ಗುಣಮಟ್ಟದ (clinic) ಚಿಕಿತ್ಸೆಗೆ ವಿವೇಕಾನಂದ ಆಸ್ಪತ್ರೆ

ಹುಬ್ಬಳ್ಳಿಯಲ್ಲಿ ಶನಿವಾರ (clinic) ವಿವೇಕಾನಂದ ಜನರಲ್​ ಆಸ್ಪತ್ರೆ ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ದಾಖಲೆ ಬರೆದ ಡಾ. ವೀರೇಂದ್ರ ಭಸ್ಮೆ ಅವರನ್ನು ಗೌರವಿಸಲಾಯಿತು. ಕಮಲ್​ ಮೆಹತಾ, ಕೇಶವ ದೇಸಾಯಿ, ದೀಪಕ ಶಾ, ಇತರರು ಇದ್ದರು.
ಹುಬ್ಬಳ್ಳಿಯಲ್ಲಿ ಶನಿವಾರ (clinic) ವಿವೇಕಾನಂದ ಜನರಲ್​ ಆಸ್ಪತ್ರೆ ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ದಾಖಲೆ ಬರೆದ ಡಾ. ವೀರೇಂದ್ರ ಭಸ್ಮೆ ಅವರನ್ನು ಗೌರವಿಸಲಾಯಿತು. ಕಮಲ್​ ಮೆಹತಾ, ಕೇಶವ ದೇಸಾಯಿ, ದೀಪಕ ಶಾ, ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಉದ್ಯಮಿ ಕೇಶವ ದೇಸಾಯಿ ಅಭಿಮತ
  • ಅತ್ಯಾಧುನಿಕ ಸೌಲಭ್ಯಗಳಿಂದ ಚಿಕಿತ್ಸೆ
  • ಪರಿಣಿತ ವೈದ್ಯರು ಸಿಬ್ಬಂದಿಯಿಂದ ಸೇವೆ
ಹುಬ್ಬಳ್ಳಿ: ಸತತ 97 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ವಿವೇಕಾನಂದ (clinic) ಜನರಲ್​ ಆಸ್ಪತ್ರೆಯು ರಾಜ್ಯದಲ್ಲಿಯೇ ವೈದ್ಯೋಪಚಾರ ಹಾಗೂ ಗುಣಮಟ್ಟದ ಸೇವೆಯಿಂದ ಮನೆ ಮಾತಾಗಿದೆ. ಅತ್ಯಾಧುನಿಕ ಉಪಕರಣ ಹಾಗೂ ಮಾದರಿ ಶಸ್ತ್ರಚಿಕಿತ್ಸಾ ಕೊಠಡಿಗಳು ರೋಗಿಗಳ ಸ್ಥೈರ್ಯವನ್ನು ಹೆಚ್ಚಿಸಿವೆ ಎಂದು ವಿವೇಕಾನಂದ ಜನರಲ್​ ಆಸ್ಪತ್ರೆಯ ಉಪಾಧ್ಯಕ್ಷ ಹಾಗೂ ಗಣ್ಯ ಉದ್ಯಮಿ ಕೇಶವ ದೇಸಾಯಿ ಅಭಿಪ್ರಾಯಪಟ್ಟರು.
ನಗರದ ಖಾಸಗಿ ಹೋಟೆಲ್​ನಲ್ಲಿ ಶನಿವಾರ ವಿವೇಕಾನಂದ ಜನರಲ್​ ಆಸ್ಪತ್ರೆಯ ವತಿಯಿಂದ ಆಯೋಜಿಸಿದ್ದ ಸಮಾಗಮ-2025 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಲ್ಲಿ ಸಾಮಾನ್ಯ ಕಾಯಿಲೆಯಿಂದ ಹಿಡಿದು ಅಪರೂಪದ ರೋಗಗಳಿಗೂ ಚಿಕಿತ್ಸೆ ಲಭ್ಯವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಪರಿಣಿತ, ಪ್ರಸಿದ್ಧ ವೈದ್ಯರಿದ್ದಾರೆ. ಇಲ್ಲಿನ ಆಡಳಿತ ಮಂಡಳಿ ಹಾಗೂ ತಜ್ಞ ವೈದ್ಯರು ಬಡವರಿಗೆ ಭಾರವಾಗದಂತೆ ಚಿಕಿತ್ಸೆ ನೀಡುವಲ್ಲಿ ಖ್ಯಾತರಾಗಿದ್ದಾರೆ. ದಿನದ 24ಗಂಟೆ ಕಾಳಜಿ, ಕಳಕಳಿ ಹಾಗೂ ಕರುಣೆಯಿಂದ ವೈದ್ಯರು ಚಿಕಿತ್ಸೆ ನೀಡುತ್ತಿರುವುದರಿಂದ ಲಕ್ಷಾಂತರ ರೋಗಿಗಳು ಇಲ್ಲಿಂದ ಗುಣಮುಖರಾಗಿ ಸಂತುಷ್ಟ ಜೀವನ ನಡೆಸುತ್ತಿದ್ದಾರೆ ಎಂದರು.
ಆಸ್ಪತ್ರೆಯ ಚೇರ್ಮನ್​ ಕಮಲ್​ ಮೆಹತಾ ಮಾತನಾಡಿ, ಎಲ್ಲರಿಗೂ ಆರೋಗ್ಯ ಎಂಬ ಧ್ಯೇಯ ಹೊಂದಲಾಗಿದ್ದು, ಇಲ್ಲಿ ಸೇವೆ ಸಲ್ಲಿಸಿದ ಅನೇಕ ವೈದ್ಯರು ಇಂದು ಶ್ರೇಷ್ಠತೆ ಸಾಧಿಸಿ ದೇಶ, ವಿದೇಶದಲ್ಲಿ ಹೆಸರುವಾಸಿಯಾಗಿದ್ದಾರೆ. ಆಸ್ಪತ್ರೆಯ ಮೇಲಿನ ನಂಬಿಕೆಯಿಂದ ನೆರೆಯ ರಾಜ್ಯಗಳಿಂದಲೂ ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಆಸ್ಪತ್ರೆಯಲ್ಲಿ ಎಲ್ಲ ಸೇವೆ, ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.
101 ವರ್ಷದ ವೃದ್ಧರೊಬ್ಬರಿಗೆ ಯಶಸ್ವಿ ಮೊಣಕಾಲು ಶಸ್ತ್ರಚಿಕಿತ್ಸೆ ನೆರವೇರಿಸಿ ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​ನಲ್ಲಿ ದಾಖಲೆ ಬರೆದಿರುವ ಡಾ. ವೀರೇಂದ್ರ ಭಸ್ಮೆ ಅವರನ್ನು ಆಡಳಿತ ಮಂಡಳಿಯ ಪರವಾಗಿ ಸನ್ಮಾನಿಸಲಾಯಿತು.
ಖ್ಯಾತ ಹೃದ್ರೋಗ ತಜ್ಞ -ಡಾ. ಜಿ.ಬಿ. ಸತ್ತೂರ, -ಡಾ. ರಮೇಶ ಬಾಬು, -ಡಾ. ದತ್ತಾ ನಾಡಿಗೇರ, ವಿವೇಕಾನಂದ ಜನರಲ್​ ಆಸ್ಪತ್ರೆಯ ಅಧ್ಯಕ್ಷ ದೀಪಕ ಶಾ, ಡಾ. ವಿ.ಜಿ. ನಾಡಗೌಡ, ಮಜೇಥಿಯಾ ಫೌಂಡೇಷನ್​ ಚೇರ್ಮನ್​ ಜಿತೇಂದ್ರ ಮಜೇಥಿಯಾ, ಡಾ. ಅಮಿತ ಸತ್ತೂರ, ಡಾ. ಸುನಿತಾ ಕನ್ಸಾಲಿ, ಡಾ. ವಿಜಯಮಹಾಂತೇಶ ಪೂಜಾರ್​, ಡಾ. ಪವನ ಜೋಶಿ ಇತರರು ಉಪಸ್ಥಿತರಿದ್ದರು.
ವೈದ್ಯಕಿಯ ವಿಭಾಗದ ಮುಖ್ಯಸ್ಥೆ ಡಾ. ಮಂಜುಳಾ ಹುಗ್ಗಿ ಸ್ವಾಗತಿಸಿದರು. ಸಿಇಒ ಡಾ. ರಾಹುಲ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net