ಸೆಂಟ್ರಲ್ ಕ್ಷೇತ್ರದ ಬರಪೀಡಿತ ಪ್ರದೇಶಗಳಿಗೆ ಶಾಸಕ ಮಹೇಶ ಟೆಂಗಿನಕಾಯಿ ಭೇಟಿ
ರೈತರಿಗೆ ಬೆಳೆಪರಿಹಾರವನ್ನು ಸಕಾಲಕ್ಕೆ ಒದಗಿಸುವ ಕೆಲಸ ಮಾಡಬೇಕು
ರೈತರು ಸಂಕಷ್ಟದಲ್ಲಿ ಇದ್ದಾರೆ.
ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಬೈರಿದೇವರಕೊಪ್ಪ, ಉಣಕಲ್ಲ, ಗೋಪನಕೊಪ್ಪ, ಕೇಶ್ವಾಪುರ ಹಾಗೂ ಇನ್ನಿತರೆಡೆಯ ಬರಪೀಡಿತ ಕೃಷಿ ಭೂಮಿಗಳಿಗೆ ರೈತರು ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಬೆಳೆಗಳ ಪರಿಶೀಲನೆ ನಡೆಸಿದ ನಂತರ ಅವರು ಮಾತನಾಡಿದರು.
ಮಳೆ ಇಲ್ಲದೇ ಹುಬ್ಬಳ್ಳಿ ತಾಲೂಕಿನಲ್ಲಿ ಬರಗಾಲದ ಛಾಯೆ ಆವರಿಸಿದೆ. ರೈತರು ಸಂಕಷ್ಟದಲ್ಲಿ ಇದ್ದಾರೆ. ಅಧಿಕಾರಿಗಳು ರೈತರಿಗೆ ಬೆಳೆಪರಿಹಾರವನ್ನು ಸಕಾಲಕ್ಕೆ ಒದಗಿಸುವ ಕೆಲಸ ಮಾಡಬೇಕು ಎಂದರು.
ಸೆಂಟ್ರಲ್ ಕ್ಷೇತ್ರದ ರೈತರಿಗೆ ಪ್ರತಿ ಎಕರೆಗೆ ಬೆಳೆ ಹಾನಿ ಪರಿಹಾರ ರೂಪದಲ್ಲಿ ತಲಾ 25 ಸಾವಿರ ರೂ.ಗಳನ್ನು ತಕ್ಷಣ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದರು.