rajat ullagaddimath ಯಶ್ಪಾಲ್ ಸುವರ್ಣ ವಿರುದ್ಧ ಕೇಸ್

rajat ullagaddimath ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ದೂರನ್ನು ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಅವರು ಹುಬ್ಬಳ್ಳಿ ಉಪನಗರ ಠಾಣೆ ಇನ್‌ಸ್ಪೆಕ್ಟರ್ ಪ್ರಭು ಗಂಗೇನಹಳ್ಳಿ ಅವರಿಗೆ ಬುಧವಾರ ನೀಡಿದರು.
rajat ullagaddimath ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ದೂರನ್ನು ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಅವರು ಹುಬ್ಬಳ್ಳಿ ಉಪನಗರ ಠಾಣೆ ಇನ್‌ಸ್ಪೆಕ್ಟರ್ ಪ್ರಭು ಗಂಗೇನಹಳ್ಳಿ ಅವರಿಗೆ ಬುಧವಾರ ನೀಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಹುಲ್ ಗಾಂಧಿ ವಂಶ ನಿರ್ನಾಮದ ಹೇಳಿಕೆ ಆರೋಪ
ಹುಬ್ಬಳ್ಳಿ: ಬಾಬರೀ ಮಸೀದಿ ಧ್ವಂಸ ಮಾಡಿದ ರೀತಿಯಲ್ಲಿ ರಾಹುಲ್ ಗಾಂಧಿ ವಂಶವನ್ನು ನಿರ್ನಾಮ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ ಆರೋಪದಡಿ ಉಡುಪಿ ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ rajat ullagaddimath ಇಲ್ಲಿಯ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜು. 28ರಂದು ಬೆಳಗ್ಗೆ 11ಗಂಟೆಗೆ ಉಡುಪಿಯ ಮೂಡನಿಡಂಬೂರು ಗ್ರಾಮದ ಜಟ್ಕಾ ಸ್ಟಾಂಡ್ ಹತ್ತಿರ ಸಾರ್ವಜನಿಕ ವೇದಿಕೆಯಲ್ಲಿ ಯಶ್ಪಾಲ್ ಸುವರ್ಣ ಈ ಹೇಳಿಕೆ ನೀಡಿದ್ದಾರೆ.
ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಆಧಾರ ರಹಿತವಾಗಿ ‘ಡ್ರಗ್ ಅಡಿಕ್ಟ್’ ಎಂದು ಹೀಯಾಳಿಸಿದ್ದಾರೆ. ಅಲ್ಲದೆ, ಬಾಬರೀ ಮಸೀದಿ ಧ್ವಂಸ ಮಾಡಿದ ರೀತಿಯಲ್ಲಿ ರಾಹುಲ್ ಗಾಂಧಿ ವಂಶವನ್ನು ನಿರ್ನಾಮ ಮಾಡುತ್ತೇವೆ ಎಂದು ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ.
ಈ ಹೇಳಿಕೆಯು ಕೇವಲ ಒಬ್ಬ ವ್ಯಕ್ತಿಗಲ್ಲದೆ, ಇಡೀ ಕುಟುಂಬ ಹಾಗೂ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿ ಮಾಡಿರುವ ನೇರವಾದ ಕೊಲೆ ಬೆದರಿಕೆ ಮತ್ತು ಸಮೂಹ ಹತ್ಯೆಯ ಪ್ರಚೋದನೆಯಾಗಿದೆ. ಈ ಹೇಳಿಕೆಯು ದೇಶದ ಕಾನೂನು ಸುವ್ಯವಸ್ಥೆ ಹಾಳು ಮಾಡುವ ಮತ್ತು ಎರಡು ಗುಂಪುಗಳ ನಡುವೆ ರಕ್ತಪಾತ ಹಾಗೂ ಗಲಭೆ ಸೃಷ್ಟಿಸುವ ಸ್ಪಷ್ಟ ದುರುದ್ದೇಶ ಹೊಂದಿದೆ. ಯಶ್ಪಾಲ್, ಇಂಥ ಭಯೋತ್ಪಾದನಾ ಮನಸ್ಥಿತಿಯ ದ್ವೇಷ ಭಾಷಣ ಮಾಡಿದ್ದಾರೆ ಎಂದು ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಅವರು, ದೂರಿನಲ್ಲಿ ವಿವರಿಸಿದ್ದಾರೆ.
ದೂರಿನ ಪ್ರತಿಯನ್ನು ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ್ ಉಳ್ಳಾಗಡ್ಡಿಮಠ ಅವರು, ಪೊಲೀಸ್ ಇನ್‌ಸ್ಪೆಕ್ಟರ್ ಪ್ರಭು ಗಂಗೇನಹಳ್ಳಿ ಅವರಿಗೆ ನೀಡಿದರು.
ದೊಡ್ಡರಾಮಪ್ಪ ದೊಡ್ಡಮನಿ, ಅರ್ಜುನ ಪಾಟೀಲ, ಗೌರಮ್ಮ ಬಳೋಗಿ, ಪ್ರೇಮನಾಥ ಚಿಕ್ಕತುಂಬಳ, ಬಸವರಾಜ ಬೆಣಕಲ್, ವೀರೇಶ ಕಡಕೊಳಮಠ, ಮೇಘನಾ ಹಿರೇಮಠ, ಸುನೀತಾ ಹುರಕಡ್ಲಿ, ಸಾದಿಕ್ ಯಕ್ಕುಂಡಿ, ಸುವರ್ಣ ಕಲ್ಲಕುಂಟ್ಲ, ಸಂದಿಲ್ ಕುಮಾರ, ಇಕ್ಬಾಲ್ ನವಲೂರು, ಆರಿಫ್ ಭದ್ರಾಪುರ, ಶಾಜಮಾನ ಮುಜಾಹಿದ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net