railway demands ಹುಬ್ಬಳ್ಳಿಯ ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಪದ್ಮನಾಭ ಅನಂತ್ ಅವರನ್ನು ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ಪದಾಧಿಕಾರಿಗಳು ಭೇಟಿ ಮಾಡಿದರು. ಕೆ.ಎಂ. ಮಹೇಶ್ವರಸ್ವಾಮಿ, ಗುರು ಕಲ್ಮಠ, ಪಿ. ಬಂಡೇಗೌಡ, ಜೆ.ಎಂ. ಮಂಜುನಾಥಸ್ವಾಮಿ, ಸಿಂದ್ವಾಳ ಮಹೇಶ್ಗೌಡ, ಮಧುಸೂದನಗೌಡ, ವಿರುಪಾಕ್ಷಪ್ಪ ಹೊಸಪೇಟೆ, ಸತೀಶ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕ್ರಿಯಾ ಸಮಿತಿ ನಿಯೋಗದಿಂದ ಜಿಎಂ ಭೇಟಿ
ಸರ್ವೇ ಆದೇಶಗಳ ಕಾಮಗಾರಿ ಆರಂಭವಾಗಿಲ್ಲ
ಹುಬ್ಬಳ್ಳಿ: railway demands ಇಲ್ಲಿಯ ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಪದ್ಮನಾಭ ಅನಂತ್ ಅವರನ್ನು ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯ ನಿಯೋಗ ಕೇಂದ್ರ ಕಚೇರಿಯಲ್ಲಿ ಭೇಟಿ ಮಾಡಿ ವಿವಿಧ ಬೇಡಿಕೆಗಳ ಬಗ್ಗೆ ಚರ್ಚಿಸಿತು.
ಬಳ್ಳಾರಿ ಸಿರುಗುಪ್ಪ ಸಿಂಧನೂರು ಲಿಂಗಸುಗೂರು ನೂತನ ರೈಲ್ವೆ ಮಾರ್ಗದ ಸರ್ವೇ ಆದೇಶ 2013ರಲ್ಲಿ ಆಗಿದ್ದು, ಕಾಂಗ್ರೆಸ್ ಸರ್ಕಾರದ ಮಲ್ಲಿಕಾರ್ಜುನ ಖರ್ಗೆ ಅವರು ಇದನ್ನು ಬಜೆಟ್ನಲ್ಲಿ ಘೋಷಿಸಿದ್ದರು. ನಂತರ ಬಿಜೆಪಿ ಸರ್ಕಾರದ ರೈಲ್ವೆ ಮಂತ್ರಿ ಸದಾನಂದ ಗೌಡರು ಬಳ್ಳಾರಿ ಸಿಂಧನೂರು ಗಬ್ಬೂರು ಎಂದು ಸರ್ವೇ ಆದೇಶ ಮಾಡಿಸಿದ್ದರು.
ಎರಡೂ ಸರ್ವೇ ಆದೇಶಗಳ ಕಾಮಗಾರಿ ಆರಂಭವಾಗಿಲ್ಲ. ಹಾಗಾಗಿ ಬಳ್ಳಾರಿ ಸಿರುಗುಪ್ಪ ಸಿಂಧನೂರು ರೈಲ್ವೆ ಮಾರ್ಗದ ಕಾಮಗಾರಿ ಪ್ರಾರಂಭಿಸುವಂತೆ ಕೋರಲಾಯಿತು.
ಬಳ್ಳಾರಿ ಮಾರ್ಗದಲ್ಲಿ ಬೆಳಗ್ಗೆ ಬೆಂಗಳೂರಿಗೆ ಹೋಗಿ ಬರಲು ಇಂಟರ್ಸಿಟಿ ಇಲ್ಲವೇ ಜನಶತಾಬ್ದಿ ಅಥವಾ ಒಂದೇ ಭಾರತ ರೈಲು ಆರಂಭವಾಗಬೇಕು. ಇದು ಕಳೆದ 20 ವರ್ಷಗಳ ಬೇಡಿಕೆಯಾಗಿದೆ.
ಹೊಸಪೇಟೆ ಮುಂಬೈ ರೈಲಿಗೆ ಸಂಪರ್ಕ ಕಲ್ಪಿಸಲು ಬಳ್ಳಾರಿಯಿಂದ ಬೆಳಗ್ಗೆ 11.30ಕ್ಕೆ ನೂತನ ರೈಲಿನ ಸೌಲಭ್ಯ ದೊರೆಯಬೇಕು.
ಶಿವಮೊಗ್ಗ ಬಳ್ಳಾರಿ ಚೆನ್ನೆ ಬೈವೀಕ್ಲಿ ಎಕ್ಸಪ್ರೆಸ್ ರೈಲು ಪುನರಾರಂಭವಾಗಬೇಕು. ಬಳ್ಳಾರಿಯ ಹೊಸ ಬಸ್ ನಿಲ್ದಾಣ ಹಿಂಭಾಗ ಬಳ್ಳಾರಿ ಬೈಪಾಸ್ ರೈಲ್ವೆ ನಿಲ್ದಾಣದ ಸ್ಥಾಪನೆ ಆಗಬೇಕು.
ಹಂಪಿ ಎಕ್ಸ್ಪ್ರ್ರೆಸ್ ರೈಲಿಗೆ 9 ಸ್ಲೀಪರ್ ಬೋಗಿಗಳ ಬದಲಾಗಿ ಈ ಹಿಂದಿನಂತೆ ಹನ್ನೆರಡು ಸ್ಲೀಪರ್ ಬೋಗಿಗಳನ್ನು ಅಳವಡಿಸಬೇಕು ಎಂದು ಕೋರಲಾಯಿತು.
ಈ ಎಲ್ಲ ಬೇಡಿಕೆಗಳ ಬಗ್ಗೆ ಪ್ರಧಾನ ವ್ಯವಸ್ಥಾಪಕರು ಬಳ್ಳಾರಿಗೆ ಆಗಮಿಸಿದಾಗ ಮನವಿ ಸಲ್ಲಿಸಲಾಗಿತ್ತು. ಇದೀಗ ಅವುಗಳ ಅನುಷ್ಠಾನಕ್ಕಾಗಿ ಪುನಃ ನಿಯೋಗದಲ್ಲಿ ಬಂದು ಒತ್ತಾಯಿಸಲಾಯಿತು.
ಸಮಿತಿಯ ಅಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಮಿ ನೇತೃತ್ವದ ನಿಯೋಗದಲ್ಲಿ ಧಾರವಾಡ ಜಿಲ್ಲೆಯ ಕ್ರಿಯಾ ಸಮಿತಿ ಅಧ್ಯಕ್ಷ ಗುರು ಕಲ್ಮಠ, ಪದಾಧಿಕಾರಿಗಳಾದ ಪಿ. ಬಂಡೇಗೌಡ, ಜೆ.ಎಂ. ಮಂಜುನಾಥಸ್ವಾಮಿ, ಸಿಂದ್ವಾಳ ಮಹೇಶ್ಗೌಡ, ಮಧುಸೂದನಗೌಡ ಸಂಗನಕಲ್ಲು, ವಿರುಪಾಕ್ಷಪ್ಪ ಹೊಸಪೇಟೆ, ಸತೀಶ ಉಪಸ್ಥಿತರಿದ್ದರು.