ಉಣಕಲ್ಲ ನಿಲ್ದಾಣದಲ್ಲಿ ರೈಲುಗಳಿಗೆ ನಿಲುಗಡೆ ಸೌಲಭ್ಯ ಒದಗಿಸಿ train
train ಉಣಕಲ್ಲ ರೈಲು ನಿಲ್ದಾಣ.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಎಸ್ಎಸ್ಎಸ್ ಹುಬ್ಬಳ್ಳಿ ಸ್ಟೇಶನ್ನಲ್ಲಿ ಒತ್ತಡ ಕಡಿಮೆಗೊಳಿಸಿ.
ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದಾಗಿ ಪ್ರಯಾಣಿಕರಿಗೆ ಆಗುತ್ತಿರುವ ಸಮಸ್ಯೆ ತಪ್ಪಿಸಿ.
ಡಿಆರ್ಎಂಗೆ ಮನವಿ ಸಲ್ಲಿಸಿದ ಝುಡ್ಆರ್ಯುುಸಿಸಿ ಸದಸ್ಯ ವಿಶ್ವನಾಥ ಪಾಟೀಲ.
ಈ ಕುರಿತು ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್ಎಂ)ರಿಗೆ ಮನವಿ ಸಲ್ಲಿಸಿರುವ ವಿಶ್ವನಾಥ ಪಾಟೀಲ, ಕೆಎಸ್ಆರ್ ಬೆಂಗಳೂರು ರೈಲು ನಿಲ್ದಾಣ ಯಶವಂತಪುರಕ್ಕೆ ಸಮೀಪ ಇದ್ದರೂ, ಯಶವಂತಪುರ ನಿಲ್ಲಾಣದಲ್ಲಿ ಎಲ್ಲ ರೈಲುಗಳು ಕೆಲ ಸಮಯ ನಿಲುಗಡೆಗೊಳ್ಳುತ್ತವೆ.
ಇದರಿಂದಾಗಿ ಅನೇಕ ಪ್ರಯಾಣಿಕರು ಬೆಂಗಳೂರಿಗೆ ಹೋಗದೇ, ಯಶವಂತಪುರದಲ್ಲಿಯೇ ರೈಲು ಹತ್ತುತ್ತಾರೆ. ಅದೇ ರೀತಿ, ಉಣಕಲ್ಲ ನಿಲ್ದಾಣದಲ್ಲಿಯೂ ನಿಲುಗಡೆ ಸೌಲಭ್ಯ ಒದಗಿಸುವಂತೆ ಮನವಿ ಮಾಡಿದ್ದಾರೆ.
ಹುಬ್ಬಳ್ಳಿ ನಗರ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದೆ. ಜನಸಂಖ್ಯೆ ಜತೆಗೆ ವಾಹನಗಳ ಸಂಖ್ಯೆಯೂ ಏರಿಕೆಯಾಗುತ್ತದೆ. ಹೀಗಾಗಿ, ನಿಗದಿತ ಅವಧಿಯಲ್ಲಿ ಹುಬ್ಬಳ್ಳಿ ರೈಲು ನಿಲ್ದಾಣ ತಲುಪುವುದು ಕಷ್ಟಸಾಧ್ಯವಾಗಿದೆ. ಎಸ್ಎಸ್ಎಸ್ ಹುಬ್ಬಳ್ಳಿ ರೈಲು ನಿಲ್ದಾಣದಿಂದ ಕೇವಲ 3 ಕಿಮೀ ಅಂತರದಲ್ಲಿ ಉಣಕಲ್ಲ ರೈಲು ನಿಲ್ದಾಣ ಇದೆ.
ಈ ನಿಲ್ದಾಣದಲ್ಲಿ ಎಲ್ಲ ರೈಲುಗಳಿಗೆ ಕೇವಲ 2 ನಿಮಿಷಗಳ ನಿಲುಗಡೆ ಸೌಲಭ್ಯ ಒದಗಿಸಿದರೆ, ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣ ಮೇಲಿನ ಒತ್ತಡ ಸಾಕಷ್ಟು ಕಡಿಮೆಯಾಗುತ್ತದೆ.
ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ವಲಯ ರೈಲು ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ ಈ ಕುರಿತು ಪ್ರಸ್ತಾಪ ಮಾಡಿದರೂ, ಅಧಿಕಾರಿಗಳು ಈ ಬೇಡಿಕೆ ವಾಣಿಜ್ಯ ದೃಷ್ಟಿಯಿಂದ ಸರಿಯಾಗಿ ಇಲ್ಲವೆಂಬ ಅಭಿಪ್ರಾಯವನ್ನು ಅಧಿಕಾರಿಗಳು ವ್ಯಕ್ತಪಡಿಸಿದರೆಂದು ವಿಶ್ವನಾಥ ಪಾಟೀಲ ಅವರು ಮನವಿ ಪತ್ರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದಾಗಿ ಸಮಯಕ್ಕೆ ಸರಿಯಾಗಿ ರೈಲು ನಿಲ್ದಾಣ ತಲುಪುವುದು ಸಮಸ್ಯೆಯಾಗಿದೆ. ಈ ಮಧ್ಯೆ ನಿಲ್ದಾಣದ 6 ಮತ್ತು 7ನೇ ಪ್ಲಾಟ್ಫಾಮ್ರ್ ಮುಖ್ಯ ದ್ವಾರದಿಂದ ಬಹಳ ದೂರದಲ್ಲಿದೆ. ಹೀಗಾಗಿ, ಪ್ರಯಾಣಿಕರು ಕಷ್ಟಪಟ್ಟು ನಿಲ್ದಾಣ ತಲುಪುವುದು ಹಾಗೂ ಈ ಎರಡೂ ಪ್ಲಾಟ್ಫಾಮ್ರ್ ತಲುಪುವುದು ಕಷ್ಟಸಾಧ್ಯವಾಗಿದೆ.
ವಿದ್ಯಾನಗರ, ಬೈರಿದೇವರಕೊಪ್ಪ, ಶಿರೂರ ಪಾರ್ಕ್, ಉಣಕಲ್, ರಾಜನಗರ ಸೇರಿದಂತೆ ಸುತ್ತಲಿನ ಪ್ರಮುಖ ಬಡಾವಣೆಗಳಲ್ಲಿನ ಪ್ರಯಾಣಿಕರಿಗೆ ಉಣಕಲ್ಲ ರೈಲು ನಿಲ್ದಾಣ ಸಮೀಪದಲ್ಲಿದೆ.
ಈ ನಿಲ್ದಾಣಕ್ಕೆ ರಸ್ತೆ ಸಂಪರ್ಕವೂ ಉತ್ತಮವಾಗಿದೆ. ಸದ್ಯ ಉಣಕಲ್ಲ ನಿಲ್ದಾಣದಲ್ಲಿ ಕೇವಲ ಎರಡು ರೈಲುಗಳಿಗೆ ಮಾತ್ರ ನಿಲುಗಡೆ ಸೌಲಭ್ಯ ಒದಗಿಸಲಾಗಿದೆ.
ಇನ್ನೂ ಹೆಚ್ಚಿನ ರೈಲುಗಳಿಗೆ ಇಲ್ಲಿ ನಿಲುಗಡೆ ಸೌಲಭ್ಯ ಒದಗಿಸಿದಲ್ಲಿ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ವಿಶ್ವನಾಥ ಪಾಟೀಲ ಅವರು ಆಗ್ರಹಿಸಿದ್ದಾರೆ.
ಎಸ್ಎಸ್ಎಸ್ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಬಹುತೇಕ ರೈಲುಗಳಿಗೆ 10 ನಿಮಿಷಗಳ ನಿಲುಗಡೆ ಸೌಲಭ್ಯ ಒದಗಿಸಲಾಗಿದೆ.
ಇದರ ಬದಲು, ಉಣಕಲ್ಲ ನಿಲ್ದಾಣದಲ್ಲಿ ರೈಲುಗಳಿಗೆ 2 ನಿಮಿಷ ನಿಲುಗಡೆ ಸೌಲಭ್ಯ ಒದಗಿಸಿದರೆ, ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಲ್ಲಿ 8 ನಿಮಿಷ ನಿಲುಗಡೆ ಸೌಲಭ್ಯ ಒದಗಿಸಬಹುದು.
ಇದರಿಂದಾಗಿ ಹುಬ್ಬಳ್ಳಿ ನಿಲ್ದಾಣದಲ್ಲಿನ ಒತ್ತಡವೂ ಕಡಿಮೆಯಾದಂತಾಗುತ್ತದೆ ಎಂದು ಸಲಹೆ ನೀಡಿದ್ದಾರೆ.
ಈ ಕ್ರಮದಿಂದಾಗಿ ರೈಲುಗಳ ಸಂಚಾರದ ಸಮಯದಲ್ಲಿಯೂ ಯಾವುದೇ ಬದಲಾವಣೆ ಆಗುವುದಿಲ್ಲ. ಪ್ರಯಾಣಿಕರ ಹಿತದೃಷ್ಟಿಯಿಂದಾಗಿ ಈ ಸಲಹೆಯನ್ನು ಪರಿಗಣಿಸುವ ಮೂಲಕ ಎಲ್ಲ ರೈಲುಗಳಿಗೆ ಉಣಕಲ್ಲ ನಿಲ್ದಾಣದಲ್ಲಿ ಕನಿಷ್ಠ 2 ನಿಮಿಷಗಳ ನಿಲುಗಡೆ ಸೌಲಭ್ಯ ಒದಗಿಸುವಂತೆ ಆಗ್ರಹಿಸಿದ್ದಾರೆ.