puttaraj gawayi ಶಾಸ್ತ್ರೀಯ ಸಂಗೀತದಿಂದ ಮನಸ್ಸಿಗೆ ನೆಮ್ಮದಿ

puttaraj gawayi ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್​ನಲ್ಲಿ ಮಂಗಳವಾರ ವಯೋಲಿನ್​ ವಾದಕ ಪಂ. ಬಿ.ಎಸ್​. ಮಠ ಅವರಿಗೆ ಪುಟ್ಟರಾಜ ಸಮ್ಮಾನ ರಾಷ್ಟ್ರೀಯ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಮಹೇಶ ಟೆಂಗಿನಕಾಯಿ, ಮೇಯರ್​ ಜ್ಯೋತಿ ಪಾಟೀಲ, ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಪಂ. ವೆಂಕಟೇಶಕುಮಾರ, ಶಂಕರ ಕುಂಬಿ, ಮಹಾಬಲೇಶ್ವರ ಹಾಸಿನಾಳ, ಇತರರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಸಭಾಪತಿ ಬಸವರಾಜ ಹೊರಟ್ಟಿ ಅಭಿಮತ
  • ಪಂ. ಬಿ.ಎಸ್​ ಮಠರಿಗೆ ಡಾ. ಪುಟ್ಟರಾಜ ಸಮ್ಮಾನ
ಹುಬ್ಬಳ್ಳಿ: puttaraj gawayi ಜಂಜಾಟದ ಇಂದಿನ ದಿನಮಾನದಲ್ಲಿ ಸಂಗೀತದಂತಹ ದೇಶಿಯ ಕಲೆಗೆ ಪ್ರಾಶಸ್ತ್ಯ ಕೊಡುವುದರಿಂದ ಮನಸ್ಸಿಗೆ ಒಂದಿಷ್ಟು ನೆಮ್ಮದಿ, ಆನಂದ ಸಿಗುತ್ತದೆ. ಶಾಸ್ತ್ರೀಯ ಸಂಗೀತ ತನ್ನದೇ ಆದ ಮಹತ್ವ ಇಂದಿಗೂ ಉಳಿಸಿಕೊಂಡು ಬಂದಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಗದುಗಿನ ವೀರೇಶ್ವರ ಪುಣ್ಯಾಶ್ರಮದ ಡಾ. ಪುಟ್ಟರಾಜ ಗವಾಯಿಗಳ 115ನೇ ಜನ್ಮದಿನೋತ್ಸವ ಅಂಗವಾಗಿ ಧಾರವಾಡದ ಡಾ. ಪುಟ್ಟರಾಜ ಗವಾಯಿ ಪ್ರತಿಷ್ಠಾನ ಇಲ್ಲಿಯ ಸವಾಯಿ ಗಂಧರ್ವ ಹಾಲ್​ನಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ 2026ರ ಪುಟ್ಟರಾಜ ಸಮ್ಮಾನ ರಾಷ್ಟ್ರೀಯ ಪುರಸ್ಕಾರವನ್ನು ಹಿರಿಯ ವಯೋಲಿನ್​ ವಾದಕ ಪಂ. ಬಿ.ಎಸ್​. ಮಠ ಅವರಿಗೆ ಪ್ರದಾನ ಮಾಡಿ ಅವರು ಮಾತನಾಡಿದರು.
ಇಂತಹ ಸಂಗೀತ ಕಾರ್ಯಕ್ರಮಗಳಿಗೆ ಇಂದಿನ ಯುವ ಪೀಳಿಗೆ ಮಾತ್ರವಲ್ಲ ಅನೇಕ ಹಿರಿಯರಿಂದಲೂ ಸ್ಪಂದನೆ ಸಿಗದಿರುವುದು ಬೇಸರದ ಸಂಗತಿ. ಇಂದಿನ ಒತ್ತಡದ ಬದುಕಿಗೆ ಶಾಸ್ತ್ರೀಯ ಸಂಗಿತ ಪರಿಹಾರವಾಗಬಲ್ಲದು. ಮುಂಬರುವ ದಿನಗಳಲ್ಲಿ ಜೀವನ ಇನ್ನಷ್ಟು ಜಠಿಲಗೊಳ್ಳುತ್ತದೆ. ವಿಜ್ಞಾನ, ತಂತ್ರಜ್ಞಾನ ಎಷ್ಟೇ ಬೆಳೆದರೂ ಮಕ್ಕಳಿಗೆ ದೇಶಿಯ ಕಲೆಗಳಲ್ಲಿಯೂ ಅಭಿರುಚಿ ಬೆಳೆಸುವುದು ಅಗತ್ಯ ಎಂದು ಸಲಹೆ ನೀಡಿದರು.
ಪ್ರಶಸ್ವಿ ಸ್ವೀಕರಿಸಿದ ಪಂ. ಬಿ.ಎಸ್​. ಮಠ ಮಾತನಾಡಿದರು. ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪ್ರತಿಷ್ಠಾನದ ಅಧ್ಯಕ್ಷ ಮಹಾಬಲೇಶ್ವರ ಹಾಸಿನಾಳ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ಪಂ. ವೆಂಕಟೇಶಕುಮಾರ, ಪಿ.ಎಂ. ಪಾಟೀಲ, ಉದಯ ದೇಸಾಯಿ, ಮಜೇಥಿಯಾ ಫೌಂಡೇಷನ್ ಚೇರ್ಮನ್​ ಜಿತೇಂದ್ರ ಮಜೇಥಿಯಾ ಇತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net