಗೆ ನೋಟ್​ಬುಕ್​, ಪೆನ್​, ಪೆನ್ಸಿಲ್​, ಜಾಮಿಟ್ರಿ ಬಾಕ್ಸ್​ ಹಾಗೂ ಸ್ವಾಮಿ ವಿವೇಕಾನಂದರ "ರಾಷ್ಟ್ರಜಾಗೃತಿ ಹಾಗೂ ಪರೀೆ ಭಯ ಬಿಡೋಣ ಚೆನ್ನಾಗಿ ಓದೋಣ' ಪುಸ್ತಕ ವಿತರಿಸಲಾಯಿತು.
ಸ್ವಾಮಿ ಬುದ್ಧಿಯೋಗಾನಂದರು, ಶ್ರೀ ವಾಸವಿ ಸ್ನೇಹಕೂಟ ಫೌಂಡೇಶನ್. ಸಿ.ಎನ್​. ಮಂಜುನಾಥ, ಕಾರ್ಯದಶಿರ್ ವಿ.ಎ. ಗಿರೀಶ, ಶಶಿಧರ, ಕೆ.ಎಸ್​. ಪಾಟೀಲ, ಸದಸ್ಯ ಐ.ಜಿ. ಮೂಳ್ಳೂರು, ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net