ಅಕ್ರಮ ಮದ್ಯ ಮಾರಾಟದ ಮನೆ ಮೇಲೆ ದಾಳಿ

ಧಾರವಾಡ ಜನ್ನತನಗರದ ಕಲಾಲ ಎಂಬುವರ ಮನೆಯಲ್ಲಿ ಅಕ್ರಮ ಮಾರಾಟಕ್ಕೆ ಸಂಗ್ರಹಿಸಿದ್ದ ಮದ್ಯದ ಪ್ಯಾಕೆಟ್​ಗಳು.
ಧಾರವಾಡ ಜನ್ನತನಗರದ ಕಲಾಲ ಎಂಬುವರ ಮನೆಯಲ್ಲಿ ಅಕ್ರಮ ಮಾರಾಟಕ್ಕೆ ಸಂಗ್ರಹಿಸಿದ್ದ ಮದ್ಯದ ಪ್ಯಾಕೆಟ್​ಗಳು.
Published on
ಧಾರವಾಡ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆಯ ಮನೆ ಮೇಲೆ ಸ್ಥಳಿಯರೇ ದಾಳಿ ನಡೆಸಿ ಸುಮಾರು 14.76 ಲೀಟರ್​ ಮದ್ಯ ವಶಕ್ಕೆ ಪಡೆದ ಘಟನೆ ಇಲ್ಲಿನ ಜನ್ನತನಗರದಲ್ಲಿ ನಡೆದಿದೆ.
ಜನ್ನತನಗರದ ಕಲಾಲ್​ ಎಂಬುವರ ಮುರುಕಲು ಹಂಚಿನ ಮನೆಯಲ್ಲಿ ಮಹಿಳೆಯೊಬ್ಬಳು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಳು. ಸ್ಥಳಿಯರು ಈ ಕುರಿತು ಅಬಕಾರಿ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ನಿತ್ಯ ಮದ್ಯ ಮಾರುವುದನ್ನು ನೋಡಿ ಬೇಸತ್ತ ಸ್ಥಳಿಯರು ಮನೆಯ ದಾಳಿ ಮಾಡಿದ್ದಾರೆ. ಇದರಿಂದ ಭಯಭೀತಳಾದ ಮಹಿಳೆ ಸ್ಥಳದಿಂದ ಪರಾರಿಯಾಗಿದ್ದಾಳೆ.
ಮನೆಯಲ್ಲಿ ತಪಾಸಣೆ ಮಾಡಿದಾಗ ಉಪ್ಪಿನಕಾಯಿ ಭರಣಿ, ಅಕ್ಕಿ ಡಬ್ಬಿ ಸೇರಿ ಹಲವೆಡೆ ಮದ್ಯದ ಟೆಟ್ರಾ ಪ್ಯಾಕ್​ಗಳು ಪತ್ತೆಯಾಗಿವೆ. ನಂತರ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅಧಿಕಾರಿಗಳು ಸುಮಾರು 14.76 ಲೀಟರ್​ ಮದ್ಯವನ್ನು ಜಪ್ತಿ ಮಾಡಿದ್ದಾರೆ. ಮಹಿಳೆ ಪರಾರಿಯಾದ ಹಿನ್ನೆಲೆ ಆಕೆಯ ಪತಿ ಮಂಜುನಾಥ ಕಲಾಲ್​ ಎಂಬುವರ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net