Ranaji trophy ಇತಿಹಾಸ ರಚಿಸಿದ‌ ಜಮ್ಮು- ಕಾಶ್ಮೀರ

Ranaji trophy ಹುಬ್ಬಳ್ಳಿಯಲ್ಲಿ ರಣಜಿ ಪಂದ್ಯ ವಿಜೇತ ಜಮ್ಮು ಕಾಶ್ಮೀರ ತಂಡ.
Ranaji trophy ಹುಬ್ಬಳ್ಳಿಯಲ್ಲಿ ರಣಜಿ ಪಂದ್ಯ ವಿಜೇತ ಜಮ್ಮು ಕಾಶ್ಮೀರ ತಂಡ.
Published on

ಪ್ರಮುಖ ಮುಖ್ಯಾಂಶಗಳು

  • ಮೊದಲ ಬಾರಿ ರಣಜಿ ಟ್ರೋಫಿ ಕಿರೀಟ
  • ಹುಬ್ಬಳ್ಳಿಯಲ್ಲಿ ಆಯೋಜನೆಗೊಂಡಿದ್ದ ಫೈನಲ್ ಪಂದ್ಯ
ಹುಬ್ಬಳ್ಳಿ: ranaji trophy ಕಣಿವೆ ರಾಜ್ಯ ಜಮ್ಮು ಕಾಶ್ಮೀರ ಮೊದಲ ಬಾರಿ ರಣಜಿ ಟ್ರೋಫಿ ಚಾಂಪಿಯನ್ ಆಗುವ ಮೂಲಕ ಹೊಸ ಇತಿಹಾಸ ರಚಿಸಿದೆ. ನೆಚ್ಚಿನ ತಂಡವಾಗಿದ್ದ ಆತಿಥೇಯ ಕರ್ನಾಟಕ ನಿರಾಸೆ ಅನುಭವಿಸಿತು.
ಇಲ್ಲಿಯ ರಾಜನಗರ ಕೆಎಸ್ ಸಿಎ ಮೈದಾನದಲ್ಲಿ ಫೇವರಿಟ್ ಕರ್ನಾಟಕ ವಿರುದ್ಧ ಪ್ರವಾಸಿ ತಂಡ ಜಮ್ಮು ಕಾಶ್ಮೀರ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಟ್ರೋಫಿ ತನ್ನದಾಗಿಸಿಕೊಂಡಿತು. ಜಮ್ಮು ಕಾಶ್ಮೀರ ಮೊದಲ ಇನ್ನಿಂಗ್ಸ್ ನಲ್ಲಿ 291 ರನ್ ಗಳ ಬೃಹತ್ ಮುನ್ನಡೆ ಗಳಿಸಿತ್ತು.
1959-60 ರಲ್ಲಿ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ ಜಮ್ಮು ಕಾಶ್ಮೀರ ತಂಡ ಇದೇ ಮೊದಲ ಬಾರಿ ಫೈನಲ್ ತಲುಪಿತ್ತು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಬಲಿಷ್ಠ ಕರ್ನಾಟಕಕ್ಕಿಂತ ಉತ್ತಮ‌ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಫೈನಲ್ ಪಂದ್ಯದ 5 ನೇ ದಿನವಾದ ಶನಿವಾರ ಯಾವುದೇ ಪವಾಡ ನಡೆಯಲಿಲ್ಲ. 9ನೇ ಬಾರಿ‌ ಟ್ರೋಫಿ ಗೆಲ್ಲುವ ಆತಿಥೇಯ ಕರ್ನಾಟಕದ ಕನಸು ಬಹಳ ಬೇಗನೇ ನುಚ್ಚುನೂರಾಯಿತು. 7ನೇ ಬಾರಿ ರನ್ನರ್ ಅಪ್ ಸ್ಥಾನಕ್ಕೆ‌ ತೃಪ್ತಿ ಪಟ್ಟಿತು. 2009-10ರಲ್ಲಿ ಕೊನೆಯ ಬಾರಿ ಮೈಸೂರಿನಲ್ಲಿ ರನ್ನರ್ ಅಪ್ ಆಗಿತ್ತು.
ಪಂದ್ಯದಲ್ಲಿ ಜಮ್ಮು ಕಾಶ್ಮೀರ ಮೊದಲ ಇನ್ನಿಂಗ್ಸ್ ನಲ್ಲಿ 584 ರನ್ ಗಳಿಸಿದ್ದರೆ, ಕರ್ನಾಟಕ ಪ್ರಥಮ ಇನ್ನಿಂಗ್ಸ್‌ ನಲ್ಲಿ 293 ರನ್ ಗಳಿಸಿತ್ತು. ಜಮ್ಮು ಕಾಶ್ಮೀರ ದ್ವಿತೀಯ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಗೆ 342 ರನ್ ಗಳಿಸಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net