ಹುಬ್ಬಳ್ಳಿಯ ಉಣಕಲ್ಲ ಕೆರೆ ವಿಶೇಷತೆ ಎಂದರೆ ಈ ವರ್ಷ ಮೊದಲ ಮಳೆಯಲ್ಲಿಯೇ ತುಂಬಿ ಹರಿದಿರುವುದು. ಒಳಚರಂಡಿ, ಜಲಾನಯನ ಪ್ರದೇಶದಿಂದ ಹರಿದು ಬರುವ ಚರಂಡಿ ನೀರಿನಿಂದ ಸದಾ ತುಂಬಿಕೊಂಡೇ ಇರುವ ಕೆರೆಯು ಬುಧವಾರದ ಧಾರಾಕಾರ ಮಳೆಗೆ ಕೋಡಿ ಹರಿದಿದೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಸ್ವಲ್ಪವೇ ಮಳೆ ಬಂದರೂ ಕೆರೆ ತುಂಬಿಕೊಳ್ಳುತ್ತಿದೆ. ನಿನ್ನೆಯ ಮಳೆಗೆ ಕೋಡಿ ಹರಿಯುವ ಮೂಲಕ ಉಣಕಲ್ ಕೆರೆ ಇತಿಹಾಸ ನಿರ್ಮಿಸಿದೆ.