Rain damage ಹುಬ್ಬಳ್ಳಿಯಲ್ಲಿ ಮಳೆ ಆರ್ಭಟಕ್ಕೆ ನಲುಗಿದ ಜನ

Rain damage ಹುಬ್ಬಳ್ಳಿ ತಾಲೂಕಿನ ಅಂಚಟಗೇರಿಯಲ್ಲಿ ಮಳೆ, ಗಾಳಿಗೆ ಮನೆಯ ಶೀಟುಗಳು ಹಾರಿಹೋಗಿರುವುದು.
Rain damage ಹುಬ್ಬಳ್ಳಿ ತಾಲೂಕಿನ ಅಂಚಟಗೇರಿಯಲ್ಲಿ ಮಳೆ, ಗಾಳಿಗೆ ಮನೆಯ ಶೀಟುಗಳು ಹಾರಿಹೋಗಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ವಾಣಿಜ್ಯನಗರಿ ರಸ್ತೆಗಳು ಜಲಾವೃತ
  • ತುಂಬಿ ಹರಿದ ಗಟಾರು, ರಾಜಕಾಲುವೆಗಳು
ಹುಬ್ಬಳ್ಳಿ: rain damage ವಾಣಿಜ್ಯ ನಗರಿ ಹುಬ್ಬಳ್ಳಿಯು ರಭಸದ ಮಳೆಗೆ ತತ್ತರಿಸಿತು. ಅನೇಕ ರಸ್ತೆಗಳು ಜಲಾವೃತವಾಗಿದ್ದವು. ರಾಜಕಾಲುವೆ, ಗಟಾರುಗಳು ತುಂಬಿ ಹರಿದವು.
ಅವಳಿನಗರ ಮಧ್ಯದ ಬಿಆರ್​ಟಿಎಸ್​ ಮಾರ್ಗದಲ್ಲಿ ಅನೇಕ ಕಡೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡಚಣೆಯಾಯಿತು. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಅನೇಕ ಕಡೆಗಳಲ್ಲಿ ಮನೆಗೆ ನೀರು ಹೊಕ್ಕಿದೆ. ರಭಸದ ಗಾಳಿ, ಮಳೆಗೆ ಕೆಲವೆಡೆ ಮನೆಗಳಿಗೆ ಹಾನಿಯಾಗಿದೆ.
ತಗ್ಗು ಪ್ರದೇಶದ ಅನೇಕ ಮನೆಗಳಿಗೆ ನೀರು ಹೊಕ್ಕು ಅವಾಂತರ ಸೃಷ್ಟಿಸಿತ್ತು. ಇಡೀ ದಿನ ಆಗಾಗ ಮಳೆ ಸುರಿದು ಬಿಡುವು ಕೊಡಲಿಲ್ಲ.
ಅಂಚಟಗೇರಿ ಗ್ರಾಮದಲ್ಲಿ ಬಸವರಾಜ ಅರ್ಜುನ ಗೋಡ್ಡಳ್ಳಿ ಇವರ ಮನೆಯ ಛಾವಣಿಯ ಶೀಟುಗಳು ಗಾಳಿಗೆ ಹಾರಿ ಹೋಗಿವೆ. ಅದೃಷ್ಟವಶಾತ್​ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ತಹಸೀಲ್ದಾರ್​ ಜೆ.ಬಿ. ಮಜ್ಜಗಿ ಅವರು ತಿಳಿಸಿದ್ದಾರೆ.
ಮುಂಗಾರು ಪೂರ್ವ ಮಳೆ ಎಲ್ಲ ಕಡೆ ಭರ್ಜರಿಯಾಗಿ ಸುರಿಯುತ್ತಿದ್ದು, ಈ ವರ್ಷ ಮುಂಗಾರು ಹಂಗಾಮು ಉತ್ತಮವಾಗುವ ನಿರೀಕ್ಷೆಯಲ್ಲಿ ರೈತರು ಇದ್ದಾರೆ. ಸದ್ಯ ಜಮೀನು ಸ್ವಚ್ಛಗೊಳಿಸಿ ಬಿತ್ತನೆಗೆ ಸಜ್ಜಾಗುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net