PUC students ವ್ಯವಸ್ಥಿತ ಅಧ್ಯಯನದಿಂದ ಮಾತ್ರ ಸಾಧನೆ

PUC students ಹುಬ್ಬಳ್ಳಿಯ ಡಾ. ಆರ್​.ಬಿ. ಪಾಟೀಲ್​ ಮಹೇಶ ಕಾಲೇಜಿನ ಪ್ರಥಮ ಪಿಯು ಪ್ರಾರಂಭೋತ್ಸವ ಸಮಾರಂಭದಲ್ಲಿ ಡಿಡಿಪಿಐ ಉಮೇಶ ಬೊಮ್ಮಕ್ಕನವರ, ರಿಯಾಜ ಬಸರಿ, ಆರ್​.ಎನ್​. ದೇಸಾಯಿ, ರಮೇಶ ಹೊಂಬಾಳಿ ಇತರರು ಇದ್ದರು.
PUC students ಹುಬ್ಬಳ್ಳಿಯ ಡಾ. ಆರ್​.ಬಿ. ಪಾಟೀಲ್​ ಮಹೇಶ ಕಾಲೇಜಿನ ಪ್ರಥಮ ಪಿಯು ಪ್ರಾರಂಭೋತ್ಸವ ಸಮಾರಂಭದಲ್ಲಿ ಡಿಡಿಪಿಐ ಉಮೇಶ ಬೊಮ್ಮಕ್ಕನವರ, ರಿಯಾಜ ಬಸರಿ, ಆರ್​.ಎನ್​. ದೇಸಾಯಿ, ರಮೇಶ ಹೊಂಬಾಳಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿಡಿಪಿಐ ಉಮೇಶ ಬೊಮ್ಮಕ್ಕನವರ ಅಭಿಮತ
  • ಮಹೇಶ ಕಾಲೇಜ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭ
ಹುಬ್ಬಳ್ಳಿ: PUC students ವಿದ್ಯಾರ್ಥಿಗಳು ಒತ್ತಡವನ್ನು ಅನುಭವಿಸದೇ ಸರಿಯಾದ ಮಾರ್ಗದರ್ಶನ ಪಡೆಯುವದರ ಮೂಲಕ ಯಶಸ್ಸು ಕಾಣಬೇಕು. ಸಾಧನೆಯ ಗುರಿಯನ್ನು ತಲುಪಲು ವ್ಯವಸ್ಥಿತ ಯೋಜನೆ ಅವಶ್ಯ ಎಂದು ಧಾರವಾಡ ಸಾರ್ವಜನಿಕ ಶಿಣ ಇಲಾಖೆ ಪ್ರಭಾರ ಉಪನಿರ್ದೇಶಕ ಉಮೇಶ ಬೊಮ್ಮಕ್ಕನವರ ಹೇಳಿದರು.
ಇಲ್ಲಿಯ ವಾಸವಿ ಮಹಲ್​ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಎನ್​.ಎಲ್​.ಇ. ಸಂಸ್ಥೆಯ ಡಾ. ಆರ್​.ಬಿ. ಪಾಟೀಲ ಮಹೇಶ ವಿಜ್ಞಾನ ಮಹಾವಿದ್ಯಾಲಯದ ಪ್ರಸಕ್ತ ಸಾಲಿನ ಪಿಯು ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿರಿಯ ವಿದ್ಯಾರ್ಥಿಗಳ ಸಾಧನೆಯು ಕಿರಿಯರಿಗೆ ಪ್ರೇರಣೆ ಆಗಲಿದೆ. ಸಾಧನೆಯು ಅವರ ಪಾಲಕರು, ಕಲಿಸಿದ ಗುರುಗಳು ಮತ್ತು ಕಾಲೇಜಿಗೂ ಹೆಮ್ಮೆ ತರಿಸುತ್ತದೆ ಎಂದರು.
ಕಾಲೇಜಿನ ಶೈಣಿಕ ಸಲಹೆಗಾರ ರಿಯಾಜ್​ ಬಸರಿ, ನಿರಂತರ ಪರಿಶ್ರಮ, ಪ್ರಾಮಾಣಿಕತೆಯಿಂದ ಓದಿದಾಗ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಎನ್​.ಎಲ್​.ಇ ಸಂಸ್ಥೆಯ ಗೌರವ ಕಾರ್ಯದರ್ಶಿ ಆರ್​.ಎನ್​. ದೇಸಾಯಿ, ವಿದ್ಯಾರ್ಥಿಗಳು ಅರಾಮದಾಯಕ ವಾತಾವರಣದಿಂದ ಹೊರ ಬಂದು ಪರಿಶ್ರಮದಿಂದ ಮತ್ತು ಜಾಣರಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಉಪ ಪ್ರಾಚಾರ್ಯ ರಮೇಶ ಹೊಂಬಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ಕ್ರೀಡೆ ಮತ್ತು ಸಾಂಸತಿಕ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ 65 ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು.
ಎನ್​.ಎಲ್​.ಇ ಸಂಸ್ಥೆಯ ಶಿವರಾಮ ಹೆಗಡೆ, ಡಾ. ಜಿ.ವಿ. ಜೋಶಿ ಶಾಲೆಯ ಜಂಟಿ ಕಾರ್ಯದರ್ಶಿ ಸದಾನಂದ ಕಾಮತ, ಶೈಕ್ಷಣಿಕ ಸಂಯೋಜಕ ವಿಜಯಕುಮಾರ ಪಾಟೀಲ್​ ಕುಲಕರ್ಣಿ ಉಪಸ್ಥಿತರಿದ್ದರು.
ಐ.ಎಸ್​. ಹಿರೇಮಠ ಅತಿಥಿಗಳನ್ನು ಪರಿಚಯಿಸಿದರು. ನೀಲ್​ ಪ್ರತಾಪನ್​ ಕಾರ್ಯಕ್ರಮ ನಿರೂಪಿಸಿದರು. ಆತ್ಮಾ ಸಿಂಧಗಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net