Rang pravesh ನಿವೇದಿತಾ ಭರತನಾಟ್ಯ ರಂಗಪ್ರವೇಶ

Rang pravesh ನಿವೇದಿತಾ ಬಣಕಾರ
Rang pravesh ನಿವೇದಿತಾ ಬಣಕಾರ
Published on
ಹುಬ್ಬಳ್ಳಿ: Rang pravesh ಇಲ್ಲಿಯ ಕಲಾ ಸುಜಯ ಸಂಸ್ಥೆಯ ವಿದ್ಯಾರ್ಥಿನಿ ನಿವೇದಿತಾ ಬಣಕಾರ ವಿಭಿನ್ನ ನೃತ್ಯ ಪ್ರಯೋಗಗಳಿಗೆ ಹೆಸರುವಾಸಿಯಾಗಿದ್ದು, ಜ. 11ರಂದು ಸಂಜೆ 5ಕ್ಕೆ ನಗರದ ಸವಾಯಿ ಗಂಧರ್ವ ಹಾಲ್​ನಲ್ಲಿ ಭರತನಾಟ್ಯ ರಂಗ ಪ್ರವೇಶ ಮಾಡಲಿದ್ದಾರೆ ಎಂದು ಕಲಾ ಸುಜಯ ಮ್ಯಾನೇಜಿಂಗ್​ ಟ್ರಸ್ಟಿ ಸುಜಯ ಶಾನಭಾಗ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಆರು ವರ್ಷದಿಂದ ಅಂದರೆ ಒಂದನೇ ತರಗತಿಯಿಂದಲೇ ತಮ್ಮಲ್ಲಿ ತರಬೇತಿ ಪಡೆಯುತ್ತಿದ್ದ ನಿವೇದಿತಾ ನೃತ್ಯದಲ್ಲಿ ಪರಿಣತಿ ಪಡೆದಿದ್ದಾಳೆ. ಇದೀಗ ರಂಗ ಪ್ರವೇಶಕ್ಕಾಗಿ ಭರತನಾಟ್ಯ ಮಾರ್ಗ ಪದ್ಧತಿಯಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ. ಸಾಧ್ವಿ ಹೇಮರೆಡ್ಡಿ ಮಲ್ಲಮ್ಮನ ಜೀವನ ಮತ್ತು ಸಾಧನೆ ಆಧಾರಿತ ರೂಪಕ ಪ್ರದರ್ಶಿಸಲಿದ್ದಾಳೆ ಎಂದರು.
ಹೇಮರೆಡ್ಡಿ ಮಲ್ಲಮ್ಮನ ಕುರಿತು ಚಲನಚಿತ್ರ, ನಾಟಕಗಳು ಆಗಿವೆ. ನೃತ್ಯ ರೂಪಕ ಇದೇ ಮೊದಲು ಎನಿಸುತ್ತದೆ. ನಿರ್ಣಾಯಕರಾಗಿ ನೃತ್ಯ ಕಲಾವಿದೆ ನಾಗರತ್ನ ಹಡಗಲಿ ಅವರು ಆಗಮಿಸಲಿದ್ದಾರೆ ಎಂದರು.
ಸಂಜೆ 7ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಶಾಸಕ ಎನ್​.ಎಚ್​. ಕೋನರಡ್ಡಿ, ಆರ್​ಎಸ್​ಎಸ್​ನ ಗೋವಿಂದಪ್ಪ ಗೌಡಪ್ಪಗೋಳ, ಕೆಎಲ್​ಇ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಗೋವಾ ಕಲಾ ಅಕಾಡೆಮಿಯ ಡಾ. ಸಪ್ನಾ ನಾಯಕ, ಮಾಧವಿ ಮುತಾಲಿಕ ಅವರು ಪಾಲ್ಗೊಳ್ಳುವರು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net