ಆತ್ಮಸ್ಥೈರ್ಯ ತುಂಬುವ ರಕ್ಷಾ ಬಂಧನ raksha

raksha ಆರ್​ಎಸ್​ಎಸ್ ವತಿಯಿಂದ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ರಕ್ಷಾ ಬಂಧನ ಉತ್ಸವದಲ್ಲಿ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ ಸಹಬೌದ್ಧಿಕ ಪ್ರಮುಖ ರಾಮಚಂದ್ರ ಏಡಕೆ.
raksha ಆರ್​ಎಸ್​ಎಸ್ ವತಿಯಿಂದ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ರಕ್ಷಾ ಬಂಧನ ಉತ್ಸವದಲ್ಲಿ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ ಸಹಬೌದ್ಧಿಕ ಪ್ರಮುಖ ರಾಮಚಂದ್ರ ಏಡಕೆ.
Published on

ಪ್ರಮುಖ ಮುಖ್ಯಾಂಶಗಳು

  • ಸ್ತ್ರೀಯರಿಗೆ ರಕ್ಷಣೆ ನೀಡುವ ಉದ್ದೇಶದಿಂದ ರಕ್ಷಾ ಬಂಧನ ಆಚರಣೆ ಆರಂಭ
  • ಜಾತಿ, ಧರ್ಮಗಳ ಹೆಸರಿನಲ್ಲಿ ಕಚ್ಚಾಡುತ್ತಿದ್ದೇವೆ.
  • ವಂದೇ ಮಾತರಂ ಗೀತೆ ಈ ದೇಶದ ಪಂಚಾಕ್ಷರಿ ಮಂತ್ರ
ನೂಲ ಹುಣ್ಣಿಮೆ ನಿಮಿತ್ತ ಗೋಕುಲ ರಸ್ತೆ ವಾಸವಿ ನಗರದ ವಾಸವಿ ಮಹಲ್ ನಲ್ಲಿ ಆರ್​ಎಸ್​ಎಸ್ ಹುಬ್ಬಳ್ಳಿ ಮಹಾನಗರ ವತಿಯಿಂದ ಶುಕ್ರವಾರ ಆಯೋಜಿಸಿದ್ದ ರಕ್ಷಾ ಬಂಧನ ಉತ್ಸವದಲ್ಲಿ ಮುಖ್ಯ ವಕ್ತಾರರಾಗಿ ಅವರು ಮಾತನಾಡಿದರು.
ಹಬ್ಬಗಳು ಕಣ್ಮರೆಯಾಗುತ್ತಿದ್ದು, ಕೇವಲ ಆಡಂಬರಕ್ಕಾಗಿ ಉತ್ಸವಗಳನ್ನು ಮಾಡಲಾಗುತ್ತಿದೆ. ನಮ್ಮ ಬಳಿ ಎಲ್ಲ ಬಗೆಯ ಶಸ್ತ್ರಾಸ್ತ್ರಗಳಿದ್ದರೂ ಸಾಮಾಜಿಕ ಸಂಘಟನೆ ಇಲ್ಲದಿದ್ದರೆ ಅಂತಹ ಹೋರಾಟ ವ್ಯರ್ಥ ಎಂದು ಹೇಳಿದರು.
ಮೊಘಲರ ಆಳ್ವಿಕೆಯಲ್ಲಿ ಸ್ತ್ರೀಯರ ಪರಿಸ್ಥಿತಿ ಬಹಳ ಗಂಭೀರವಾಗಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ರಕ್ಷಣೆ ನೀಡುವ ಉದ್ದೇಶದಿಂದ ರಕ್ಷಾ ಬಂಧನ ಆಚರಣೆ ಆರಂಭಗೊಂಡಿತು ಎಂದರು.
ಆರ್ಥಿಕತೆಯ ಅಭಿವೃದ್ಧಿಯತ್ತ ಗಮನ ಹರಿಸುತ್ತಿರುವ ನಾವುಗಳು ನಾಗರೀಕತೆ, ಬೌದ್ಧಿಕ ಅಭಿವೃದ್ಧಿ, ನಮ್ಮ ಸಂಸ್ಕೃತಿ, ಪರಂಪರೆ ಮರೆತಿದ್ದೇವೆ. ಇಂದಿಗೂ ಜಾತಿ, ಧರ್ಮಗಳ ಹೆಸರಿನಲ್ಲಿ ಕಚ್ಚಾಡುತ್ತಿದ್ದೇವೆ.

