Bharatanatyam ರಸ ಸಪ್ತಮಿ ಭರತನಾಟ್ಯ 25ಕ್ಕೆ

Bharatanatyam  ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ಅಧ್ಯಕ್ಷ ಪ್ರದೀಪ ಭಟ್ಟ.
Bharatanatyam ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ನಾಟ್ಯಾಂಜಲಿ ನೃತ್ಯ ಕಲಾ ಕೇಂದ್ರದ ಅಧ್ಯಕ್ಷ ಪ್ರದೀಪ ಭಟ್ಟ.
Published on

ಪ್ರಮುಖ ಮುಖ್ಯಾಂಶಗಳು

  • ಆದಿಕಾವ್ಯ ನೃತ್ಯ ರೂಪಕ ನಡೆಯಲಿದೆ.
  • ರವಿ ದಾತಾರ್ ಪ್ರಶಸ್ತಿ ಪ್ರದಾನ ಮಾಡಲಾಗುವುದು.
  • 40ಕ್ಕೂ ಹೆಚ್ಚು ಕಲಾವಿದರು ಭಾಗವಹಿಸುವರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಲಾ ಕೇಂದ್ರದ ಅಧ್ಯಕ್ಷ ಪ್ರದೀಪ ಭಟ್ಟ, ಬೆಳಗ್ಗೆ 10.30ಕ್ಕೆ ಕಿರಿಯ ಹಾಗೂ ಹಿರಿಯ ಕಲಾವಿದರಿಂದ ನೃತ್ಯ ಬಂಧಗಳು ನಡೆಯಲಿದೆ ಎಂದರು.
ಮಧ್ಯಾಹ್ನ 3 ಗಂಟೆಗೆ ಜಾನಪದ ಕಲಾವಿದ ಡಾ. ಪ್ರಕಾಶ ಮಲ್ಲಿಗವಾಡ ಅವರಿಗೆ ರವಿ ದಾತಾರ್ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ನಾಟ್ಯಾಂಜಲಿ ಹಿರಿಯ ಪಾಲಕರಾದ ಡಾ. ರೇಖಾ ಹಾಗೂ ಡಾ. ರಾಜೇಶ ಕಿಣಿ ಹೊನ್ನಾವರ ದಂಪತಿಗೆ ಪುತ್ತಿಗೆ ನಾರಾಯಣ ಭಟ್ಟ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು ಎಂದರು.
ಪತ್ರಕರ್ತ ಗಿರೀಶ ಪಟ್ಟಣಶೆಟ್ಟಿ ಹಾಗೂ ಲೆಕ್ಕ ಪರಿಶೋಧಕ ಪಿ. ಶ್ರೀಕಾಂತ ಭಟ್ಟ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದರು.
ನಂತರ ನೃತ್ಯಗುರು ಡಾ. ಸಹನಾ ಭಟ್ಟ ಅವರ ನಿರ್ದೇಶನದಲ್ಲಿ ಆದಿಕಾವ್ಯ ನೃತ್ಯ ರೂಪಕ ನಡೆಯಲಿದೆ. 40ಕ್ಕೂ ಹೆಚ್ಚು ಕಲಾವಿದರು ಭಾಗವಹಿಸುವರು ಎಂದು ತಿಳಿಸಿದರು.
ವಿದುಷಿ ಸುಷ್ಮಾ ಕೊಂಗಿ ಹಾಗೂ ವಿದುಷಿ ನಿಸರ್ಗಾ ಗೊಡ್ಡೆಮ್ಮಿ ಸುದ್ದಿಗೋಷ್ಠಿಯಲ್ಲಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net