ಪ್ರೌಢ ಶಾಲೆಗಳಿಗೆ ಸ್ಥಾನಪಲ್ಲಟ ಕೈಬಿಡಲು ಸರ್ಕಾರಕ್ಕೆ ಆಗ್ರಹ
ಉಪನ್ಯಾಸಕರ ಸ್ವತಂತ್ರ ವೃಂದದ ಅಸ್ತಿತ್ವ ಮತ್ತು ಗೌರವವನ್ನು ರಕ್ಷಿಸಬೇಕು.
ಪಿಯು ಉಪನ್ಯಾಸಕರಿಗೆ ಪದವಿ ಕಾಲೇಜುಗಳಿಗೆ ಬಡ್ತಿ ನೀಡಬೇಕು.
ಹುಬ್ಬಳ್ಳಿ : protest
ಪಿಯು ಉಪನ್ಯಾಸಕರನ್ನು 9 ಮತ್ತು 10ನೇ ತರಗತಿಗಳಿಗೆ ಪಾಠ ಬೋಧಿಸಲು ಇದೇ ಜೂನ್ 18ರಂದು ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಗೆ ರಾಜ್ಯಾದ್ಯಂತ 5 ಲಕ್ಷಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿವೆ ಎಂದು ತಿಳಿಸಿದರು.
ಈ ಕರಡು ಅಧಿಸೂಚನೆ ಹಿಂಪಡೆಯಲು ಒಂದು ವಾರದ ಗಡವು ನೀಡಲಾಗಿದೆ. ಸರ್ಕಾರ ನಿರ್ದಿಷ್ಟ ಅವಧಿಯಲ್ಲಿ ಗಡವು ಹಿಂಪಡೆಯದೇ ಇದ್ದರೆ ಪ್ರತಿಭಟನೆ ನಡೆಸಲಾಗುವುದು. ಪ್ರತಿಭಟನೆಯ ದಿನ ಇನ್ನೂ ನಿಗದಿಯಾಗಿಲ್ಲ ಎಂದು ಹೇಳಿದರು.
ಪಿಯು ಉಪನ್ಯಾಸಕರಿಗೆ ಪದವಿ ಕಾಲೇಜುಗಳಿಗೆ ಬಡ್ತಿ ನೀಡಬೇಕು. ಅನೇಕ ಪಿಯು ಉಪನ್ಯಾಸಕರು ಪಿಎಚ್ಡಿ ಪಡೆದಿದ್ದಾರೆ.
ಆದರೆ, ಅವರನ್ನು ಪ್ರೌಢ ಶಾಲೆಗಳ ಬೋಧನೆಗೆ ನೇಮಕ ಮಾಡುವ ಮೂಲಕ ಹಿಂಬಡ್ತಿ ನೀಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ.
ಸರ್ಕಾರದ ಈ ಏಕಪಕ್ಷೀಯ ನಿರ್ಧಾರದ ಹಿಂದೆ ಶಿಕ್ಷಣ ಪದ್ಧತಿಯನ್ನು ದುರ್ಬಲಗೊಳಿಸುವ ಹಾಗೂ ವಿದ್ಯಾರ್ಥಿಗಳ ಭವಿಷ್ಯವನ್ನು ಅತಂತ್ರಕ್ಕೆ ತಳ್ಳುವ ಹುನ್ನಾರ ಅಡಗಿದೆ ಎಂದು ಆರೋಪಿಸಿದರು.
ಪದವಿ ಪೂರ್ವ ವದಿಯಾರ್ಥಿಗಳಿಗೆ ಬೋಧನೆ ಮಾಡುವುದಕ್ಕಾಗಿಯೇ ವಿಶೇಷವಾಗಿ ನೇಮಕಗೊಂಡಿರುವ ಉಪನ್ಯಾಸಕರು ಗೆಜೆಟೆಡ್ ಗ್ರುಪ್ ಬಿ ಶೈಕ್ಷಣಿಕ ವೃಂದದವರಾಗಿದ್ದಾರೆ. ಅವರನ್ನು 9 ಮತ್ತು 10ನೇ ತರಗತಿ ಬೋಧನೆಗೆ ನೇಮಕಗೊಳಿಸುವುದರಿಂದ ಪದವಿ ಪೂರ್ವ ಶಿಕ್ಷಣದ ಸ್ವತಂತ್ರ ಅಸ್ತಿತ್ವ ಹಾಳು ಮಾಡಿದಂತಾಗುತ್ತದೆ ಎಂದರು.
ಪಿಯು ವಿದ್ಯಾರ್ಥಿಗಳ ನೀಟ್, ಜೆಇಇ, ಸಿಇಟಿ, ಸಿಯುಸಿಇಟಿ, ಎನ್ಡಿಎ, ಕ್ಲಾಟ್, ಒಲಿಂಪಿಯಾಡ್ ಸೇರಿದಂತೆ ವಿವಿಧ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ಈ ಉಪನ್ಯಾಸಕರು ಪ್ರಮುಖ ಪಾತ್ರ ವಹಿಸುತ್ತಾರೆ.
ಉಪನ್ಯಾಸಕರನ್ನು ತಮ್ಮ ಮೂಲ ಕರ್ತವ್ಯದಿಂದ ಬೇರೆಡೆಗೆ ಸ್ಥಾನಪಲ್ಲಟಗೊಳಿಸಿದರೆ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬೆಂಬಲ, ಮಾರ್ಗದರ್ಶನ ಹಾಗೂ ಪರೀಕ್ಷೆ ಸಿದ್ಧತೆ ಕುಂಠಿತಗೊಳ್ಳುತ್ತದೆ ಎಂದು ಹೇಳಿದರು.
ಕರ್ನಾಟಕ ಸಾಮಾನ್ಯ ಸೇವೆಗಳು ಕರಡು ನಿಯಮಗಳು-2026 ಅನ್ನು ಸರ್ಕಾರ ತಕ್ಷಣ ಹಿಂಪಡೆಯಬೇಕು. ಪದವಿ ಪೂರ್ವ ಉಪನ್ಯಾಸಕರ ಸ್ವತಂತ್ರ ವೃಂದದ ಅಸ್ತಿತ್ವ ಮತ್ತು ಗೌರವವನ್ನು ರಕ್ಷಿಸಬೇಕು.
ಪದವಿ ಪುರ್ವ ಶಿಕ್ಷಣದಲ್ಲಿನ ಶೈಕ್ಷಣಿಕ ಶ್ರೇಷ್ಠತೆ ಮತ್ತು ವಿಷಯ ಪರಿಣಿತಿ ಕಾಪಾಡಬೇಕು. ವಿಷಯವನ್ನು ಸಮಗ್ರವಾಗಿ ಅಧ್ಯಯನ ಮಾಡಲು ಉನ್ನತ ಮಟ್ಟದ ತಜ್ಞರ ಸಮಿತಿ ರಚಿಸಬೇಕು.
ಸರ್ಕಾರ, ಉಪನ್ಯಾಸಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ತಜ್ಞರುನ್ನು ಒಳಗೊಂಡ ತ್ರಿಪಕ್ಷೀಯ ಸಮಾಲೋನಚೆ ರಚಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಪ್ರಾಚಾರ್ಯರ ಸಂಘದ ಪ್ರಧಾನ ಕಾರ್ಯದರ್ಶಿ ಸಂದೀಪ ಬೂದಿಹಾಳ, ಡಾ. ಮಲ್ಲಿಕಾರ್ಜುನ ಅಂಗಡಿ, ಗಾಯತ್ರಿ ಹುದ್ದಾರ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.