ಹೀಗಾಗಿ, ದೇಶ ವಿಭಜನೆಯಾಗುತ್ತ ಹೊರಟಿದೆ ಎಂದು ಕಳವಳ ವ್ಯಕ್ತಪಡಿಸಿದರು.

ವ್ಯಕ್ತಿಯನ್ನು ಆತನ ಧರ್ಮ, ಜಾತಿಯಿಂದ ಅಳಿಯದೇ ವ್ಯಕ್ತಿತ್ವದಿಂದ ಅಳಿದಾಗ ಮಾತ್ರ ದೇಶದ ಅಭ್ಯುದಯ ಸಾಧ್ಯ. ಜಾತಿ ವ್ಯವಸ್ಥೆ ಹೋಗಲಾಡಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಬಸವಣ್ಣನವರ ಹೆಸರು ಹೇಳಿಕೊಂಡೇ ಜಾತಿ ಅಳೆಯುತ್ತಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.

ಪರೋಪಕಾರಕ್ಕೆ ಶ್ರಮಿಸುತ್ತಿರುವ ಆರ್​ಎಸ್​ಎಸ್ ಸಂಘಟನೆಯ ಬಗ್ಗೆ ಗೃಹ ಸಚಿವರು ನಿತ್ಯ ಮಾತನಾಡದೇ ಹೋದರೆ ಅವರಿಗೆ ಊಟ ಜೀರ್ಣವಾಗಲ್ಲ. ಆರ್​ಎಸ್​ಎಸ್ ಎಂದಿಗೂ, ಯಾರ ಉಪಕಾರಕ್ಕೂ ಕೆಲಸ ಮಾಡಿಲ್ಲ. ಪರೋಪಕಾರ, ಧರ್ಮ, ರಾಷ್ಟ್ರ ರಕ್ಷಣೆಯೇ ಆರ್​ಎಸ್​ಎಸ್ ಧ್ಯೇಯೋದ್ದೇಶ ಎಂದರು.

ವಂದೇ ಮಾತರಂ ಗೀತೆ ಈ ದೇಶದ ಪಂಚಾಕ್ಷರಿ ಮಂತ್ರವಾಗಿದ್ದು, ಕಾಂಗ್ರೆಸ್ ಅದನ್ನು ಸಂಪೂರ್ಣ ಹಾಡಲು ನಿರಾಕರಿಸುತ್ತಿದೆ. ಆ ಪಕ್ಷ ಒಂದು ಸಮಾಜದ ತುಷ್ಟೀಕರಣ ಮಾಡುವುದನ್ನು ಇಂದಿಗೂ ಮುಂದುವರೆಸಿದೆ ಎಂದರು.

ಅತಿಥಿಯಾಗಿ ಉದ್ಯಮಿ ಮನೋಹರ ಬಾಕಳೆ ಮಾತನಾಡಿ, ರಕ್ಷಾ ಬಂಧನದ ದಿನ ರಕ್ಷೆ ಕಟ್ಟಿಕೊಂಡು ಹೋಗುವುದಲ್ಲ. ದೇಶ ಮತ್ತು ಸಮಾಜ ರಕ್ಷಣೆಗೆ ಪಣ ತೊಡಬೇಕಿದೆ. ಸಮಾಜದ ದಿಕ್ಕು ತಪ್ಪಿಸುತ್ತಿರುವ, ಶ್ರದ್ಧಾ ಕೇಂದ್ರಗಳನ್ನು ಅವಹೇಳನ ಮಾಡುತ್ತಿರುವ ಶಕ್ತಿಗಳ ವಿರುದ್ಧ ದೇಶ, ಭಾಷೆಯನ್ನು ನಾವೆಲ್ಲರೂ ಸೇರಿ ಉಳಿಸಬೇಕಿದೆ ಎಂದು ಹೇಳಿದರು.

ಆರ್​ಎಸ್​ಎಸ್ ಪ್ರಮುಖ ಗೋವಿಂದಪ್ಪ ಗೌಡಪ್ಪಗೋಳ, ಹುಬ್ಬಳ್ಳಿ ಮಹಾನಗರ ಸಂಘಚಾಲಕ ಶಿವಾನಂದ ಅವಟಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಮಹೇಶ ಟೆಂಗಿನಕಾಯಿ, ರಾಜ್ಯಸಭೆ ಸದಸ್ಯ ಎಂ. ನಾಗರಾಜ, ವಿಧಾನ ಪರಿಷತ್ ಸದಸ್ಯರಾದ ಪ್ರದೀಪ ಶೆಟ್ಟರ, ಲಿಂಗರಾಜ ಪಾಟೀಲ, ಶ್ರೀ ರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net